"ವಿಪ್ರಾ ಬೆಂಗಳೂರು" ಎಂದು ಸರ್ ನೇಮ್ ಇಟ್ಟುಕೊಂಡ ಮಹಿಳೆ: ವಿಡಿಯೋದಲ್ಲಿದೆ ಮಹತ್ವದ ಸಂದೇಶ

ಬೆಂಗಳೂರು, ಜನವರಿ 27: ಸಾಮಾನ್ಯವಾಗಿ ವ್ಯಕ್ತಿಯ ಹೆಸರಿನೊಂದಿಗೆ ಅವರ ಊರು, ಜಾತಿ ಅಥವಾ ಸಾಮಾಜಿಕ ಹಿನ್ನೆಲೆಯನ್ನು ಇಟ್ಟುಕೊಳ್ಳಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ವಿಪ್ರಾ ಎಂಬ ಮಹಿಳೆ ಇದನ್ನು ಪ್ರಶ್ನಿಸಿ, ತಮ್ಮದೇ ಆದ ವಿಭಿನ್ನ ಸರ್ ನೇಮ್‌ ಇಟ್ಟುಕೊಡಿದ್ದಾರೆ. ಅವರು ತಮ್ಮ ಸರ್ ನೇಮ್ ಅನ್ನು "ವಿಪ್ರಾ ಬೆಂಗಳೂರು" ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಹಾಗಾದ್ರೆ, ಈ ನಿರ್ಧಾರ ಯಾಕೆ ಎನ್ನುವ ಮಾಹಿತಿಯನ್ನು ಅವರೇ ಬಿಚ್ಚಿಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ.

ವಿಪ್ರಾ ಅವರ ಪ್ರಕಾರ, ಅವರ ಕುಟುಂಬದಲ್ಲಿ ಸಾಂಪ್ರದಾಯಿಕವಾಗಿ ಸರ್ ನೇಮ್ ಬಳಸುವ ಪರಂಪರೆ ಇರಲಿಲ್ಲ. ಅವರ ಅಜ್ಜ, ಜನರನ್ನು ಅವರ ಸ್ಥಾನಮಾನದ ಆಧಾರದಲ್ಲಿ ತೀರ್ಮಾನಿಸುವುದು ಸರಿಯಲ್ಲ ಎಂಬ ನಂಬಿಕೆ ಹೊಂದಿದ್ದರು. ಆದ್ದರಿಂದಲೇ ತಮ್ಮ ಮಕ್ಕಳಿಗೆ ಸರ್ ನೇಮ್ ಇಡದೇ ಬೆಳೆಸಿದರು. ಅದೇ ರೀತಿಯಲ್ಲಿ ವಿಪ್ರಾ ಅವರ ತಂದೆಯವರೂ ಕೂಡ ತಮ್ಮ ಮಕ್ಕಳಿಗೆ ಸರ್ ನೇಮ್ ಪರಿಕಲ್ಪನೆ ಇಲ್ಲದೆ, ಬದುಕಬೇಕು ಎಂಬ ಆಶಯವನ್ನು ಹೊಂದಿದ್ದರು.

Bengaluru Woman Chooses City Name as Surname Sparks Conversation on Identity video viral

ಬೆಂಗಳೂರು ಹಸರು ಇಟ್ಟುಕೊಂಡಿದ್ದೇಕೆ?: ವಿಪ್ರಾ ಜನಿಸಿದ ಸಮಯದಲ್ಲಿ, ಹೆಸರು ಜೊತೆ ಸರ್ ನೇಮ್ ಇಡಬೇಕು ಎಂಬ ಒತ್ತಡಗಳು ಎದುರಾದವು. ಆಗ ಕುಟುಂಬದಲ್ಲಿ ಚರ್ಚೆ ನಡೆಸಿ, ತಮ್ಮ ಜೀವನಕ್ಕೆ ಆಶ್ರಯ ನೀಡಿದ ಹಾಗೂ ಬೆಳೆಸಿದ ನಗರವಾದ ಬೆಂಗಳೂರಿನ ಹೆಸರನ್ನೇ ಉಪನಾಮವಾಗಿ ಬಳಸೋಣ ಎಂಬ ನಿರ್ಧಾರಕ್ಕೆ ಬಂದರು. ಆದ್ದರಿಂದ ವಿಪ್ರಾ ಅವರು ತಮ್ಮ ಪೂರ್ಣ ಹೆಸರನ್ನು "ವಿಪ್ರಾ ಬೆಂಗಳೂರು" ಎಂದು ಬದಲಾಯಿಸಿಕೊಂಡಿದ್ದಾರೆ. "ನಾನು ಇಲ್ಲಿ ಹುಟ್ಟಿ ಬೆಳೆದಿದ್ದೇನೆ. ಬೆಂಗಳೂರು ನನ್ನ ಗುರುತು" ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರಿಂದ ಪ್ರಶಂಸೆ: ವಿಪ್ರಾ ಅವರ ಜೀವನಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಹಲವಾರು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಅತ್ಯಂತ ಪ್ರಗತಿಪರ ಆಲೋಚನೆ ಎಂದು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು, ಸಾಂಪ್ರದಾಯಿಕ ಸರ್ ನೇಮ್‌ಗಳಿಗೆ ಬದಲಿ ರೂಪವಾಗಿ ನಗರ ಹೆಸರನ್ನು ಬಳಸಿರುವುದು ಹೊಸ ಚಿಂತನೆಗೆ ದಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ವಿಪ್ರಾ ಅವರ ಕಥೆ ಹೆಸರು ಕೇವಲ ಪರಂಪರೆಯಲ್ಲ, ಅದು ವ್ಯಕ್ತಿಯ ಆಯ್ಕೆಯೂ ಆಗಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದೆ.

ನಗರದ ಹೆಸರು ಇಟ್ಟುಕೊಳ್ಳುವುದರ ಸಂದೇಶ ಏನು?: ಸಾಮಾನ್ಯವಾಗಿ ಸರ್ ನೇಮ್ ಎಂದರೆ ಕುಟುಂಬದ ಪರಂಪರೆ, ಜಾತಿ, ಧರ್ಮ ಅಥವಾ ಊರಿನ ಹಿನ್ನೆಲೆಯನ್ನು ಸೂಚಿಸುವ ಗುರುತಾಗಿ ಸಮಾಜದಲ್ಲಿ ಕಾಣಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆಲವರು ಇದರ ಬದಲಿಗೆ ತಾವು ಹುಟ್ಟಿ ಬೆಳೆದ ಅಥವಾ ತಮ್ಮ ಬದುಕಿಗೆ ಅರ್ಥ ನೀಡಿದ ನಗರದ ಹೆಸರನ್ನೇ ಸರ್ ನೇಮ್ ಆಗಿ ಬಳಸಿಕೊಳ್ಳುವ ಹೊಸ ಆಲೋಚನೆಗೆ ಮುಂದಾಗುತ್ತಿದ್ದಾರೆ.

ನಗರದ ಹೆಸರನ್ನು ಸರ್ ನೇಮ್ ಮಾಡಿಕೊಂಡಿರುವುದು ಕೇವಲ ವಿಶಿಷ್ಟತೆ ತೋರಿಸುವ ಪ್ರಯತ್ನವಲ್ಲ. ಅದು ವ್ಯಕ್ತಿಯ ಮೌಲ್ಯಗಳು, ಸಮಾನತೆಯ ನಂಬಿಕೆ ಮತ್ತು ಸ್ವತಂತ್ರ ಗುರುತಿನ ಅಭಿವ್ಯಕ್ತಿಯಾಗಿದೆ. ಜಾತಿ ಅಥವಾ ಕುಟುಂಬ ಪರ ಹಿನ್ನೆಲೆ ಆಧಾರಿತ ಗುರುತಿನ ಬದಲು, ಎಲ್ಲರನ್ನು ಸಮಾನವಾಗಿ ನೋಡಬೇಕು ಎಂಬ ಸಂದೇಶವನ್ನು ಇದು ಸಾರುತ್ತದೆ.

ಇಂತಹ ನಿರ್ಧಾರಗಳ ಹಿಂದೆ ಸಾಮಾಜಿಕ ಚಿಂತನೆಯೂ ಅಡಗಿದೆ. ಸರ್ ನೇಮ್ ಆಧರಿಸಿ ವ್ಯಕ್ತಿಯನ್ನು ತೀರ್ಮಾನಿಸುವ ಪ್ರವೃತ್ತಿಯನ್ನು ಪ್ರಶ್ನಿಸುವುದೇ ಈ ರೀತಿಯ ಆಯ್ಕೆಯ ಮೂಲ ಉದ್ದೇಶ. ತಾವು ಬೆಳೆದ ನಗರವನ್ನು ತಮ್ಮ ಗುರುತಿನ ಭಾಗವನ್ನಾಗಿ ಮಾಡಿಕೊಳ್ಳುವುದರಿಂದ, ಆ ನಗರವು ನೀಡಿದ ಅವಕಾಶಗಳು, ಸಂಸ್ಕೃತಿ ಮತ್ತು ಜೀವನಾನುಭವಗಳಿಗೆ ಗೌರವ ಸಲ್ಲಿಸುವ ಭಾವನೆ ವ್ಯಕ್ತವಾಗುತ್ತದೆ. ಜೊತೆಗೆ, ನಗರ ಎನ್ನುವುದು ಎಲ್ಲರಿಗೂ ಸೇರಿರುವ ಸಾರ್ವಜನಿಕ ಗುರುತು ಆಗಿರುವುದರಿಂದ, ಅದು ವಿಭಜನೆಗಿಂತ ಏಕತೆ ಮತ್ತು ಒಕ್ಕೂಟವನ್ನು ಸೂಚಿಸುತ್ತದೆ.

ನಗರದ ಹೆಸರನ್ನು ಸರ್ ನೇಮ್ ಮಾಡಿಕೊಂಡವರು ತಮ್ಮನ್ನು ಯಾವುದೇ ಒಂದು ಸಾಮಾಜಿಕ ಗುಂಪಿಗೆ ಸೀಮಿತಗೊಳಿಸದೇ, ಮಾನವೀಯತೆಯನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಈ ರೀತಿಯ ಆಲೋಚನೆಗಳು ನಿಧಾನವಾಗಿ ಸಮಾಜದಲ್ಲಿ ಚರ್ಚೆಗೆ ಕಾರಣ ಆಗುತ್ತಿದ್ದು, ಗುರುತು ಎಂಬುದು ಪರಂಪರೆಯಿಂದ ಮಾತ್ರವಲ್ಲ, ವ್ಯಕ್ತಿಯ ಅರಿವು ಮತ್ತು ಆಯ್ಕೆಯಿಂದಲೂ ರೂಪುಗೊಳ್ಳಬಹುದು ಎಂಬುದನ್ನು ಒತ್ತಿ ಹೇಳುತ್ತಿವೆ. ಒಟ್ಟಿನಲ್ಲಿ, ನಗರದ ಹೆಸರನ್ನು ಸರ್ ನೇಮ್ ಆಗಿ ಬಳಸುವುದು ಆಧುನಿಕ ಸಮಾಜದಲ್ಲಿ ಬೆಳೆಯುತ್ತಿರುವ ಹೊಸ ಚಿಂತನೆ ಮತ್ತು ಪ್ರಗತಿಪರ ದೃಷ್ಟಿಕೋನದ ಪ್ರತಿಬಿಂಬವಾಗಿದೆ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+