• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲಯಾಳಿ ನಟಿಯನ್ನು ಕಾಡಿದ ಫ್ರಾಂಕ್ಲಿನ್ ಬಂಧಿಸಿದ ಮಡಿವಾಳದ ಪೊಲೀಸರು!

By Mahesh
|

ಬೆಂಗಳೂರು, ಅಕ್ಟೋಬರ್ 30: ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿ ರೆಬಾರನ್ನು ಕಾಡಿಸಿ, ಪೀಡಿಸಿ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಯುವಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಫ್ರಾಂಕ್ಲಿನ್ ವ್ಹಿಸಿಲ್ ಎಂದು ಗುರುತಿಸಲಾಗಿದ್ದು, ಬಸವನಗುಡಿಯ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದಾನೆ. ಕಳೆದ ಒಂದು ವರ್ಷದಿಂದ ಬೆಂಗಳೂರು ಮೂಲದ ಮಲೆಯಾಳಂ ನಟಿ ರೆಬಾ ಮೋನಿಕಾರನ್ನು ಫ್ರಾಂಕ್ಲಿನ್ ಕಾಡುತ್ತಿದ್ದ.

ಕೋರಮಂಗಲದ ಮೊದಲ ಬ್ಲಾಕಿನಲ್ಲಿ ವಾಸವಾಗಿರುವ ರೆಬಾ ಅವರು ನೀಡಿದ ದೂರಿನ ಆಧಾರದ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಫ್ರಾಂಕ್ಲಿನ್ ನನ್ನು ಬಂಧಿಸಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಚಿತ್ರ ಜೋಕೊಬಿಂಟೆ ಸ್ವರ್ಗರಾಜ್ಯಂ ಚಿತ್ರದಲ್ಲಿ ನಟಿಸಿದ್ದ ರೆಬಾ ಅವರು ನೀಡಿದ ದೂರಿನ ಅನ್ವಯ ವ್ಹಿಸಿಲ್ ವಿರುದ್ಧ ಐಪಿಸಿ ಸೆಕ್ಷನ್ 354 ಡಿಯಂತೆ ಪ್ರಕರಣ ದಾಖಲಿಸಲಾಯಿತು.

ಆದರೆ, ಕೋರ್ಟಿಗೆ ಹಾಜರುಪಡಿಸಿದ ಬೆನ್ನಲ್ಲೆ ಜಾಮೀನಿನ ಮೇಲೆ ವ್ಹಿಸಿಲ್ ಹೊರ ಬಂದಿದ್ದಾನೆ.

13 ವರ್ಷಗಳಿಂದ ಬೆಂಗಳೂರಿನ ನಿವಾಸಿ

13 ವರ್ಷಗಳಿಂದ ಬೆಂಗಳೂರಿನ ನಿವಾಸಿ

ರೆಬಾ ಸುಮಾರು 13 ವರ್ಷಗಳಿಂದ ಬೆಂಗಳೂರಿನ ನಿವಾಸಿ. 2013ರಲ್ಲಿ ಟಿವಿ ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಪರಿಚಯವಾಗಿದೆ.

ನಿವಿನ್ ಪೌಲಿ ಅಭಿನಯದ ಚಿತ್ರದಲ್ಲಿ ನಟನೆ

ನಿವಿನ್ ಪೌಲಿ ಅಭಿನಯದ ಚಿತ್ರದಲ್ಲಿ ನಟನೆ

ಸ್ಟಾರ್ ನಟ ನಿವಿನ್ ಪೌಲಿ ಅಭಿನಯದ ಚಿತ್ರದಲ್ಲಿ ನಟಿಸುವ ಮೂಲಕ ರೆಬಾ ಜನಪ್ರಿಯತೆ ಗಳಿಸಿದರು. ಚಿತ್ರರಂಗದ ತೊಡಗಿಕೊಂಡಿದ್ದರೂ ಭಾನುವಾರದಂದು ಚರ್ಚ್ ಗೆ ಹೋಗುವುದನ್ನು ಮಾತ್ರ ರೆಬಾ ತಪ್ಪಿಸುತ್ತಿರಲಿಲ್ಲ.

ಪ್ರತಿ ಭಾನುವಾರ ಸೈಂಟ್ ಅಂಟೋನಿ ಚರ್ಚ್ ಗೆ ಪ್ರಾರ್ಥನೆ ಸಲ್ಲಿಸಿ

ಪ್ರತಿ ಭಾನುವಾರ ಸೈಂಟ್ ಅಂಟೋನಿ ಚರ್ಚ್ ಗೆ ಪ್ರಾರ್ಥನೆ ಸಲ್ಲಿಸಿ

ಹೊಸೂರು ರಸ್ತೆ ಮಡಿವಾಳದ ವ್ಯಾಪ್ತಿಯ ಸೈಂಟ್ ಅಂಟೋನಿ ಚರ್ಚ್ ಗೆ ಪ್ರತಿ ಭಾನುವಾರ ಪ್ರಾರ್ಥನೆ ಸಲ್ಲಿಸಿ ಬರುವಾಗ ರೆಬಾಳನ್ನು ಫ್ರಾಂಕ್ಲಿನ್ ನೋಡಿದ್ದಾನೆ. ಹೇಗೋ ಮಾಡಿ ರೆಬಾ ಫೋನ್ ನಂಬರ್ ಗಳಿಸಿದ ಫ್ರಾಂಕ್ಲಿನ್ ದಿನ ನಿತ್ಯ ಆಕೆಯನ್ನು ಕಾಡತೊಡಗಿದ್ದ.

ಫ್ರಾಂಕ್ಲಿನ್ ಗೆ ರೆಬಾ ಎಚ್ಚರಿಕೆ

ಫ್ರಾಂಕ್ಲಿನ್ ಗೆ ರೆಬಾ ಎಚ್ಚರಿಕೆ

ಒಮ್ಮೆ ಚರ್ಚ್ ಬಳಿ ಸಿಕ್ಕ ಫ್ರಾಂಕ್ಲಿನ್ ಗೆ ರೆಬಾ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೆಲ ತಿಂಗಳುಗಳ ಕಾಲ ಸುಮ್ಮನಿರುತ್ತಿದ್ದ ಫ್ರಾಂಕ್ಲಿನ್ ಮತ್ತೊಮ್ಮೆ ಅಶ್ಲೀಲ ಸಂದೇಶಗಳನ್ನು ಕಳಿಸುವುದು, ಕರೆ ಮಾಡಿ ತೊಂದರೆ ಕೊಡುವುದನ್ನು ಮಾಡುತ್ತಿದ್ದ. ಈಗ ತಪ್ಪೊಪ್ಪಿಗೆ ಬರೆದುಕೊಂಡಿದ್ದಾನೆ. ಹಾಗೂ ಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದಾನೆ.

English summary
A 28-year-old youth was arrested by Madiwala police in Bengaluru for allegedly stalking a Malayalam film actor and pressuring her to love and marry him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X