ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮೊದಲ ಬಾರಿಗೆ ಬರಲಿದೆ ಕ್ಯಾಷಿಯರ್ ರಹಿತ ಮಳಿಗೆ

By Nayana
|
Google Oneindia Kannada News

ಬೆಂಗಳೂರು, ಜೂನ್ 10: ಡೆಕಥ್ಲಾನ್ ಸದ್ಯದಲ್ಲೇ ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಕ್ಯಾಷಿಯರ್ ಇಲ್ಲದ ಮಳಿಗೆಯನ್ನು ಆರಂಭಿಸಲಿದೆ.

ಕ್ರೀಡಾ ಸಾಮಗ್ರಿಗಳ ಮಾರಾಟದಲ್ಲಿ ಹೆಸರು ಮಾಡಿರುವ ಡೆಕಥ್ಲಾನ್ ಮಳಿಗೆಗೆ ಗ್ರಾಹಕರು ಹೋಗಿ ಬೇಕಾದ ಸಾಮಗ್ರಿ ಆಯ್ಕೆ ಮಾಡಿಕೊಂಡು ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಿ ಹೊರ ನಡೆಯಬಹುದು. ಬಿಲ್ ಹಾಕಿಸಬೇಕಿಲ್ಲ, ಬಿಲ್ ಪಾವತಿಗೆ ಸರದಿಯಲ್ಲಿ ನಿಲ್ಲಬೇಕಿಲ್ಲ, ಇದು ಕೇವಲ ಆರಂಭವಷ್ಟೇ, ಇಂತಹ ಹಲವು ಮಾಲ್‌ ಗಳು ಮುಂದಿನ ದಿನದಲ್ಲಿ ತಲೆ ಎತ್ತಲಿದೆ.

ನಗದು ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್! ನಗದು ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!

ಈ ಹೊಸ ಕ್ಯಾಷಿಯರ್ ಇಲ್ಲದ ಮಳಿಗೆಗೆ ಡೆಕಥ್ಲಾನ್ ಫೈಜಿಟಲ್ ಎಂದು ಹೆಸರಿಟ್ಟಿದೆ, ಅದು ಕ್ರೀಡಾ ಸಾಮಗ್ರಿಗಳ ಮಳಿಗೆ ಆಗಿರುವುದರಿಂದ ಫಿಸಿಕಲ್ ಪದ ಹಾಗೂ ಡಿಜಿಟಲ್ ಪಾವತಿ, ಎರಡೂ ಪದಗಳನ್ನು ಒಟ್ಟುಗೂಡಿಸಿ ಫೈಡಿಜಿಟಲ್ ಎಂದು ಕರೆಯಲಾಗುತ್ತದೆ. ವಿದೇಶಗಳಲ್ಲಿರುವ ರೀತಿಯಲ್ಲಿ ಸ್ವಯಂ ಚೆಕ್ ಓಟ್ ಮಳಿಗೆಗಳ ಪದ್ಧತಿ ಉತ್ತಮವಾದದ್ದು. ಅಮೆಜಾನ್ ಗೋ ಸ್ಟೋರ್‌ಗಿಂತ ಇದು ಉತ್ತಮ ಪದ್ಧತಿಯಾಗಿದೆ.

Bengalurus first cashier less shop will come up in Brigade road soon!

ಅಮೆಜಾನ್ ಗೋ ಮೂಲಕ ನಗದುರಹಿತ ವಹಿವಾಟು ನಡೆಸುವುದನ್ನು ನಾವು ನೋಡಿದ್ದೇವೆ, ಆದರೆ ಅದೇ ರೀತಿಯ ಪ್ರತ್ಯಕ್ಷ ಅನುಭವವನ್ನು ನಗರವಾಸಿಗಳು ಅನುಭವಿಸುವ ಕಾಲ ದೂರವಿಲ್ಲ.

English summary
Decathlon, an international sports authorized shop will come up with cashier less at Brigade road soon and it will be first shop of this kind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X