ವಿಷ್ಣುವರ್ಧನ್ ಫೋಟೋಗೆ "ಆ ಮಾಡೋ.." ಎಂದ ಯುವಕ, ನಾಡಗೀತೆಗೂ ಅಗೌರವ; ಕಿಚ್ಚು ಹೊತ್ತಿಸಿದ ವಿಡಿಯೋ
Bengaluru Viral Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಬೆಂಗಳೂರಿನ ಒಂದು ವಿಡಿಯೋ ಕನ್ನಡಿಗರು ಹಾಗೂ ನಟ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿಗೆ ನೋವುಂಟುಮಾಡಿದೆ. ವಿಡಿಯೋದಲ್ಲಿ ಯುವಕನೊಬ್ಬ ಹಿರಿಯ ನಟ ವಿಷ್ಣುವರ್ಧನ್ ಅವರ ಫೋಟೋ ಮುಂದೆ ನಿಂತು ಅಸಂಬದ್ಧವಾಗಿ ವರ್ತಿಸಿರುವುದು ಕಂಡುಬಂದಿದೆ. ಇದೇ ವೇಳೆ, ತಾಯಿ ಭುವನೇಶ್ವರಿ ಚಿತ್ರದ ಮುಂದೆ ನಾಡಗೀತೆಯನ್ನು ವ್ಯಂಗ್ಯವಾಗಿ ಹಾಡಿರುವ ದೃಶ್ಯವೂ ವಿಡಿಯೋದಲ್ಲಿದೆ.
ಯುವಕನೊಂದಿಗೆ ಇದ್ದ ಯುವತಿಯರು ಕೂಡ ಈ ವರ್ತನೆಗೆ ನಕ್ಕು ಬೆಂಬಲ ನೀಡಿದ್ದಾರೆ. ವಿಷ್ಣುವರ್ಧನ್ ಫೋಟೋ ಎದುರು ನಿಂತು "ಆ ಮಾಡೋ..." ಎಂದಿದ್ದಾನೆ ಯುವಕ. ಈ ವಿಡಿಯೋವನ್ನು "ಕನ್ನಡ್ವಿರಾಟ" ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಕಾಣಿಸಿಕೊಂಡಿರುವವರು ಜೆ.ಪಿ.ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೆಂದು ಉಲ್ಲೇಖಿಸಲಾಗಿದೆ.

"ಯುವಕರು ವಿಷ್ಣುದಾದ ಹಾಗು ಕನ್ನಡ ತಾಯಿ ಚಿತ್ರವನ್ನು ವಿಕೃತಿಗೊಳಿಸುತಿದ್ದಾರೆ. ಈ ವಲಸೆ ಜೀವಿಗಳು ಓದಲು ನಮ್ಮ ಬೆಂಗಳೂರಿಗೆ ಬಂದು ಓದ್ಕೊಂಡು ಹೋಗೊ ಬದಲು, ನಮ್ಮ ನಾಡಿನ ಜೀವ ಕನ್ನಡ ತಾಯಿಯ ಫೋಟೋ ಹಾಗು ನಮ್ಮ ನೆಚ್ಚಿನ ಕೋಟಿಗೊಬ್ಬ ವಿಷ್ಣುದಾದ ಅವರ ಫೋಟೋವನ್ನು ಕೆಟ್ಟದಾಗಿ ವಿಕೃತಿಗೊಳಿಸಿ, ಅಸಹ್ಯ ಸನ್ನೆ ಮಾಡಿ ಅಯೋಗ್ಯತನವನ್ನು ತೋರಿಸುತ್ತಿದ್ದಾರೆ. ನಮ್ಮ ನಾಡಿನ ಹೆಮ್ಮೆ ಗೌರವ ಅಸ್ಮಿತೆ ಇದರ ಅರಿವು ಇಲ್ಲದ ಈ ವಲಸೆ ಕ್ರಿಮಿಗಳು, ನಮ್ಮ ನಾಡು ಹಾಗೂ ನಾಡಿನ ಹೆಮ್ಮೆಯ ಸ್ವಾಭಿಮಾನದ ಚಿತ್ರಗಳಿಗೆ ಅವಮಾನ ಮಾಡಿರೋದು ಘೋರ ಅಪರಾಧ. ಇವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ನಮ್ಮ ಪೋಲಿಸ್ ಇಲಾಖೆ ಕೂಡ ಈ ಕ್ರಿಮಿಗಳನ್ನು ಪತ್ತೆಹಚ್ಚಿ ಬುದ್ಧಿ ಕಲಿಸಬೇಕು" ಎಂದು ಆಗ್ರಹಿಸಿದ್ದಾರೆ.
🚨ಜೆಪಿ ನಗರ ಜೈನ್ ಕಾಲೇಜು
— ಕನ್ನಡ್ವಿರಾಟ (@kohlificationn) February 14, 2026
ಸ್ಟೂಡೆಂಟ್ಸ್
ವಿಷ್ಣು ದಾದ ಹಾಗು ಕನ್ನಡ ತಾಯಿ ಚಿತ್ರವನ್ನು ವಿಕೃತಿಗೊಳಿಸುತಿಹರು
ನೋಡಿ ಫ್ರೆಂಡ್ಸ್🚨
ಈ ವಲಸೆ ಜೀವಿಗಳು ಓದಲು ನಮ್ಮ ಬೆಂಗಳೂರಿಗೆ ಬಂದು ಓದ್ಕೊಂಡು ಹೋಗೊ ಬದಲು, ನಮ್ಮ ನಾಡಿನ ಜೀವ ಕನ್ನಡ ತಾಯಿಯ ಫೋಟೋ ಹಾಗು ನಮ್ಮ ನೆಚ್ಚಿನ ಕೋಟಿಗೊಬ್ಬ ವಿಷ್ಣು ದಾದ ಅವರ ಫೋಟೋವನ್ನು… pic.twitter.com/8YFabXMoNW
ಆದರೆ ಈ ಕುರಿತು ಕಾಲೇಜು ಆಡಳಿತದಿಂದ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಆರೋಪದ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಈ ಯುವಕ ಕೂಡ ಕನ್ನಡಿಗನೇ ಎಂದು ಹೇಳಲಾಗುತ್ತಿದೆ. ಈ ಒಂದು ವಿಡಿಯೋ ಸದ್ಯ ಕನ್ನಡಿಗರನ್ನು ಕೆಣಕಿದೆ.
ಅಭಿಮಾನಿಗಳ ಆಕ್ರೋಶ
ನಟ ವಿಷ್ಣುವರ್ಧನ್ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ದಿಗ್ಗಜ ಕಲಾವಿದ. ಅವರ ಚಿತ್ರಕ್ಕೆ ಅವಮಾನವಾಗಿದೆ ಎಂಬ ಭಾವನೆಯಿಂದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಡಗೀತೆಗೆ ವ್ಯಂಗ್ಯ ಮಾಡಿರುವುದನ್ನು ಹಲವರು "ನಾಡಿನ ಗೌರವಕ್ಕೆ ಧಕ್ಕೆ" ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, ಸಂಬಂಧಿತ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. "ಇಂತಹ ಕೃತ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ" ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ರಾಷ್ಟ್ರೀಯ ಚಿಹ್ನೆಗಳು, ನಾಡಗೀತೆ ಅಥವಾ ಸಾಂಸ್ಕೃತಿಕ ಪ್ರತೀಕಗಳಿಗೆ ಅವಮಾನ ಮಾಡುವುದು ಕಾನೂನುಬದ್ಧವಾಗಿ ಶಿಕ್ಷಾರ್ಹವಾಗಬಹುದು. ತಜ್ಞರ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ವಿಡಿಯೋ ನೈಜತೆಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆ ಅಥವಾ ಗೇಲಿ ಎಂಬ ನೆಪದಲ್ಲಿ ವ್ಯಕ್ತಿ, ಸಂಸ್ಕೃತಿ ಅಥವಾ ನಾಡಿನ ಚಿಹ್ನೆಗಳಿಗೆ ಅವಮಾನ ಮಾಡುವುದು ಸಮಾಜದಲ್ಲಿ ಅಸಹನೀಯತೆಯನ್ನು ಉಂಟುಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕ್ಷಮೆ ಕೇಳಿದ ಪೋಷಕರು
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರರು ಆ ಯುವಕನ ಕುಟುಂಬವನ್ನು ಪತ್ತೆ ಹಚ್ಚಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಪೋಷಕರು ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ನಾವು ಕೂಡ ಕನ್ನಡಿಗರೇ, ನಾವು ಇಲ್ಲೇ ಹುಟ್ಟಿ ಬೆಳೆದಿದ್ದು, ಕನ್ನಡದ ಮೇಲೆ ನಮಗೆ ಅಪಾರ ಗೌರವ ಇದೆ. ನಮ್ಮ ಮಗ ಮಾಡಿದ ತಪ್ಪಿಗೆ ಎಲ್ಲ ಕನ್ನಡಿಗರಲ್ಲೂ ಕ್ಷಮೆ ಕೇಳುತ್ತೇವೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
-
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications