Bengaluru Water Cut: ಬೆಂಗಳೂರಿನ ಹಲವೆಡೆ ಜುಲೈ 31ರಂದು ಕಾವೇರಿ ನೀರು ಬರಲ್ಲ! ಎಲ್ಲೆಲ್ಲಿ?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕುಡಿಯುವ ನೀರು ಸರಬರಾಜಿನಗರಲ್ಲಿ ಆಗಾಗ ವ್ಯತ್ಯಯವಾಗುತ್ತಿದೆ. ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ ಕಾವೇರಿ ನೀರು ಸರಬರಾಜು ತುರ್ತು ಕಾಮಗಾರಿ ಕೈಗೊಳ್ಳುವುದಾಗಿದೆ. ಇದೀಗ ಅಂಥದ್ದೇ ತುರ್ತು ಕೆಲಸದ ಪ್ರಯುಕ್ತ ಜುಲೈ 31ರಂದು ಅನೇಕ ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾವೇರಿ ಯೋಜನೆ 5ನೇ ಹಂತದ 3000 ಮೀ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿನ ಸ್ಕೌರ್‌ ವಾಲ್ವ್ (Scour Valve) ಸೋರಿಕೆಯನ್ನು ತಡೆಗಟ್ಟಲು ಜಲಮಂಡಳಿ ಮುಂದಾಗಿದೆ. ಈ ಸಂಬಂಧ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಇದೇ ಜುಲೈ 31, 2026 ರಂದು ಶುಕ್ರವಾರ ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 09ರವರೆಗೆ ಒಟ್ಟು 15 ಗಂಟೆಗಳ ಕಾಲ ಜಲರೇಚಕ ಯಂತ್ರಗಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಯಾವೆಲ್ಲ ಪ್ರದೇಶಗಳಲ್ಲಿ ನೀರಿನ ಸರಬರಾಜು ನಿಲ್ಲಲಿದೆ ಎಂಬ ಮಾಹಿತಿ ಮುಂದಿದೆ.

Bengaluru Water Shutdown

ನೀರು ವ್ಯತ್ಯಯದ ಬಡಾವಣೆಗಳ ವಿವರ

ನಗರದ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಕೆಂಚನಹಳ್ಳಿ, ಗೋವಿಂದಪುರ, ವಾಸುದೇವಪುರ, ಮಂಚೇನಹಳ್ಳಿ, ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಳ್ಳಳ್ಳಿ, ತಿರುಮೆನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ರಾಚೇನಹಳ್ಳಿ, ಥಣೀಸಂದ್ರ, ಚಳ್ಳೆಕೇರೆ, ಹೊರಮಾವು ಆಗರ, ಅಮಾನಿ, ಬೈರತಿಖಾನೆ, ಗೆದ್ದಲಹಳ್ಳಿ, ಕೊತ್ತನೂರು ನಾರಾಯಣಪುರ, ಕೊತ್ತನೂರು, ಎನ್ ನಾಗೇನಹಳ್ಳಿ, ಕೈಲಾಸನ ಹಳ್ಳಿ, ಬೈರತಿ, ಬಿಳಿಶಿನಹಳ್ಳಿ, ಬಳಗೆರೆ, ಬೆಳ್ಳಂದೂರು ಅಮಾನಿಕೆರೆ, ಬೆಳತ್ತೂರು, ಬೆನ್ನಸಂದ್ರ, ದೇವರಬೀಸನಹಳ್ಳಿ.

ಅಬ್ಬಿಗೆರೆ, ಚಿಕ್ಕಸಂದ್ರ, ಶೆಟ್ಟಹಳ್ಳಿ, ಕರಿಹೋಬನಹಳ್ಳಿ, ಅಂಧರಹಳ್ಳಿ, ಮ್ಯಾಡರಹಳ್ಳಿ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೆರೋಹಳ್ಳಿ, ಹೊಸಹಳ್ಳಿ, ಗುಂಜೂರು, ಹಗದೂರು, ಕಾಡು ಬೀಸನಹಳ್ಳಿ, ಕಾಯಮ್ಮನ ಅಗ್ರಹಾರ, ಕಾಡೋಗೋಡಿ ಪ್ಲಾಂಟೆಸನ್, ಕಾಣೇಕಂಡ್ಯ, ಕುಂಬೇನ ಅಗ್ರಹಾರ, ನಾಗೋಂಡಹಳ್ಳಿ, ಪಣತ್ತೂರು, ರಾಮಗೊಂಡನಹಳ್ಳಿ, ಸಿದ್ದಾಪುರ ಸೋರಹುಣಸೆ, ತುಬರಹಳ್ಳಿ, ವರ್ತೂರು, ಕಲ್ಕರೆ, ಹೋರಮಾವು, ಕೆ. ಚೆನ್ನಸಂದ್ರ, ವಾರಣಾಸಿ, ವಸಂತಪುರ, ಉಲ್ಲಾಳ ಸೋಣ್ಣೆನಹಳ್ಳಿ, ಗಾಣಾಕಲ್ಲು, ಹೆಮ್ಮಿಗೆಪುರ, ಸೋಮಪುರ, ವಾರಸಂದ್ರ, ಲಿಂಗದೀರನಹಳ್ಳಿ, ಹೊಸಹಳ್ಳಿ, ಅರೇನಹಳ್ಳಿ, ವಡ್ಡರಪಾಳ್ಯ ಉತ್ತರಹಳ್ಳಿ, ಸುಬ್ರಮಣ್ಯಪುರ, ಗುಬ್ಬಲಾಳ, ತುರಹಳ್ಳಿ, ಗಿಡದಕೋನೆನಹಳ್ಳಿ, ಆಲಹಳ್ಳಿ, ಅಂಬಲಿಪುರ, ಅಂಜನಾಪುರ, ಬಸಪುರ, ಬಸವನಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಇನ್ನೂ ಬೇಗೂರು, ಬೆಳ್ಳಂದೂರು, ಚಂದ್ರಶೇಖರಪುರ, ದೊಡ್ಡಕಲ್ಲಸಂದ್ರ, ಗೊಲ್ಲಹಳ್ಳಿ, ಗೊಟ್ಟಿಗೆರೆ, ಅರಳೂರು, ಜುನಸಂದ್ರ, ಕೈಕೊಂಡನಹಳ್ಳಿ, ಕಾಳೇನ ಅಗ್ರಹಾರ, ಕಂಬತ್ತಹಳ್ಳಿ, ಕಮ್ಮನಹಳ್ಳಿ, ಕಸವನಹಳ್ಳಿ, ಕೂಡಲು, ಪರಪ್ಪನ ಅಗ್ರಹಾರ, ಪಿಳ್ಳಗಾನಹಳ್ಳಿ, ರಘುವನಹಳ್ಳಿ, ತಲಘಟ್ಟಪುರ, ತಿಪ್ಪಸಂದ್ರ, ವಾಜರಹಳ್ಳಿ, ಯಲೇನಹಳ್ಳಿ, ಭರತೇನ ಅಗ್ರಹಾರ, ಬೋಗನಹಳ್ಳಿ, ಚಿಕ್ಕಬೆಳ್ಳಂದೂರು, ಚಿಕ್ಕತೇಗೂರು, ದೊಡ್ಡಕನ್ನಹಳ್ಳಿ, ದೊಡ್ಡತೆಗೂರು, ನಾಗನಾತಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ಅಡಚಣೆ ಆಗಲಿದೆ. ನಾಗರಿಕರು ಅಗತ್ಯ ನೀರು ಸಂಗ್ರಹಿಟ್ಟುಕೊಳ್ಳಬೇಕು. ಜೊತೆಗೆ ತಾತ್ಕಾಲಿಕ ಅಡಚಣೆಗೆ ಸಹಕರಿಸುವಂತೆ ಜಲಡಮಂಡಳಿಯು ಪ್ರಕಟಣೆಯಲ್ಲಿ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+