BWSSB-BBMP: ನೀರು ಪೂರೈಕೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?: ಟ್ಯಾಂಕರ್ ಮಾಲೀಕರು ಗಮನಿಸಿ

ಬೆಂಗಳೂರು, ಮಾರ್ಚ್ 02: ಉದ್ಯಾನ ನಗರಿಯಾದ ಬೆಂಗಳೂರಿನಲ್ಲಿ ದಿನೇ ದಿನೆ ಬಿಸಿಲಿನ ಕಾವು ಏರತೊಡಗಿದೆ. ಇತ್ತ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಸಮಸ್ಯೆ ಬಗೆಹರಿಸುವ ಕ್ರಮದ ಭಾಗವಾಗಿ ವಾಟರ್ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡುತ್ತಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ಟ್ಯಾಂಕರ್ ಮಾಲೀಕರಿಗೆ ಸ್ವಯಂ ನೋಂದಣಿ ಮಾಡಿಕೊಳ್ಳುವಂತೆ ಬಿಬಿಎಂಪಿ ತಿಳಿಸಿದೆ.

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಭೆ ನಡೆಸಿ, ಟ್ಯಾಂಕರ್ ದರ ನಿಗದಿ ಜತೆಗೆ ಟ್ಯಾಂಕರ್ ಮಾಲೀಕರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ಆನ್‌ಲೈನ್ ಮೂಲಕ ಸ್ವಯಂ ನೋಂದಣಿಗೆ ಅವಕಾಶ ಕಲ್ಪಿಸಿದೆ. ಇದಕ್ಕೆ ವೆಬ್‌ಪೋರ್ಟಲ್ ವೊಂದನ್ನು ಹೊಸದಾಗಿ ರಚಿಸಲಾಗಿದೆ.

Bengaluru Water Crisis Water Tanker Owners How to Online Registration for Water Supply Details

ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗುತ್ತಿದ್ದಂತೆ ವಾಟರ್ ಟ್ಯಾಂಕರ್ ಮಾಫಿಯಾ ಶುರುವಾಗಿದೆ ಎನ್ನಲಾಗಿದೆ. ಇದರ ತಡೆಗೆ ಕೆಲವು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಿನ ಟ್ಯಾಂಕರ್ ಗಳು ಸ್ವಯಂ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಹಾಗಾದರೆ ಸ್ವಯಂ ನೋಂದಣಿ ಹೇಗೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ವಾಟರ್ ನೋಂದಣಿ ಹೇಗೆ? ಎಲ್ಲಿ? ಮಾಹಿತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯು ಹೊಸದಾಗಿ ಅಭಿವೃದ್ಧಿಪಡಿಸಿರುವ ಪೋರ್ಟಲ್‌ನಲ್ಲಿ https://bbmp.oasisweb.in/TankerManagement/SelfRegistration.aspx ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ನೋಂದಣಿ ಮಾಡಿಕೊಳ್ಳಬೇಕು.

Bengaluru Water Crisis Water Tanker Owners How to Online Registration for Water Supply Details

ಇದೇ ಮಾರ್ಚ್ 1ರಿಂದ 07ರವರೆಗೆ ವಾಟರ್ ಟ್ಯಾಂಕರ್ ಮಾಲೀಕರು ತಮ್ಮ ಹೆಸರು, ವಿಳಾಸ, ವಲಯ, ಪಿನ್ ಕೋಡ್, ಮೊಬೈಲ್ ಸಂಖ್ಯೆ, ಟ್ಯಾಂಕರ್ ವಾಹನದ ಸಂಖ್ಯೆ, ಬ್ಯಾಂಕರ್ ಸಾಮರ್ಥ್ಯ, ಚಾಲಕನ ಹೆಸರು, ಚಾಲಕನ ಡ್ರೈವಿಂಗ್ ಲೈಸನ್ಸ್ ಮಾಹಿತಿಗಳನ್ನು ದಾಖಲಿಸಿ ಮೇಲ್ಕಂಡ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಪ್ರಮಾಣಪತ್ರ ನಿಮ್ಮೊಂದಿಗಿರಲಿ

ಸದರಿ ಪೋರ್ಟಲ್ ಮೂಲಕ ಪಡೆಯಲಾಗಿರುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ವಾಹನ ಚಾಲಕರೊಂದಿಗೆ ಇಟ್ಟುಕೊಂಡಿರಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನೀವು ಪಾಲಿಕೆ ಸಂಪರ್ಕಿಸಬಹುದಾಗಿದೆ.

ಬಿಬಿಎಂಪಿ ಎಚ್ಚರಿಕೆ

ಆದಷ್ಟು ಶೀಘ್ರವೇ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಸೇರಿ ವಾಟರ್ ಟ್ಯಾಂಕರ್ ನೀರಿಗೆ ಇಂತಿಷ್ಟು ದರವನ್ನು ಶೀಘ್ರವೇ ನಿಗದಿ ಮಾಡಲಿದೆ. ದರ ನಿಗದಿ ಬಳಿಕವೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+