ಬೆಂಗಳೂರಲ್ಲಿ ಶುಭ ಸಮಾರಂಭಕ್ಕೆ ಮಂಗಳಮುಖಿಯರಿಂದ ಹೊಸ ಕಿರಿಕಿರಿ
ಬೆಂಗಳೂರಿನಲ್ಲಿ ಕೆಲವು ಮಂಗಳಮುಖಿಯರು ಮದುವೆ, ಗೃಹ ಪ್ರವೇಶ, ಅಂಗಡಿ ಪೂಜೆ ಹಾಗೂ ಸಮಾರಂಭಗಳಲ್ಲಿ ಹೊಸ ಸಮಸ್ಯೆ ಶುರುಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜನ ಶುಭಸಮಾರಂಭ ಮಾಡುವುದನ್ನೇ ಗುರಿಯಾಗಿಸಿಕೊಂಡು ಮಂಗಳಮುಖಿಯರು ಹೊಸ ಕಿರಿಕ್ ಶುರು ಮಾಡಿಕೊಂಡಿದ್ದಾರೆ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಹಲವು ವರ್ಷಗಳಿಂದ ಇದೆ ಎನ್ನುತ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಜನ. ಈ ದಂಧೆ ಇತ್ತೀಚಿನ ದಿನಗಳಲ್ಲಿ ಜೋರಾಗಿದ್ದು, ಶುಭ ಸಮಾರಂಭ ನಡೆಸುವುದಕ್ಕೆ ಜನ ಹೆದರಿಕೊಳ್ಳುವಷ್ಟು ಬೆಳೆದಿದೆ ಎನ್ನಲಾಗುತ್ತಿದೆ. ಏನಿದು ಹೊಸ ಸಮಸ್ಯೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಮಂಗಳಮುಖಿಯರು ಹೊಸ ಸಮಸ್ಯೆ ಸೃಷ್ಟಿ ಮಾಡುತ್ತಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳ ಕಾರ್ಯಕ್ರಮಗಳನ್ನೇ ಇವರ ಟಾರ್ಗೆಟ್ ಆಗುತ್ತಿವೆ. ಬೆಂಗಳೂರಿನಲ್ಲಿ ಯಾವುದೇ ಶುಭ ಸಮಾರಂಭಗಳು ನಡೆದರೂ ಇವರು ಮೊದಲು ಅಲ್ಲಿಗೆ ಹೋಗಿ ಕಿರಿಕ್ ಶುರು ಮಾಡಿಕೊಳ್ಳುತ್ತಿದ್ದಾರೆ. ಶುಭ ಸಮಾರಂಭ ನಡೆಯುವ ಸ್ಥಳಗಳಿಗೆ ಗುಂಪು ..ಗುಂಪಾಗಿ ಹೋಗಿ ದೊಡ್ಡ ಮೊತ್ತದ ಹಣ ಕೇಳುವುದು ಕೊಡದೆ ಇದ್ದರೆ ಧಮ್ಕಿ ಹಾಕುವುದು ಹಾಗೂ ಬೆದರಿಸುವುದು ಮುಂದುರಿದಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಎಚ್.ಎಸ್ ಅವರು ಅವರಿಗೆ ಆಗಿರುವ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೆ ಎಂಥವರಿಗಾದರೂ ಆಕ್ರೋಶ ಬರುವಂತೆ ಇದೆ.

ಬೆಂಗಳೂರಿನ ವಿಜಯನಗರದಲ್ಲಿ ಹೊಸ ಬಟ್ಟೆ ಅಂಗಡಿ ಶುರುವಿನ ಶುಭ ಸಮಾರಂಭದ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಮಂಗಳಮುಖಿಯರು ನಮಗೆ ಇಷ್ಟೇ ದುಡ್ಡು ಬೇಕು ಎಂದು ದಾಂಧಲೇ ಸೃಷ್ಟಿಸಿದ್ದಾರೆ. ನಮ್ಮ ಅಕ್ಕ ನಿಮ್ಮ ಕಾಲು ಹಿಡಿಯುತ್ತೀನಿ ಬಿಡಿ ಎಂದರು ಬಿಡದೆ ನಮಗೆ ಶಾಪ ಹಾಕಿ, ಅಸಭ್ಯವಾಗಿ ವರ್ತಿಸಿದರು. ಇದಕ್ಕೆ ಕೊನೆ ಎಂದು ರಾಘವೇಂದ್ರ ಅವರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ ಏನು ?
ಬೆಂಗಳೂರಿನಲ್ಲಿ ಮಂಗಳಮುಖಿಯರು ದಾಂಧಲೆ ಮಾಡುವುದು ಮೊದಲಿನಿಂದಲೂ ವರದಿಯಾಗುತ್ತಿದೆ. ಆದರೆ, ಮೊದಲೆಲ್ಲ ಒಂದು ತಂಡದವರು ಬಂದು ದುಡ್ಡು ಕೇಳುತ್ತಿದ್ದರು ಅಲ್ಲಿಗೆ ಅದು ಮುಕ್ತಾಯವಾಗುತ್ತಿತ್ತು. ಆದರೆ, ಇದೀಗ ಬೆಂಗಳೂರಿನಲ್ಲಿ ಹೊಸ ರೀತಿಯ ಸಮಸ್ಯೆ ಕೊಡುವುದಕ್ಕೆ ಕೆಲವು ಮಂಗಳಮುಖಿಯರು ಮುಂದಾಗಿದ್ದಾರೆ ಎಂದು ಬೆಂಗಳೂರಿನ ನಿವಾಸಿಗಳು ದೂರುತ್ತಿದ್ದಾರೆ.
ರಾಘವೇಂದ್ರ ಹಾಗೂ ಅವರ ಕುಟುಂಬದವರು ವಿಜಯನಗರದಲ್ಲಿ ಹೊಸ ಬಟ್ಟೆ ಅಂಗಡಿ ಶುರು ಮಾಡಿದ್ದಾರೆ. ಬಟ್ಟೆ ಅಂಗಡಿ ಪ್ರಾರಂಭಿಸುವ ಸಂದರ್ಭದಲ್ಲಿ ಹೋಮ ನಡೆಸಲಾಗುತ್ತಿತ್ತು ಈ ಸಂದರ್ಭದಲ್ಲಿ ದಾಂಧಲೆ ನಡೆದಿದೆ. ಘಟನೆಯ ಬಗ್ಗೆ ರಾಘವೇಂದ್ರ ಅವರು ವಿವರಿಸಿದ್ದು ಈ ರೀತಿ, ನಾವು ವಿಜಯನಗರದಲ್ಲಿ ಬಟ್ಟೆ ಅಂಗಡಿ ಶುರು ಮಾಡಿದ್ದೇವೆ. ಭಾನುವಾರ ಪೂಜೆ ಹೋಮ ಮಾಡುತ್ತಿದ್ದೇವು. ಸುಮಾರು ನಾಲ್ಕು ಗಂಟೆ ಅಕ್ಕ- ಭಾವ ಹೋಮದಲ್ಲಿ ಕುಳಿತಿದ್ದರು ಆಗ ಬಂದ ಮಂಗಳಮುಖಿಯರ ಗುಂಪೊಂದು ನಮ್ಮಿಂದ 3,000 ಸಾವಿರ ರೂಪಾಯಿ ತೆಗೆದುಕೊಂಡು ಹೋದರು. ಇದಾದ ಕೆಲವೇ ಗಂಟೆಗಳಲ್ಲಿ ಸುಮಾರು 7.30ಕ್ಕೆ ಮತ್ತೊಂದು ಮಂಗಳಮುಖಿಯರ ಗುಂಪು ಬಂತು. ಆಗ ನಾವು ಈಗಾಗಲೇ ಒಂದು ಗುಂಪಿಗೆ ಇಂತಿಷ್ಟು ಕೊಟ್ಟಿದ್ದೇವೆ ಅಂತ ಹೇಳಿದರೂ ಅವರು ಕೇಳಲಿಲ್ಲ.
ಅವರಿಗೆಲ್ಲ ನೀವು ಯಾಕೆ ಕೊಡ್ತೀರ ನಾವಿಲ್ಲ ಇಂಪಾರ್ಟೆಂಟ್ ನಮಗೆ ಕೊಡಿ ಅಂತ ಹೇಳಿದರು. ನಾವು ಪೂಜೆಗೆ ವಿಘ್ನವಾಗಬಾರದು ಅಂತ ಒಂದು ಸಾವಿರ ರೂಪಾಯಿ ಕೊಟ್ವಿ. ಆದರೆ, ಅವರು ಅದಕ್ಕೆ ಸಮಾಧಾನ ಆಗಲಿಲ್ಲ. ಒಂದು ಸಾವಿರ ಎಲ್ಲಾ ನಡೆಯಲ್ಲ ನಮಗೆ 10,000 ಸಾವಿರ ರೂಪಾಯಿ ಕೊಡಿ ಇಲ್ಲವೇ ನಾವು ಇಲ್ಲಿಂದ ಹೋಗಲ್ಲ ಎಂದು ಪಟ್ಟು ಹಿಡಿದರು. ಆಗ ಮಾತಿನ ಚಕಮಕಿ ನಡೆಯಿತು. ಕೆಟ್ಟ ಪದಗಳನ್ನು ಉಪಯೋಗಿಸಿದ್ರು.. ಹಂಗ್ ಮಾಡ್ತೀವಿ ಹಿಂಗ್ ಮಾಡ್ತೀವಿ ಅಂತ ಬೆದರಿಸಿದರು.
ನಿಮ್ಮ ಕಾಲಿಗೆ ಬೇಕಾದರೂ ಬೀಳ್ತೀನಿ ಪ್ಲೀಸ್ ಬಿಡಿ, ಶುಭ ಕಾರ್ಯ ನಡೆಯಲು ಬಿಡಿ ಅಂತ ನಮ್ಮ ಅಕ್ಕ ಅವರು ಬೇಡಿಕೊಂಡರೂ ಆ ಮಂಗಳಮುಖಿಯರ ಗುಂಪು ಚೂರೂ ಕನಿಕರ ಇಲ್ಲದಂತೆ ವರ್ತಿಸಿದರು . ಕೊಡಲ್ಲ ಎಂದರೂ ಬಿಡಲಿಲ್ಲ. ಇನ್ನು ಮೂರೇ ತಿಂಗಳಲ್ಲಿ ನಿಮ್ಮ ಅಂಗಡಿ ಮುಚ್ಚಿಕೊಂಡು ಹೋಗಲಿದೆ. ನಿಂಬೆ ಹಣ್ಣು ತಿರುಗಿಸಿ ಹಾಕ್ತೀನಿ ಅಂತೆಲ್ಲ ಶಾಪ ಹಾಕಿದರು. ಅಲ್ಲದೇ ಅವರ ಖಾಸಗಿ ಅಂಗಳಗಳನ್ನು ಎಲ್ಲರೆದುರು ತೋರಿಸಿ ಬೈದರು ಅಂತ ರಾಘವೇಂದ್ರ ಅವರು ದೂರಿದ್ದಾರೆ.
ವಿಜಯನಗರದಲ್ಲಿ ಹೊಸ ಬಟ್ಟೆ ಅಂಗಡಿ ಶುರುವಿನ ಶುಭ ಸಮಾರಂಭದ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಮಿಸಿ ನಮಗೆ ಇಷ್ಟೇ ದುಡ್ಡು ಬೇಕು ಎಂದು ದಾಂದಲೇ ಸೃಷ್ಟಿಸಿದ ಮಂಗಳಮುಖಿಯರು.ನಮ್ಮ ಅಕ್ಕ ನಿಮ್ಮ ಕಾಲು ಹಿಡಿಯುತ್ತೀನಿ ಬಿಡಿ ಎಂದರು ಬಿಡದೆ ನಮಗೆ ಶಾಪ ಹಾಕಿ, ಅಸಭ್ಯವಾಗಿ ವರ್ತಿಸಿದರು. ಇದಕ್ಕೆ ಕೊನೆ ಎಂದು @BlrCityPolice @siddaramaiah pic.twitter.com/W6ToZDs70Q
— Raghavendra H S, Bengaluriga (@ragubengaluriga) December 9, 2024
ಪೊಲೀಸ್ ಕಮಿಷನರ್‌ಗೆ ದೂರು
ಈ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗುವುದು. ಈಗಾಗಲೇ ಈ ಸಂಬಂಧ ದೂರು ನೀಡಿದ್ದೇವೆ. ಆದರೆ, ಇದು ನಿಲ್ಲಬೇಕು ಹೀಗಾಗಿ, ಇದನ್ನು ಕಮಿಷನರ್ ಅವರ ಹಂತಕ್ಕೆ ತೆಗದುಕೊಂಡು ಹೋಗುವುದಾಗಿ ಅವರು ಹೇಳಿದ್ದಾರೆ. ಜನ ಸಹ ಭಯ ಬೀಳದೆ ಈ ರೀತಿ ಯಾರಾದರೂ ಬಂದು ತೊಂದರೆ ಕೊಟ್ಟರೆ ಕೂಡಲೇ 112ಗೆ ಪೋನ್ ಮಾಡಿ ಆಗ ಪೊಲೀಸರು ಬರ್ತಾರೆ. ಶಾಪದ ಹೆಸರಿನಲ್ಲಿ ಬೆದರಿಸುವವರಿಗೆ ಹೆದರಿ ದುಡ್ಡು ಕೊಡ್ಬೇಡಿ ಅಂತ ಮನವಿ ಮಾಡಿದ್ದಾರೆ.












Click it and Unblock the Notifications