Bengaluru Rain: ಗಮನಿಸಿ ಗುರುವಾರ ಸಂಜೆ ಜೋರು ಮಳೆ ಮುನ್ಸೂಚನೆ

ಬೆಂಗಳೂರು ಅಕ್ಟೋಬರ್ 12: ಬೆಂಗಳೂರಿನಲ್ಲಿ ಗುರುವಾರ ನಗರದ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ದಾಖಲಾಗಿದೆ. ಈ ಮಳೆ ಮುಂದಿನ 24 ಗಂಟೆವರೆಗೆ ಮುಂದುವರಿಯಲಿದ್ದು, ಇಂದು ಸಂಜೆಯಿಂದ ರಾತ್ರಿವರೆಗೆ ವ್ಯಾಪಕ ಮಳೆ ನಿರೀಕ್ಷೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಬೆಳಗ್ಗೆ ಆಗಾಗ ಬಿಸಿಲಿನ ವಾತಾವರಣ ಕಂಡು ಬಂತಾದರೂ ಬೆಂಗಳೂರು ಎಚ್‌ಎಎಲ್ ನಲ್ಲಿ ವಿಮಾನ ನಿಲ್ದಾಣದಲ್ಲಿ 12.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ನಗರ ವ್ಯಾಪ್ತಿಯಲ್ಲಿ 4.5 ಮಿಲಿ ಮೀಟ್ ಮಳೆ ದಾಖಲಾಗಿದೆ. ಸದ್ಯ ಕಂಡು ಬರುತ್ತಿರುವ ಬಿಸಿಲು ಸಂಜೆ ಮರೆಯಾಗಿ ಮತ್ತೆ ಬಿರುಸು ಮಳೆ ಆಗಲಿದೆ ಎಂದು ಅಂದಾಜಿಸಲಾಗಿದೆ.

Bengaluru Will Get Heavy Rain In Next 24 Hours, Cold Weather Creates In City Till October 26th

ಗುರುವಾರ ಜೋರು ಮಳೆಯಾದರೆ ಶುಕ್ರವಾರದಿಂದ ಮಳೆಯಲ್ಲಿ ಇಳಿಕೆಯ ಲಕ್ಷಣಗಳು ಕಂಡು ಬಂದಿವೆ. ಮುಂದಿನ ನಾಲ್ಕು ದಿನ (ಅಕ್ಟೋಬರ್ 16) ನಗರದ ಒಂದೆರಡು ಕಡೆಗಳಲ್ಲಿ ಮಾತ್ರ ತುಂತುರು ಮಳೆ ಇಲ್ಲವೇ ಹಗುರ ಮಳೆ ಸುರಿಯುವ ಸಾಧ್ಯತೆಗಳು ಇವೆ. ಇದರ ಹೊರತು ಸದ್ಯಕ್ಕೆ ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ನೆನ್ನೆ ರಾತ್ರಿ ವಿವಿಧೆಡೆ ಅಬ್ಬರ ಮಳೆ

ನಗರದಲ್ಲಿ ಕಳೆದ ಭಾನುವಾರದಿಂದಲೇ ತಂಪು ವಾತಾವರಣ ಸಹಿತ ಜೋರು ಮಳೆ ಆಗುತ್ತಿದೆ. ಸೋಮವಾರ ಅತ್ಯಧಿಕ ಮಳೆ ಆಗಿದ್ದು, ನೆನ್ನೆ ಬುಧವಾರ ವಿವಿಧೆಡೆ ಮಳೆ ಸುರಿದ ಹಲವೆಡೆ ತೊಂದರೆ ಆಯಿತು.

ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನ ವರ್ತೂರಿನಲ್ಲಿ ಅತ್ಯಧಿಕ 42 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದರೊಂದಿಗೆ ಕುಮಾರಸ್ವಾಮಿ ಬಡಾವಣೆ, ವಿದ್ಯಾಪೀಠ, ಬಸವನಗುಡಿ, ಹಗದೂರು, ಎಚ್‌ಎಎಲ್ ವಿಮಾನ ನಿಲ್ದಾಣ, ಉತ್ತರಹಳ್ಳಿ, ಬೆಳ್ಳಂದೂರು, ಹಂಪಿನಗರ, ವಿಶ್ವೇಶ್ವರಪುರಂ, ಚಾಮರಾಜಪೇಟೆ, ಜ್ಞಾನಭಾರತಿ ಸೇರಿದಂತೆ ವಿವಿಧ ಕಡೆಗಳಲ್ಲಿ ಅಧಿಕ ಮಳೆ ಆಗಿದೆ.

Bengaluru Will Get Heavy Rain In Next 24 Hours, Cold Weather Creates In City Till October 26th

ನಗರದ ತಾಪಮಾನ ಮಾಹಿತಿ

ಮುಂದಿನ ನಾಲ್ಕು ದಿನ ನಗರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಸುಮಾರು ಒಂದು ವಾರ ತಂಪು ವಾತಾವರಣವೇ ಮುಂದುವರಿಯುವ ಸಾಧ್ಯತೆ ಇದೆ.

ಬಂಗಾಳಕೊಲ್ಲಿ ಸಮುದ್ರಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಐಎಂಡಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+