"ಬೆಂಗಳೂರಲ್ಲಿ ಮನೆ ಹುಡುಕೋದು ಒಂಥರಾ ಫುಲ್-ಟೈಮ್ ಜಾಬ್": HSR ಲೇಔಟ್ ಬಾಡಿಗೆ ದರ ಕಂಡು ದಂಗಾದ ಯುವತಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಎಷ್ಟು ಕಷ್ಟವೋ ಹಾಗೆಯೇ ಇಲ್ಲಿ ನಮ್ಮ ಬಜೆಟ್‌ಗೆ ಸರಿ ಹೊಂದುವ ಮನೆ ಹುಡುಕಿಕೊಳ್ಳುವುದು ಅದಕ್ಕಿಂತ ದೊಡ್ಡ ಕೆಲಸವೇ ಸರಿ ಎಂದು ಹೇಳಬಹುದು. ಅದರಲ್ಲಂತೂ ಐಟಿ ಕಾರಿಡಾರ್‌ಗಳಿಗೆ ಹತ್ತಿರವಿರುವ ಪ್ರಮುಖ ಪ್ರದೇಶಗಳಲ್ಲಿ ಮನೆ ಬಾಡಿಗೆ ಮತ್ತು ಅಡ್ವಾನ್ಸ್ ಕೇಳಿದರೆ ಸಾಮಾನ್ಯರ ತಲೆ ತಿರುಗುವುದಂತೂ ಖಂಡಿತ. ಇದೀಗ ಬೆಂಗಳೂರಿನ ಯುವತಿಯೊಬ್ಬರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ತಮ್ಮ ಬಜೆಟ್‌ಗೆ ತಕ್ಕಂತೆ ಮನೆ ಹುಡುಕಲು ಪಟ್ಟ ಪಾಡಿನ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮನೆ ಹುಡುಕಾಟದ ಕಹಿ ವಾಸ್ತವ ಬಿಚ್ಚಿಟ್ಟ ಯುವತಿ

ರಾಜೇಶ್ವರಿ ಗುಪ್ತಾ ಎಂಬ ಮಹಿಳೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ತಾವು ಪ್ರಸ್ತುತ ವಾಸವಿರುವ ಮನೆಯನ್ನು ಖಾಲಿ ಮಾಡಲು ಕೇವಲ 20 ದಿನಗಳು ಮಾತ್ರ ಬಾಕಿ ಇದೆ. ಹಾಗಾಗಿ ತಾವು ಪ್ರತಿದಿನ ಹೋಗುವ ಜಿಮ್‌ಗೆ ಹತ್ತಿರವಿರುವ ಕಾರಣಕ್ಕಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊಸ ಮನೆ ಹುಡುಕಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ. "ನನ್ನ ಬಜೆಟ್ ತಿಂಗಳಿಗೆ 15,000 ರೂಪಾಯಿಗಳು. ಈ ಬಜೆಟ್‌ನಲ್ಲಿ ಒಂದು ಸಾಮಾನ್ಯವಾದ 1BHK ಮನೆ ಸಿಗಬಹುದು ಎಂಬ ನಿರೀಕ್ಷೆ ನನ್ನದಾಗಿತ್ತು" ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

Bengaluru
Bengaluru: ಇಂದಿನಿಂದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳ ಟ್ರಯಲ್ ರನ್ ಶುರು
Bengaluru: ಇಂದಿನಿಂದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳ ಟ್ರಯಲ್ ರನ್ ಶುರು

ಆದರೆ, "ಇಲ್ಲಿನ ವಾಸ್ತವ ಏನೆಂದರೆ, 1BHK ಮನೆಯ ಬಾಡಿಗೆ 25,000 ರೂಪಾಯಿಗಳಿಂದ ಶುರುವಾಗುತ್ತದೆ. ಒಂದು ವೇಳೆ ಸಂಪೂರ್ಣ ಪೀಠೋಪಕರಣಗಳಿರುವ ಮನೆ ಬೇಕೆಂದರೆ ಅದು ಕಡಿಮೆಯೆಂದರೂ 50,000 ರೂಪಾಯಿಗಳ ಆಸುಪಾಸಿಗೆ ತಲುಪುತ್ತದೆ. ಇನ್ನು ಅಡ್ವಾನ್ಸ್ ಮೊತ್ತವಂತೂ ಬಾಡಿಗೆಯಂತೆ ಅನಿಸುವುದಿಲ್ಲ, ಬದಲಾಗಿ ಅದೊಂದು ನಮಗೆ ನಷ್ಟದ ಹೂಡಿಕೆಯಂತೆ ಭಾಸವಾಗುತ್ತದೆ" ಎಂದು ರಾಜೇಶ್ವರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮನೆ ಹುಡುಕಿಕೊಡಲು ಬ್ರೋಕರ್‌ಗಳು ಕೇಳುವ ಭಾರಿ ಕಮಿಷನ್ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇಷ್ಟೊಂದು ದುಬಾರಿ ಬಾಡಿಗೆ ಇದ್ದರೂ ಬ್ರೋಕರ್‌ಗಳು ಮಾತ್ರ, 'ಮೇಡಂ, ಇದು ತುಂಬಾ ಕಡಿಮೆ ಬೆಲೆ' ಎನ್ನುತ್ತಾರೆ. ಹೀಗಾಗಿ ಬ್ರೋಕರ್ ಸಹವಾಸವೇ ಬೇಡ ಎಂದು ನಿರ್ಧರಿಸಿ ನಾನೇ ಖುದ್ದಾಗಿ ಮನೆ ಹುಡುಕಲು ಮುಂದಾದೆ" ಎಂದು ಅವರು ಹೇಳಿದ್ದಾರೆ.

"ಬೆಂಗಳೂರಿನ ಬೇಸಿಗೆಯಲ್ಲಿ ಸ್ಕೂಟಿ ಮೇಲೆ ರೌಂಡ್ಸ್ ಹೊಡೆಯುವುದು, ನಾನು ಹೆಸರು ನೋಂದಾಯಿಸದ ಮ್ಯಾರಥಾನ್‌ನಲ್ಲಿ ಓಡಿದಂತೆ ಭಾಸವಾಗುತ್ತಿದೆ. ನನಗೆ ಬೇಕಾಗಿರುವುದು ಕೇವಲ ಸೂರ್ಯನ ಬೆಳಕು, ಶುದ್ಧ ಗಾಳಿ ಮತ್ತು ಜೀವನ ನಡೆಸಲು ಕೈಯಲ್ಲಿ ಸ್ವಲ್ಪ ಹಣ. ಆದರೆ ಈಗ ಮನೆ ಹುಡುಕುವ ನೆಪದಲ್ಲಿ ನಾನು ಸ್ಕೂಟಿಯಲ್ಲಿಯೇ ಕಾರ್ಡಿಯೋ ವರ್ಕೌಟ್ ಮಾಡುತ್ತಿದ್ದೇನೆ" ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮನೆ ಹುಡುಕುವುದು 'ಭಾವನಾತ್ಮಕ ಹಾನಿ ಜೊತೆಗೆ ಫುಲ್-ಟೈಮ್ ಜಾಬ್' ಎಂದು ಕರೆದಿರುವ ಅವರು, "ಎಚ್‌ಎಸ್‌ಆರ್ ಲೇಔಟ್ ಜನರೇ, ನೀವು ಇಲ್ಲಿ ಹೇಗೆ ಬದುಕುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

Viral Photos: ಬೆಂಗಳೂರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ಮಕ್ಕಳ ಸವಾರಿ, ಪೋಷಕರನ್ನು ಜೈಲಿಗೆ ಹಾಕಲು ನೆಟ್ಟಿಗರ ಆಗ್ರಹ
Viral Photos: ಬೆಂಗಳೂರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ಮಕ್ಕಳ ಸವಾರಿ, ಪೋಷಕರನ್ನು ಜೈಲಿಗೆ ಹಾಕಲು ನೆಟ್ಟಿಗರ ಆಗ್ರಹ

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಬೆಂಗಳೂರಿನ ಬಾಡಿಗೆದಾರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಎಚ್‌ಎಸ್‌ಆರ್ ಲೇಔಟ್ ಬಾಡಿಗೆ ದರಗಳು ನಿಜಕ್ಕೂ ಆಘಾತಕಾರಿ" ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. "ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಮೊತ್ತದ ಠೇವಣಿ ಪಡೆಯುವುದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು" ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಲ್ಲಿ ಮನೆ ಹುಡುಕುವುದು ನಮ್ಮ ಹಣ ಮತ್ತು ನೆಮ್ಮದಿ ಎರಡನ್ನೂ ಕಸಿದುಕೊಳ್ಳುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರು ಫ್ಲಾಟ್‌ಮೇಟ್‌ಗಳ ಜೊತೆ ವಾಸಿಸಲು ಇಷ್ಟಪಡುತ್ತಾರೆ" ಎಂದು ಹಲವರು ಯುವತಿಯ ಮಾತಿಗೆ ಧ್ವನಿಗೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+