Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಸ್ಥಳದ ಬಗ್ಗೆ ಮತ್ತೊಂದು ಅಪ್ಡೇಟ್

Bengaluru Second Airport: ಬೆಂಗಳೂರಿನ ಬಳಿ ಎರಡನೇ ವಿಮಾನ ನಿಲ್ದಾಣಕ್ಕೆ ಈಗಾಗಲೇ ಹಲವು ಜಾಗಗಳನ್ನು ಗುರುತಿಸಲಾಗಿದೆ. ಅದರಲ್ಲೂ ದಾಬಾಸ್‌ ಪೇಟೆ ಹಾಗೂ ನೆಲಮಂಗಲದ ಬಳಿ ನಿರ್ಮಾಣ ಮಾಡಬೇಕೆನ್ನುವ ಚರ್ಚೆಗಳು ಇದೀಗ ಜೋರಾಗಿ ನಡೆಯುತ್ತಿದೆ. ಇನ್ನು ಈ ಬಗ್ಗೆ ಮಾಹಿತಿ ತಿಳಿದ ನೆಲಮಂಗಲದ ರೈತರು ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಲಮಂಗಲದ ಬಳಿ ಫಲವತ್ತಾದ ಕೃಷಿ ಭೂಮಿಯಲ್ಲಿ ನಿರ್ಮಿಸಿದರೆ ರೈತರನ್ನು ಒಕ್ಕಲೆಬ್ಬಿಸಬೇಡಿ ಎಂದು ಹೋರಾಟ ಮಾಡಲು ರೈತ ಮುಖಂಡರು ಮುಂದಾಗಿದ್ದಾರೆ. ಈ ಬಗ್ಗೆ ಡಿಸೆಂಬರ್ 5ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

Bengaluru s Second Airport Another Update on Location Know details

ನೆಲಮಂಗಲ-ಕುಣಿಗಲ್‌ ನಡುವಿನ ಯಂಟಗನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ನಡುವಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದು, ಈಗಗಾಲೇ ವಿವಿಧ ಹಂತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ, ಹಲವು ಕಡೆಗಳಲ್ಲಿ ಎಸ್‌ಸಿಪಿ ಎಂಬ ಮಾರ್ಕ್‌ಗಳ ನಕ್ಷೆಯನ್ನು ಗಡಿಯಲ್ಲಿ ಗುರುತು ಮಾಡಿದ್ದು, ಡಿಜಿಟಲ್‌ ಸರ್ವೆ, ಹೆಲಿಕಾಪ್ಟರ್‌ ಮೂಲಕ ಸರ್ವೆ ಪ್ರಗತಿಯಲ್ಲಿದೆ. ಆದರೆ ಇದು ಈ ಭಾಗದ ರೈತರು, ಸಾರ್ವಜನಿಕರನ್ನು ರೊಚ್ಚಿಗೇಳುವಂತೆ ಮಾಡಿದೆ ಎಂದಿ ವಿಜಯ ಕರ್ನಾಟಕ ವರದಿ ಮಾಡಿದೆ.

ಯಾವತ್ತಿಗೂ ನಮ್ಮ ಭೂಮಿ ಭೂಸ್ವಾಧೀನಪಡಿಸಿಕೊಳ್ಳುವುದಿಲ್ಲ ಎನ್ನುವ ಭರವಸೆಯಲ್ಲಿ ಇಲ್ಲಿನ ರೈತರದ್ದಾಗಿತ್ತು. ಆದರೆ, ತಾಲೂಕಿನ ಬಹುಮುಖ್ಯ ಕೃಷಿ ಭೂಮಿಯಲ್ಲಿಯೇ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಹಾಗೂ ಅಧಿಕಾರಿಗಳ ಓಡಾಟ ಇಲ್ಲಿನ ರೈತರಿಗೆ ಆತಂಕ ಸೃಷ್ಟಿಸಿದೆ.

ಇದೀಗ ಪ್ರಸ್ತಾವನೆ ಹಂತದಲ್ಲಿರುವ ಸೋಲದೇವನಹಳ್ಳಿ ಸಮೀಪದ 6,000 ಹೆಕ್ಟೇರ್ ಪ್ರದೇಶದಲ್ಲಿ ತುಂಬಾ ಹಳ್ಳಿಗಳಿವೆ. ಇದೀಗ ತುಂಬಾ ವರ್ಷಗಳ ಹಿಂದಿನಿಂದಲೂ ಇರುವ ಗ್ರಾಮಗಳನ್ನು ಕೈತಪ್ಪಿ ಹೋಗುವ ಆತಂಕ ಇಲ್ಲಿನ ಜನರಲ್ಲಿ ಸೃಷ್ಟಿಯಾಗಿದೆ. ಈಗಗಾಲೇ 2ನೇ ವಿಮಾನ ನಿಲ್ದಾಣ ಸರ್ವೆ ಕಾರ್ಯದ ಹಿನ್ನೆಲೆ ಇಲ್ಲಿ ಹಾಕಿರುವ ನಕ್ಷೆಯ ಸಂಕೇತಗಳಿಂದ ಆತಂಕದಲ್ಲಿರುವ ಗ್ರಾಮಸ್ಥರು "ಒಂದು ವೇಳೆ ಪ್ರಾಣ ಕೊಟ್ಟೇವು ಹೊರತು ಯಾವುದೇ ಕಾರಣಕ್ಕೂ ಭೂಮಿಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ." ಎಂದು ಪಣತೊಟ್ಟು ನಂತಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಾಲೇ ನೆಲಮಂಗಲ ಶಾಸಕ ಎನ್‌.ಶ್ರೀನಿವಾಸ್‌ ಸೇರಿ ಕೆಲ ಶಾಸಕರು ನೆಲಮಂಗಲದ ಬದಲಾಗಿ ಬೆಂಗಳೂರು ದಕ್ಷಿಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಅಲ್ಲದೆ, ಡಿಸೆಂಬರ್ 5ರಂದು ಆಗಮಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಸೋಲದೇವನಹಳ್ಳಿ ಭಾಗದ ರೈತರು ನೆಲಮಂಗಲ ಸಮೀಪದಲ್ಲಿ ವಿಮಾನ ನಿಲ್ದಾಣ ಮಾಡದಂತೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ನೆಲಮಂಗಲ ಕ್ಷೇತ್ರದಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವನೆಯಲ್ಲಿ ಇರುವ ಜಾಗ ಫಲವತ್ತಾಗಿರುವ ಕೃಷಿ ಭೂಮಿಯಾಗಿದೆ. ಬಹುಪಾಲು ರೈತರು ಒಕ್ಕಲೆಬ್ಬಿಸುವ ಕೆಲಸ ಆಗಲಿದೆ. ನಮ್ಮ ರೈತರು ವಿಮಾನ ನಿಲ್ದಾಣದಲ್ಲಿಯೇ ಸಾಮಾನ್ಯರಂತೆ ಕೆಲಸ ಮಾಡಬಾರದು, ನಮ್ಮ ರೈತರ ಭವಿಷ್ಯಕ್ಕಾಗಿ ನಮಗೆ ವಿಮಾನ ನಿಲ್ದಾಣ ಬೇಡ ಎಂದು ಈಗಾಗಲೇ ಸಿಎಂ, ಡಿಸಿಎಂ ಬಳಿ ಕೇಳಿಕೊಂಡಿದ್ದೇನೆ ಎಂದು ನೆಲಮಂಗಲ ಶಾಸಕ ಎನ್‌. ಶ್ರೀನಿವಾಸ್‌ ರೈತರಿಗೆ ಅಭಯ ನೀಡುವ ಕೆಲಸವನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+