• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಛಾವಣಿ ಸೌರಶಕ್ತಿ ಘಟಕ ಸ್ಥಾಪನೆ ಬಲು ಸುಲಭ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

|

ಬೆಂಗಳೂರು, ಅ.4: ಇತ್ತೀಚಿನ ದಿನಗಳಲ್ಲಿ ಸೋಲಾರ್ ಬಳಕೆ ಹೆಚ್ಚಾಗುತ್ತಿದೆ, ಮೇಲ್ಛಾವಣಿ ಸೌರಶಕ್ತಿ ಘಟಕಗಳನ್ನು ಸ್ಥಾಪಸಲು ಬೆಸ್ಕಾಂ ಹೆಚ್ಚು ಉತ್ತೇಜನ ನೀಡುತ್ತಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ಅವರೇ ಬಂದು ಮೇಲ್ಛಾವಣಿ ಘಟಕಗಳನ್ನು ಅಳವಡಿಸುತ್ತಾರೆ. ವಿದ್ಯುತ್ ನಷ್ಟ ಕಡಿಮೆ ಮಾಡುವುದು, ಸ್ವಚ್ಛ ಇಂಧನ ಬಳಕೆ ಸಲುವಾಗಿ ಸೌರಶಕ್ತಿ ವಿದ್ಯುತ್ ಘಟಕಗಳ ಸ್ಥಾಪನೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ.

ಬೆಂಗಳೂರಲ್ಲಿ ಶೀಘ್ರ ಸೋಲಾರ್ ರೀಚಾರ್ಜಿಂಗ್ ಸ್ಟೇಷನ್

ಭಾರತ ಸರ್ಕಾರ 2022ರ ವೇಳೆಗೆ ದೇಶಾದ್ಯಂತ 100 ಗಿಗಾ ವ್ಯಾಟ್ ಸರಶಕ್ತಿ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದೆ ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಸೌರಶಕ್ತಿ ಸಂಪನ್ಮೂಲ ಸಮೃದ್ಧಿಯಾಗಿದ್ದು, ವಾರ್ಷಿಕ 240-300 ಬಿಸಿಲಿನ ದಿನಗಳನ್ನು ಕಾಣುತ್ತಿದ್ದೇವೆ, ಹಾಗಾಗಿ 2400 ಮೆಗಾ ವ್ಯಾಟ್ ನಷ್ಟು ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭ

ಜತೆಗೆ ಗ್ರಾಹಕರ ತಿಂಗಳ ಬಿಲ್ ನಲ್ಲಿ ಕಡಿತ ಹಾಗೂ ಉತ್ಪಾದಿಸಿದ ವಿದ್ಯುತ್ ನ್ನು ಖರೀದಿಸುವ ಮೂಲಕ ಗ್ರಾಹಕರನ್ನು ಆರ್ಥಿಕವಾಗಿ ಬಲ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಬಾಹ್ಯಾಕಾಶದ ಚಿತ್ರ ಕ್ಲಿಕ್ಕಿಸಿ ರವಾನಿಸಿದ ನಾಸಾದ ಸೋಲಾರ್ ಪ್ರೋಬ್ ನೌಕೆ

ಹಾಗಾಗಿ ಮೇಲ್ಛಾವಣಿ ಸೌರಶಕ್ತಿ ಘಟಕಗಳನ್ನು ಉತ್ತೇಜಿಸಲು ಬೆಸ್ಕಾಂ ಮುಂದಾಗಿದ್ದು, ಘಟಕ ಅಳವಡಿಕೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಮೂಲಕ ಬಳಕೆದಾರರ ಸ್ನೇಹಿಯಾಗಲಿದೆ.

English summary
To promote roof solar power unit installation, BESCOM has made more costumer friendly application process through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X