Namma Metro Yellow Line: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಕ್ಕೆ ಮುಹೂರ್ತ ನಿಗದಿ; ಮಾಹಿತಿ, ವಿವರ

ಐಟಿ ಉದ್ಯೋಗಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 8ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವುದು ಬಹುತೇಕ ಖಚಿತವಾಗಿದ್ದು, ಕನಿಷ್ಠ ಎಂಟು ರೈಲುಗಳು, 15 ನಿಮಿಷಗಳಿಗೊಮ್ಮೆ ಸಂಚರಿಸಲಿವೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರದ ಬಗ್ಗೆ ಮಾಹಿತಿ ಕೊಟ್ಟಿದೆ. ಈ ಮೊದಲು ಆರು ಅಥವಾ ಏಳು ರೈಲುಗಳು 20 ನಿಮಿಷಗಳಿಗೊಮ್ಮೆ ಚಲಿಸುತ್ತದೆ ಎಂದು ಹೇಳಲಾಗಿತ್ತು, ಈಗ ಎಂಟು ರೈಲುಗಳು ಚಲಿಸುವುದರಿಂದ ಕಾಯುವ ಸಮಯ ಐದು ನಿಮಿಷ ಕಡಿಮೆಯಾದಂತಾಗಿದೆ.

Bengaluru s Yellow Line Metro to Begin Operations in December

ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿ ಪ್ರಕಾರ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ ಹಳದಿ ಮಾರ್ಗದಲ್ಲಿ ಪ್ರಮುಖ ಸಿವಿಲ್ ಮತ್ತು ಸಿಸ್ಟಮ್ಸ್ ಕಾಮಗಾರಿಗಳು ಪೂರ್ಣಗೊಂಡಿವೆ. 19.15 ಕಿಲೋ ಮೀಟರ್ ಮಾರ್ಗದಲ್ಲಿ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಒಟ್ಟು 16 ನಿಲ್ದಾಣಗನ್ನು ನಿರ್ಮಿಸಲಾಗಿದೆ.

ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ

ಜಯದೇವ ಆಸ್ಪತ್ರೆ ನಿಲ್ದಾಣವು, 39 ಮೀಟರ್ ಎತ್ತರದ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣವು ಇಂಟರ್ ಚೇಂಜ್ ಸ್ಟೇಷನ್ ಆಗಲಿದೆ. ಇದು ಅಂಡರ್‌ಪಾಸ್, ರಸ್ತೆ, ಫ್ಲೈಓವರ್, ಹಳದಿ ಲೈನ್ ಪ್ಲಾಟ್‌ಫಾರ್ಮ್, ಕಾನ್ಕೋರ್ಸ್ ಮತ್ತು ಪಿಂಕ್ ಲೈನ್ ಪ್ಲಾಟ್‌ಫಾರ್ಮ್ ಸೇರಿ ಆರು ಹಂತಗಳನ್ನು ಒಳಗೊಂಡಿದೆ.

ಪ್ರಾಯೋಗಿಕ ಸಂಚಾರ

ಇದೇ ವರ್ಷ ಫೆಬ್ರವರಿಯಲ್ಲಿ ಚೀನಾದಿಂದ ಆಗಮಿಸಿರುವ ಚಾಲಕ ರಹಿತ ಮೆಟ್ರೋ ರೈಲು ಹಳದಿ ಮಾರ್ಗದಲ್ಲಿ ಜೂನ್ 13ರಂದು ಪ್ರಾಯೋಗಿಕ ಸಂಚಾರ ನಡೆಸಿದೆ. ಇದು ಆರು ಕೋಚ್‌ಗಳ ರೈಲು ಆಗಿದ್ದು, ಉಳಿದ ರೈಲುಗಳು ಶೀಘ್ರದಲ್ಲೇ ಬೆಂಗಳೂರಿಗೆ ಬರಲಿವೆ.

ಆಸಿಲೇಷನ್ ಟ್ರಯಲ್ಸ್ ಮತ್ತು ಸುರಕ್ಷತಾ ಕ್ಲಿಯರೆನ್ಸ್ ಸೇರಿದಂತೆ ಎಲ್ಲಾ ಪ್ರಾಯೋಗಿಕ ಸಂಚಾರಗಳು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕನಿಷ್ಠ 6 ರೈಲುಗಳಿದ್ದರೆ ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗಬಹುದು.

36 ರೈಲುಗಳ ಪೂರೈಕೆ

ಚೀನಾದ ಸಿಆರ್‌ಆರ್‌ಸಿ ನಂಜಿಂಗ್ ಪುಹೆನ್ ಕೋ ಲಿ. (CRRC Nanjing Puzhen Co Ltd) 216 ಕೋಚ್‌ಗಳನ್ನು ಒಳಗೊಂಡ 36 ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಪೂರೈಕೆ ಮಾಡಲಿದೆ. ಇದು 1,578 ಕೋಟಿ ರೂಪಾಯಿಗಳ ಒಪ್ಪಂದವಾಗಿದೆ. ಇದರಲ್ಲಿ 12 ಕೋಚ್‌ಗಳು ಚೀನಾದಲ್ಲಿ ತಯಾರಾದರೆ ಉಳಿದ ಕೋಚ್‌ಗಳು ಸಿಆರ್‌ಆರ್‌ಸಿಯ ಭಾರತೀಯ ಪಾಲುದಾರ, ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ತಯಾರಾಗಲಿವೆ. ಮೇ 18ರಂದು ಟಿಆರ್‌ಎಸ್‌ಎಲ್ ತಯಾರಿಕೆಯನ್ನು ಆರಂಭಿಸಿದೆ.

ಟಿಆರ್‌ಎಸ್‌ಎಲ್‌ನಿಂದ ಆರು ಬೋಗಿಗಳ ಮೊದಲ ರೈಲು ಆಗಸ್ಟ್ 10 ಅಥವಾ 15 ರೊಳಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಹೇಳಿರುವುದಾಗಿ ಡಿಎಚ್‌ ವರದಿ ಮಾಡಿದೆ.

ಒಪ್ಪಂದದ ಪ್ರಕಾರ, ಆರಂಭಿಕ ರೈಲಯಗಳ ವಿತರಣೆ ಬಳಿಕ ಸಿಆರ್‌ಆರ್‌ಸಿ-ಟಿಆರ್‌ಎಸ್‌ಎಲ್ ಪ್ರತಿ ತಿಂಗಳು ಎರಡು ರೈಲುಗಳನ್ನು ಪೂರೈಕೆ ಮಾಡುತ್ತದೆ. ಈ ಲೆಕ್ಕಾಚಾರದ ಮೇಲೆ ಡಿಸೆಂಬರ್ ವೇಳೆಗೆ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲು 8 ರೈಲುಗಳು ಸಜ್ಜಾಗಲಿವೆ.

ಟ್ರಾಫಿಕ್‌ ಸಮಸ್ಯೆ ನಿವಾರಣೆ

ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ನಗರದ ಟ್ರಾಫಿಕ್ ಸಮಸ್ಯೆಗೆ ಕಡಿಮೆಯಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಪ್ರಮುಖ ಐಟಿ ಕಂಪನಿಗಳಿಗೆ ಈ ಮಾರ್ಗ ಸಂಚಾರ ವ್ಯವಸ್ಥೆ ಕಲ್ಪಿಸಲಿದ್ದು, ರಸ್ತೆ ಸಂಚಾರದ ಮೇಲಿನ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+