Video: ಎಲ್ಲಂದ್ರಲ್ಲಿ ನುಗ್ಗೋ ವಾಹನ ಸವಾರರೇ ಈ ದೃಶ್ಯ ನೋಡಿ- ರಾಂಗ್ ರೂಟ್‌ ವಾಹನ ಸವಾರನಿಗೆ ಸೇನಾಧಿಕಾರಿಯಿಂದ ಪಾಠ

ಬೆಂಗಳೂರು ಆಗಸ್ಟ್ 28: ಬೆಂಗಳೂರಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಹುಬೇಗ ಹೋಗುವುದು ಸುಲಭವಲ್ಲ. ಯಾಕೆಂದರೆ ರಸ್ತೆ ಮೇಲಿನ ಗುಂಡಿಗಳಿಂದ ಬಚಾವ್ ಆಗಿ ಸಂಚಾರ ನಿಯಮಗಳನ್ನು ಪಾಲಿಸುತ್ತಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಭಾರೀ ಕಷ್ಟ. ಹಾಗಂತ ಟ್ರಾಫಿಕ್ ನಿಯಮ ಪಾಲಿಸದೇ ವಾಹನ ಸವಾರಿ ಮಾಡಿದರೆ ದಂಡದ ಜೊತೆಗೆ ದೊಣ್ಣೆ ಏಟು ಬೀಳುತ್ತೆ. ಹೌದು... ರಾಂಗ್ ರೂಟ್‌ ವಾಹನ ಸವಾರನಿಗೆ ಸೇನಾಧಿಕಾರಿಯೊಬ್ಬರು ಪಾಠ ಕಲಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾದ ನಗರ. ನಿತ್ಯ ಲಕ್ಷಾಂತರ ವಾಹನಗಳು ರಸ್ತೆಗೆ ಇಳಿಯುತ್ತವೆ. ಎಷ್ಟೇ ವಾಹನ ದಟ್ಟಣೆ ಇದ್ದರೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು. ಆದರೆ ಇಲ್ಲೊಬ್ಬ ವಾಹನ ಸವಾರ ತಪ್ಪು ಬದಿಯಲ್ಲಿ ವಾಹನವನ್ನು ಚಲಾಯಿಸಿ ಸೇನಾಧಿಕಾರಿಯಿಂದ ದೊಣ್ಣೆ ಏಟು ತಿಂದಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.

Bengaluru wrong route driver given a lesson by an army officer - video goes viral

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ರಾಂಗ್‌ ಸೈಡ್‌ ಬಂದಿದ್ದರಿಂದ ಟ್ರಾಫಿಕ್‌ ಜಾಮ್ ಉಂಟಾಗಿದೆ. ಈ ವೇಳೆ ಆತ ಕ್ಷಮೆಯಾಚಿಸುವ ಅಥವಾ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಕಾರಿನಲ್ಲಿ ಇದ್ದ ಇನ್ನೊಬ್ಬ ಪ್ರಯಾಣಿಕನೊಂದಿಗೆ ಜಗಳವಾಡಲು ಶುರುಮಾಡಿದ್ದಾನೆ. ಇದರಿಂದಾಗಿ ಕೋಪಕೊಂಡ ಸೇನಾಧಿಕಾರಿ ವಾಹನ ಸವಾರನಿಗೆ ಕೆನ್ನೆಗೆ ಬಾರಿಸಿ ಪಾಠ ಕಲಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಮಹಿಳಾ ಟ್ರಾಫಿಕ್ ಪೋಲೀಸ್ ಸ್ಥಳಕ್ಕೆ ಆಗಮಿಸುತ್ತಾರೆ. ವಾಹನ ಸವಾರನಿಗೆ ಸರಿಯಾದ ದಾರಿಯಲ್ಲಿ ಬರುವಂತೆ ಸೂಚಿಸುತ್ತಾರೆ. ಸಾಮಾಜಿಕ ಮಾಧ್ಯಮ X ನಲ್ಲಿ ಅಂಕುರ್ ಬಾಗ್ಚಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ವೀಡಿಯೊಕ್ಕೆ, 'ಸೇನಾ ಟ್ರಕ್‌ಗಳಿಗೆ ಬೆಂಗಳೂರು ರಸ್ತೆಗಳಲ್ಲಿ ಪ್ರತಿದಿನ ಗಸ್ತು ತಿರುಗಲು ನಾನು ಹೆಚ್ಚಿನ ತೆರಿಗೆಗಳನ್ನು ಪಾವತಿಸುತ್ತೇನೆ' ಎಂಬ ಶೀರ್ಷಿಕೆ ಬರೆಯಲಾಗಿದೆ.

Bengaluru wrong route driver given a lesson by an army officer - video goes viral

ಆಗಸ್ಟ್ 25 ರಂದು X ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊ ಸಾಕಷ್ಟು ಗಮನ ಸೆಳೆದಿದೆ. ಇದುವರೆಗೆ 940.7K ವೀಕ್ಷಣೆಗಳನ್ನು ಗಳಿಸಿದೆ. ಮತ್ತೊಂದೆಡೆ ಸಮಸ್ಯೆಯನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ ಸೇನಾಧಿಕಾರಿಯನ್ನು ನೆಟಿಜನ್‌ಗಳು ಶ್ಲಾಘಿಸುತ್ತಿದ್ದಾರೆ.

ವಿಡಿಯೋಗೆ ಕಾಮೆಂಟ್‌ ಹೀಗಿದೆ-

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, 'ಇದು ನಿಮ್ಮ ಶಕ್ತಿ!! ಇದು ಮಾತ್ರ ಭಾರತದ ಮಹಾಶಕ್ತಿಯನ್ನು ಉಳಿಸಬಲ್ಲದು' ಎಂದು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರರು, 'ಬೆಂಗಳೂರು ಮಾತ್ರವಲ್ಲ, ಭಾರತದ ಎಲ್ಲಾ ದೊಡ್ಡ ನಗರಗಳು ಒಂದೇ ಸಮಸ್ಯೆ ಹೊಂದಿವೆ' ಎಂದಿದ್ದಾರೆ.

Bengaluru wrong route driver given a lesson by an army officer - video goes viral

ಮತ್ತೊಬ್ಬ ಬಳಕೆದಾರರು, 'ತಪ್ಪಾದ ಕಡೆಯಿಂದ ಬರುವ ಜನರಿಗೆ ದಂಡ ವಿಧಿಸುವ ಮೊದಲು, ಅವರ ವಾಹನವನ್ನು ವಶಪಡಿಸಿಕೊಳ್ಳುವ ಮೊದಲು ಕಪಾಳಮೋಕ್ಷ ಮಾಡಬೇಕು' ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಅತಿಹೆಚ್ಚು ದಟ್ಟಣೆ ದಿನ

ದೇಶದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆಯುಂಟಾಗುವ ನಗರಗಳಲ್ಲಿ ಸಿಲಿಕಾನ್‌ ಸಿಟಿಯು ಅಗ್ರಸ್ಥಾನ ಹಾಗೂ ವಿಶ್ವದಲ್ಲಿನ ಪ್ರಮುಖ ನಗರಗಳ ಪೈಕಿ ಆರನೇ ಸ್ಥಾನ ಪಡೆದಿದೆ.ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಪ್ರಮಾಣ ಶೇ.63 ರಷ್ಟಿದೆ. ವಾಹನಗಳ ವೇಗ ಮಿತಿಯು ಗಂಟೆಗೆ 18 ಕಿ.ಮೀ ಇದೆ. 10 ಕಿ.ಮೀ ಕ್ರಮಿಸಲು 28 ನಿಮಿಷ 10 ಸೆಕೆಂಡ್‌ ಬೇಕಾಗುತ್ತಿದೆ. 2022ಕ್ಕೆ ಹೋಲಿಸಿದರೆ ಈ ಪ್ರಮಾಣ ಒಂದು ನಿಮಿಷ ಕಡಿಮೆಯಾಗಿದೆ. ಟ್ರಾಫಿಕ್‌ಜಾಮ್‌ನಿಂದಾಗಿ ನಗರದ ಜನರು ವರ್ಷಕ್ಕೆ 132 ಗಂಟೆಗಳ ಕಾಲ ವಾಹನ ದಟ್ಟಣೆಯಲ್ಲಿ ಕಳೆಯುವಂತಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಶುಕ್ರವಾರ ಸಂಜೆ 6 ರಿಂದ 7 ಗಂಟೆ ಅವಧಿಯಲ್ಲಿಅಧಿಕ ವಾಹನ ದಟ್ಟಣೆ ಇರುತ್ತದೆ. ಈ ಅವಧಿಯಲ್ಲಿ10 ಕಿ.ಮೀ ದೂರ ಪ್ರಯಾಣಕ್ಕೆ ಕನಿಷ್ಠ 36 ನಿಮಿಷ ಬೇಕಾಗುತ್ತಿದೆ. ಜತೆಗೆ ಭಾನುವಾರ ಹೊರತುಪಡಿಸಿ ಪ್ರತಿನಿತ್ಯ ಸಂಜೆ 6 ರಿಂದ 8 ಗಂಟೆ ಅವಧಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ.2023 ರಲ್ಲಿಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗಿರುವ ಕುಖ್ಯಾತಿಯನ್ನು ಸೆಪ್ಟೆಂಬರ್‌ 27ನೇ ತಾರೀಕು ಪಡೆದಿದೆ. ಈ ದಿನ 10 ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 33 ನಿಮಿಷ ಸಮಯ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+