Water Shut Down: ಫೆಬ್ರವರಿ 20ರಂದು ಕಾವೇರಿ ನೀರು ಪೂರೈಕೆ ವ್ಯತ್ಯಯ: ಎಲ್ಲೆಲ್ಲಿ?

ಬೆಂಗಳೂರು ಫೆಬ್ರವರಿ 18: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ವ್ಯಾಪ್ತಿಯಲ್ಲಿ ಫೆಬ್ರವರಿ 20ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ. ಜಲಮಂಡಳಿಯ ಕಾವೇರಿ 4ನೇ ಹಂತ 2ನೇ ಘಟ್ಟದ ಕಾನಿಅ (ಪೂರ್ವ)1 ರ ವ್ಯಾಪ್ತಿಗೆ ಒಳಪಡುವ ಮಾರತ್ತಹಳ್ಳಿ, ಜೀವಿಕಾ ಆಸ್ಪತ್ರೆ ಸಮೀಪ 800 ಮಿ.ಮೀ. ವ್ಯಾಸದ ಹೂಡಿ ಜಿ.ಎಲ್.ಆರ್ ಒಳ ಹರಿವು ಮಾರ್ಗವನ್ನು ಸ್ಥಗಿತಗೊಳಿಸಿ ಕಾಮಗಾರಿ ನಡೆಸಲಾಗುತ್ತಿದೆ.

ಈ ಕಾರಣದಿಂದ ಗುರುವಾರ (ಫೆ.20) ದಂದ ಈ ಕೆಳಗಿನ ಪ್ರದೇಶ, ಬಡಾವಣೆಗಳಲ್ಲಿ ಬೆಳಗ್ಗೆ 09ರಿಂದ ರಾತ್ರಿ 09ರವರೆಗೆ ಸುಮಾರು 12 ಗಂಟೆಗಳ ಕಾಲ ಕಾವೇರಿ ನೀರುಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ನೀರಿನ ಸರಬರಾಜು ಸ್ಥಗಿತದ ಪ್ರದೇಶಗಳ ವಿವರ ಹೀಗಿದೆ.

Bengaluru Water Shut Down on February 20th BWSSB

ನೀರು ಪೂರೈಕೆಯಲ್ಲಿ ವ್ಯತ್ಯಯದ ಸ್ಥಳಗಳು

ಬೆಂಗಳೂರಿನ ಮಾರತ್ತಹಳ್ಳಿ, ದೊಡ್ಡನ್ನೆಕುಂದಿ, ಮುನ್ನೆಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ವೇಸ್ಟ್‌ ಮಾಡಿದರೆ ಕಟ್ಟಿ 5000 ರೂ. ದಂಡ

ಬೆಂಗಳೂರಿನಲ್ಲಿ ಕಳೆದ ಭಾರಿ ಬೇಸಿಯಲ್ಲಿ ಇನ್ನಿಲದಂತೆ ನೀರಿಗೆ ಹಾಹಾಕಾರ ಎದುರಾಗಿತ್ತು. ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ, ಅಂತರ್ಜಲ ಕುಸಿತದಿಂದ ಈ ಬಾರಿ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು BWSSB ಸಜ್ಜಾಗಿದೆ. ನೀರು ವೇಸ್ಟ್ ಮಾಡುವವರ ವಿರುದ್ಧ ಸಾವಿರಾರು ರೂ. ದಂಡ ವಿಧಿಸಲು ಜಲಮಂಡಳಿ ಸಜ್ಜಾಗಿದೆ.

ಲಭ್ಯವಿರುವ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುವುದು ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರನ್ನು ಸಾರ್ವಜನಿಕರು ವ್ಯರ್ಥವಾಗಿ ಬಳಸುವುದನ್ನು ತಪ್ಪಿಸಲು, ಕುಡಿಯುವ ನೀರು ಪೋಲು ಮಾಡುವವರ ವಿರುದ್ದ ದಂಡ ವಿಧಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ. ಈ ಕುರಿತು ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ.ರಾಮ್‌ ಪ್ರಸಾತ್ ಮನೋಹರ್‌ ಆದೇಶಿಸಿದ್ದಾರೆ.

ಈ ಆದೇಶದಲ್ಲಿ ಕುಡಿಯುವ ನೀರನ್ನು ಗಾಡಿ ತೊಳೆಯಲು, ಗಾರ್ಡನ್ ಬಳಕೆ ಇನ್ನಿತರ ಅನವಶ್ಯಕೆ ಬಳಕೆಗೆ ಉಪಯೋಗಿ ವ್ಯರ್ಥಗೊಳಿಸಿದರೆ ಅಂಥವರಿಗೆ 5000 ರೂಪಾಯಿ ದಂಡಿ ವಿಧಿಸಲಾಗುತ್ತದೆ. ಇದೇ ತಪ್ಪು ಪುನರಾವರ್ತನೆ ಆದರೆ 500 ರೂ. ಹೆಚ್ಚುವರಿ ವಿಧಿಸಬೇಕಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷರು ಆದೇಶ ಜನತೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+