ಬೆಂಗಳೂರಲ್ಲಿ ಬಿಸಿಲ ಝಳ; ಇದು ಚಳಿಗಾಲವೋ, ಬೇಸಿಗೆಯೋ?

ಬೆಂಗಳೂರು, ಫೆಬ್ರವರಿ 01 : ಎಲ್ಲರೂ ಬಾಯ್ತುಂಬ ಹೊಗಳುತ್ತಿದ್ದ ಬೆಂಗಳೂರಿನ ಹವಾಮಾನಕ್ಕೆ ಈಗ ಏನಾಗಿದೆ?. ಚಳಿಗಾಲದಲ್ಲಿ ಬೇಸಿಗೆಯ ಅನುಭವ ಕೊಡುವಂತಹ ಸುಡು ಬಿಸಿಲು ಇದೆ. ಉಷ್ಣಾಂಶ ದಾಖಲೆಯನ್ನು ಬರೆದಿದೆ.

ಈ ವಾರ ಬೆಂಗಳೂರಿನಲ್ಲಿ ಚಳಿ ಮಾಯವಾಗಿದೆ. 11 ಗಂಟೆ ಬಳಿಕ ಬಿಸಿಲಿನ ಝಳ ಜೋರಾಗಿದೆ. ಜನರು ಕಬ್ಬಿನ ಹಾಲು, ಎಳನೀರು, ಕಲ್ಲಂಗಡಿ ಅಂಗಡಿಗಳನ್ನು ಹುಡುಕುತ್ತಿದ್ದಾರೆ. ಜನವರಿ 31ರಂದು ನಗರದಲ್ಲಿ 33.4 ಡಿಗ್ರಿ ತಾಪಮಾನ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆಯೇ ನೀಡುವ ಮಾಹಿತಿಯಂತೆ ಜನವರಿ ತಿಂಗಳಿನಲ್ಲಿ 33.4 ಡಿಗ್ರಿ ತಾಪಮಾನ ದಾಖಲಾಗಿದ್ದು ಇದೇ ಮೊದಲು. 2000ನೇ ಇಸವಿಯಲ್ಲಿ ಜನವರಿ 24ರಂದು 32.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.

Bengaluru Weather Highest Temperature Recorded In January

ಇದು ಚಳಿಗಾಳ, ಬೆಂಗಳೂರಲ್ಲಿ ರಾತ್ರಿ ಮತ್ತು ಮುಂಜಾನೆ ಭಾರಿ ಚಳಿ ಇರುತ್ತಿತ್ತು. ಆದರೆ, ಈಗ ಚಿತ್ರಣವೇ ಬದಲಾಗಿದೆ. ರಾತ್ರಿ ಫ್ಯಾನಿಲ್ಲದೇ ನಿದ್ದೆ ಬರುತ್ತಿಲ್ಲ. ಮುಂಜಾನೆ ವಾಕಿಂಗ್ ಹೋಗಲು ಹೊರಟರೆ ಮಂಕಿ ಕ್ಯಾಪ್, ಜರ್ಕಿನ್ ಅಗತ್ಯವಿಲ್ಲ.

ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರು ನಗರದ ಉಷ್ಣಾಂಶ 35 ಡಿಗ್ರಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಫೆಬ್ರವರಿಯಲ್ಲಿಯೂ ಉದ್ಯಾನ ನಗರಿಯ ಜನರು ಬಿಸಿಲಿನ ಝಳಕ್ಕೆ ಮೈಯೊಡ್ಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+