Bengaluru Weather: ನಗರದಲ್ಲಿ ಶೇ.2ರಷ್ಟು ತಾಪಮಾನ ಇಳಿಕೆ, ಚಳಿ ಏರಿಕೆ: 4 ದಿನ ಮಳೆ ಎಚ್ಚರಿಕೆ

ಬೆಂಗಳೂರು, ಜನವರಿ 28: ರಾಜಧಾನಿ ಬೆಂಗಳೂರಿನಲ್ಲಿ ಕೇವಲ 24 ಗಂಟೆಯಲ್ಲಿ ವಿಪರೀತ ಚಳಿ ಬೀಸಲಾರಂಭಿಸಿದೆ. ಹವಾಮಾನದಲ್ಲಿ ಉಂಟಾದ ಬದಲಾವಣೆಗಳ ಕಾರಣದಿಂದ ದಿಢೀರ್ ಚಳಿ ಏರಿಕೆ ಆಗಿದೆ. ಇಂದು ಮಂಗಳವಾರ (ಜ. 28) ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ. ನಗರದ ಕನಿಷ್ಠ ಚಳಿ ಪ್ರಮಾಣದಲ್ಲಿ 02 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಜನವರಿ 30ರವರೆಗೆ ಇದೇ ರೀತಿ ಚಳಿಯ ವಾತಾವರಣ ಮುಂದುವರಿಯಲಿದ್ದು, ನಂತರ 04 ದಿನಗಳ ಕಾಲ ಮಳೆಯ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ವಾತಾವರಣ ಸಹಜ ಸ್ಥಿತಿಗೆ ಬಂತು ಎನ್ನುವಷ್ಟರಲ್ಲಿ ಸೋಮವಾರ ರಾತ್ರಿ ಚಳಿಯು ದಿಢೀರ್ ಏರಿಕೆ ಆಗಿದೆ. ಇಂದು ಬೆಳಗಿನ ಮುಂಜಾನೆ ವಿಪರೀತ ಚಳಿ ದಾಖಲಾಗಿದೆ. 16 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ.

Bengaluru Weather Forecast Cold and Fog Climate Increase in City Rain Expected on Jan 31

ಮಂಗಳವಾರ ಬೆಳಗ್ಗೆ ಬೆಂಗಳೂರು ಎಚ್‌ಎಎಲ್‌ ನಲ್ಲಿ 14 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (ಕೆಐಎಎಲ್)ನಲ್ಲಿ 15 ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 15.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನವು 29 ರಿಂದ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಚಳಿ ಜೊತೆಗೆ ಮಳೆ ಮುನ್ಸೂಚನೆ

ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಸಮುದ್ರ ಮೇಲ್ಮೈನಲ್ಲಿನ ಸುಳಿಗಾಳಿ ಬೀಸುವಿಕೆ ಪ್ರಮಾಣದಲ್ಲಿನ ಏರಿಳಿತ ಪ್ರಭಾವದಿಂದ ಬೆಂಗಳೂರು ಸೇರಿ ವಿವಿಧೆಡೆ ಚಳಿ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ ತೀವ್ರ ಬಿಸಿಲು, ಒಣಹವೆಯ ವಾತವರಣ ಕಂಡು ಬರುತ್ತಿದೆ. ಸಂಜೆ ನಂತರ ಬೆಳಗ್ಗೆ ಸುಮಾರು 08 ಗಂಟೆವರೆಗೆ ಚಳಿ ಮುಂದುವರಿಯುತ್ತಿದೆ. ಇದೇ ವಾತಾವರಣ ಇನ್ನೂ ಮೂರು ದಿನ ಮುಂದುವರಿಯು ಮುನ್ಸೂಚನೆ ಇದೆ. ನಂತರ ನಗರಾದ್ಯಂತ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.

Bengaluru Weather Forecast Cold and Fog Climate Increase in City Rain Expected on Jan 31

ಬೆಂಗಳೂರಿನಲ್ಲಿ ಜನವರಿ 31ರಿಂದ ಫೆಬ್ರವರಿ 3ರವರೆಗೆ ನಗರಾದ್ಯಂತ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ನಗರದಲ್ಲಿ ಒಟ್ಟು 04 ದಿನಗಳ ಕಾಲ ವಿವಿಧ ಬಡಾವಣೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತ ಪರಿಚಲನೆ ತೀವ್ರತೆ ಇಳಿಕೆ ಆದರೂ ಸಹಿತ ಚಳಿ, ಮಳೆಯ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+