Bengaluru Water Crisis: ನೀರಿಗೆ ಸಮಸ್ಯೆಯೇ? ಆನ್‌ಲೈನ್‌ನಲ್ಲಿ ನೀರಿನ ಟ್ಯಾಂಕರ್ ಬುಕ್ ಮಾಡಿ, ಮಾಹಿತಿ ಇಲ್ಲಿದೆ
ಬೆಂಗಳೂರು, ಮಾರ್ಚ್ 07: ರಾಜ್ಯದ ನಿಜಕ್ಕೂ ಸಂಕಷ್ಟದ ಸಮಯದಲ್ಲಿದೆ. ನೀರಿನ ಕೊರತೆಯಿಂದ ಜನರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಬೆಂಗಳೂರಿನಲ್ಲಂತೂ ನೀರಿನ ಹಾಹಾಕಾರ ಹೆಚ್ಚಾಗಿದೆ. ನೀರಿನ ಸಮಸ್ಯೆಗಳ ಕಾರಣ ಸರ್ಕಾರ ಕೂಡ ಹಲವು ಕ್ರಮಗಳಿಗೆ ಮುಂದಾಗುತ್ತಿದೆ.
ಹೀಗಾಗಿಯೇ ಖಾಸಗಿ ನೀರಿನ ಟ್ಯಾಂಕರ್‌ಗಳು ಮತ್ತು ಬೋರ್‌ವೆಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಜನರಿಗೆ ಸಮಾನವಾಗಿ ನೀರು ಹಂಚಿಕೆ ಮಾಡಲು ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟಿನ ಕಾರಣ ಟ್ಯಾಂಕರ್‌ಗಳ ಬೆಲೆ ಕೂಡ ಗಗನಕ್ಕೆ ಏರಿಕೆಯಾಗಿದೆ.

ಈ ಹಿಂದೆ 500 ರೂ.ಗೆ ಇದ್ದ 5,000 ಲೀಟರ್ ನೀರಿನ ಟ್ಯಾಂಕರ್ ಈಗ 2,000 ರೂಪಾಯಿಗೆ ಏರಿಕೆಯಾಗಿದ್ದು, ಜನರ ಜೇಬುಗಳಿಗೆ ಕನ್ನ ಹಾಕುತ್ತಿದೆ. ಇದೇ ಕಾರಣಕ್ಕೆ ಸರ್ಕಾರ ಟ್ಯಾಂಕರ್ ಮಾಫಿಯಾದಲ್ಲಿ ತಲೆ ಹಾಕಿದ್ದು, ಖಾಸಗಿ ಟ್ಯಾಂಕ್ರರಗಳ ಹಾವಳಿಗೆ ನಿಯಂತ್ರಣ ಹಾಕಲು ಮುಂದಾಗಿದೆ.
ಬೆಂಗಳೂರಿನ ಸೊಸೈಟಿಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ನೀರನ್ನು ಕಡಿಮೆ ಬಳಸಲು ಮತ್ತು ಮರುಬಳಕೆ ಮಾಡಲು ಸಲಹೆ ನೀಡಿವೆ. ಬೆಂಗಳೂರಿಗೆ ಏಕೈಕ ಕುಡಿಯುವ ನೀರಿನ ಮೂಲವಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟವು ವೇಗವಾಗಿ ಕುಸಿಯುತ್ತಿದೆ.
ನೀರಿನ ಬಿಕ್ಕಟ್ಟಿಗಾಗಿ ಸಿದ್ದರಾಮಯ್ಯ ಸರ್ಕಾರವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕಿಸಲು ನಿವಾಸಿಗಳಿಗೆ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಇದು ನೀರು ಬಿಡುಗಡೆಯಾಗುವ ಸಮಯ, ನೀರಿನ ಲಭ್ಯತೆ ಮತ್ತು ನೀರಿನ ಟ್ಯಾಂಕರ್‌ಗಳ ಬುಕಿಂಗ್‌ಗೆ ಸಹಾಯ ಮಾಡುತ್ತದೆ.

ನೀರಿನ ಕೊರತೆಯಿಂದ ತೊಂದರೆ ಎದುರಿಸುತ್ತಿರುವ ನಿವಾಸಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವೆಬ್‌ಸೈಟ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಆನ್‌ಲೈನ್‌ನಲ್ಲಿ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಬಹುದು. ನೋಂದಣಿಗಾಗಿ, ಅರ್ಜಿದಾರರು ಕೆಳಗೆ ನಮೂದಿಸಿದ ವಿವರಗಳನ್ನು ಒದಗಿಸಬೇಕಾಗುತ್ತದೆ
ನೀರಿನ ಟ್ಯಾಂಕರ್ ಆರ್ಡರ್ ಮಾಡಲು ನೋಂದಣಿಗೆ ಅಗತ್ಯವಿರುವ ವಿವರಗಳು:
* ಹೆಸರು:
* ಶಾಶ್ವತ ವಿಳಾಸ:
* ಸಂಪರ್ಕ ಸಂಖ್ಯೆ:
* ವಲಯ (ಎಂಟು ವಲಯಗಳಲ್ಲಿ):
* ಪಿನ್ ಕೋಡ್:
BWSSB ಯಿಂದ ವಾಟರ್ ಟ್ಯಾಂಕರ್ ಅನ್ನು ಹೇಗೆ ಆರ್ಡರ್ ಮಾಡುವುದು?
ಸಾರ್ವಜನಿಕರು ಟೋಲ್-ಫ್ರೀ ಸಂಖ್ಯೆ 1916 (Bwssb ಸಹಾಯವಾಣಿ) ಅನ್ನು ಸಂಪರ್ಕಿಸುವ ಮೂಲಕ ನೀರಿನ ಕೊರತೆಯಿರುವ ಪ್ರದೇಶಗಳ ಬಗ್ಗೆ ತಮ್ಮ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಸಲ್ಲಿಸಬಹುದು. ಇದಲ್ಲದೆ, [email protected] ಗೆ ತಮ್ಮ ಸಮಸ್ಯೆಗಳನ್ನು ಇಮೇಲ್ ಕಳುಹಿಸಬಹುದು.












Click it and Unblock the Notifications