ಬೆಂಗಳೂರು: ಕಳ್ಳನ ಕಿರುಬೆರಳ ಸಮೇತ ಠಾಣೆಗೆ ಬಂದು ದೂರು ನೀಡಿದ ಮಹಿಳೆ!
ಬೆಂಗಳೂರು, ಸೆಪ್ಟೆಂಬರ್ 15: ಕಳ್ಳನ ಕಿರುಬೆರಳನ್ನು ಠಾಣೆಗೆ ತೆಗೆದುಕೊಂಡು ಬಂದು ಮಹಿಳೆಯೊಬ್ಬರು ದೂರು ನೀಡಿದ ಘಟನೆ ನಗರದಲ್ಲಿ ನಡೆದಿದೆ.
ಎಚ್‌ಎಎಲ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯೊಬ್ಬರು ಅರ್ಧ ತುಂಡಾದ ಕೈಬೆರಳನ್ನು ತಂದಿದ್ದರು. ಇದನ್ನು ನೋಡಿದ ಪೊಲೀಸರೇ ಅವಾಕ್ಕಾದರು. ಮಹಿಳೆಯ ಧೈರ್ಯ ಕಂಡು ಆಕೆಗೆ ಶಹಬ್ಬಾಸ್ ಕೂಡ ನೀಡಿದರು.
ನಡೆದದ್ದು ಏನು?
ಎಇಸಿಎಸ್ ಬಡಾವಣೆ ನಿವಾಸಿ ನಾಗೇಶ್ವರಿ ಅವರು ಸೆಪ್ಟೆಂಬರ್ 13ರಂದು ಮನೆ ಎದುರು ಫೋನಿನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಸರಗಳ್ಳನೊಬ್ಬ ಬೈಕಿನಲ್ಲಿ ಬಂದು ನಾಗೇಶ್ವರಿ ಅವರ ಸರಕ್ಕೆ ಕೈ ಹಾಕಿದ್ದಾನೆ ಕೀಳಲು ಯತ್ನಿಸಿದ್ದಾನೆ.

ನಾಗೇಶ್ವರಿ ಸಹ ಮಾಂಗಲ್ಯ ಸರವನ್ನು ಹಿಡಿದುಕೊಂಡು ತಮ್ಮತ್ತ ಎಳೆದುಕೊಂಡಿದ್ದಾರೆ. ನಾಗೇಶ್ವರಿ ಅವರ ಎಳೆದ ರಭಸಕ್ಕೆ ಕಳ್ಳನ ಬಲಗೈ ಕಿರುಬೆರಳು ತುಂಡಾಗಿ ಕೆಳಗೆ ಬಿದ್ದಿದೆ. ಆದರೆ ದುರಾದೃಷ್ಟವಶಾತ್ ಮಾಂಗಲ್ಯ ಸರ ಕಳ್ಳನ ಪಾಲಾಗಿದೆ.
ಅದೇ ಕಿರುಬೆರಳನ್ನು ಎಚ್‌ಎಎಲ್ ಪೊಲೀಸ್ ಠಾಣೆಗೆ ತಂದು ದಿಟ್ಟ ಮಹಿಳೆ ನಾಗೇಶ್ವರಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರು ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬಲಗೈ ಬೆರಳು ಕಳೆದುಕೊಂಡಿರುವ ವ್ಯಕ್ತಿಯ ಹುಡುವುದು ಕಷ್ಟವಾಗಲಾರದು.












Click it and Unblock the Notifications