Bengaluru Viral: ಕನ್ನಡಿಗರ ಯಕ್ಷ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ: ದೃಷ್ಟಿಗೊಂಬೆ ಮಹಿಳೆ ಯಾರು ಎನ್ನುವುದು ಬಹಿರಂಗ

ಬೆಂಗಳೂರು: ಬೆಂಗಳೂರು - ಕರ್ನಾಟಕದಲ್ಲಿ ಈ ಫೋಟೋ ಸಾಮಾನ್ಯ ದೃಷ್ಟಿ ಗೊಂಬೆ ರೂಪಕವಾಗಿ ಬಳಸುವ ಮಹಿಳೆಯೊಬ್ಬರ ಫೋಟೋ ವರ್ಷಗಳಿಂದ ಫೇಮಸ್ ಆಗಿದೆ. ನೀವೂ ಸಹ ಈ ಫೋಟೋವನ್ನು ಬೆಂಗಳೂರು ಅಥವಾ ಕರ್ನಾಟಕದ ಯಾವುದಾದರೂ ಭಾಗದಲ್ಲಿ ನೋಡಿಯೇ ಇರುತ್ತೀರಿ. ಅದರಲ್ಲೂ ಮುಖ್ಯವಾಗಿ ನಿರ್ಮಾಣದ ಕಟ್ಟಡಗಳ ಮುಂದೆ ಈ ಫೋಟೋ ಹಾಕಿರುವುದು ಸರ್ವೇ ಸಾಮಾನ್ಯ. ಈ ಸೀರೆಯನ್ನುಟ್ಟ ಮಹಿಳೆಯ ದೃಷ್ಟಿಗೊಂಬೆ ಮಾದರಿ ಫೋಟೋ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ದೇಶದಲ್ಲೂ ಫೇಮಸ್ ಆಗಿದೆ. ಕನ್ನಡಿಗರ ಯಕ್ಷ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ ಸಿಕ್ಕಿದೆ. ಈ ದೃಷ್ಟಿಗೊಂಬೆ ಮಹಿಳೆ ಯಾರು ಎನ್ನುವುದು ಪತ್ತೆ ಆಗಿದೆ. ವೈರಲ್ ಫೋಟೋದ ವಿವರ ಇಲ್ಲಿದೆ.

ಕನ್ನಡಿಗರಿಗೆ ದೃಷ್ಟಿಗೊಂಬೆಯಂತೆ (ದೃಷ್ಟಿ ಆಗದೆ ಇರಲಿ) ಸೀರೆಯನ್ನುಟ್ಟ ಮಹಿಳೆಯೊಬ್ಬರ ಫೋಟೋ ಬಳಸುವುದು ಅಚ್ಚರಿ ಎನಿಸಿಲ್ಲ. ಯಾಕೆಂದರೆ ವರ್ಷಗಳಿಂದ ಈ ಫೋಟೋ ಕರ್ನಾಟಕದಲ್ಲಿ ಫೇಮಸ್ ಆಗಿದೆ. ಕೆಂಪು ಸೀರೆಯನ್ನುಟ್ಟು ದಪ್ಪ ದಪ್ಪ ಕಣ್ಣುಗಳನ್ನು ಬಿಟ್ಟು, ಹಣೆಗೆ ಅಗಲವಾಗಿ ಕುಂಕುಮವಿಟ್ಟು ಕೊಂಡಿರುವ ಮಹಿಳೆಯೊಬ್ಬರ ಫೋಟೋವನ್ನು ಕನ್ನಡಿಗರು ದೃಷ್ಟಿಗೊಂಬೆ ಫೋಟೋಗೆ ಬ್ರಾಂಡ್ ಅಂಬಾಸಿಡರ್‌ ಮಾಡಿದ್ದರು.

Bengaluru Viral Big-Eyed Woman Mystery Face at Construction Sites Sparks Curiosity

ಕೊನೆಗೂ ಈ ವೈರಲ್ ದೃಷ್ಟಿಗೊಂಬೆ ಮಹಿಳೆ ಯಾರು ಎನ್ನುವುದು ಈಗ ಪತ್ತೆಯಾಗಿದೆ. ಕರ್ನಾಟಕದಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಸೀರೆಯನ್ನುಟ್ಟ ಮಹಿಳೆಯೊಬ್ಬರ ಚಿತ್ರವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಲ್ಲಾ ಕಡೆಗಳಲ್ಲೂ ಕಾಣಿಸುವ ಈ ಫೋಟೋ ಬೆಂಗಳೂರಿನ ಮಹಿಳೆಯೊಬ್ಬರ ಗಮನ ಸೆಳೆದಿದ್ದು, ಕೊನೆಗೂ ಈ ವೈರಲ್ ದೃಷ್ಟಿಗೊಂಬೆ ಮಹಿಳೆಯ ಹಿನ್ನಲೆ ಗೊತ್ತಾಗಿದೆ. ಯಾರಿವರು ಎನ್ನುವ ಕನ್ನಡಿಗರ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ದೃಷ್ಟಿಗೊಂಬೆ ಫೋಟೋದಲ್ಲಿರುವ ಮಹಿಳೆ ಯಾರು ?

ಇದು ಕನ್ನಡಿಗರನ್ನು ಬಹಳಷ್ಟು ದಿನಗಳಿಂದ ಕಾಡುತ್ತಿದ್ದ ಯಕ್ಷ ಪ್ರಶ್ನೆ. ಆದರೆ, ಈ ಮಹಿಳೆಯ ಫೋಟೋವನ್ನು ದೃಷ್ಟಿಗೊಂಬೆ ಮಾದರಿಯಲ್ಲಿ ಬಳಸಿದರೆ ದೃಷ್ಟಿ ಕಡಿಮೆ ಆಗುತ್ತದೆ ಎಂದು ಹಲವರು ಈ ಫೋಟೋವನ್ನು ಬಳಸಿರುವುದು ಇದೆ. ಆದರೆ ಯಾರೂ ಸಹ ಇವರು ಯಾರು ಅಂತ ಹುಡುಕುವ ಸಾಹಸಕ್ಕೆ ಕೈಹಾಕಿರಲಿಲ್ಲ. ಇದೀಗ ಈ ಫೋಟೋದಲ್ಲಿ ಇರುವವರು ಯಾರು ಎನ್ನುವುದು ಗೊತ್ತಾಗಿದೆ. ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್ ಅವರ ಫೋಟೋ ಇದಾಗಿದೆ. 2023ರಲ್ಲಿ ವೈರಲ್ ಆಗಿರುವ ವಿಡಿಯೋದಿಂದ ಈ ಫೋಟೋವನ್ನು ಕ್ರಾಫ್ ಮಾಡಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಇರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಮಹಿಳೆ ಮಾಡಿರುವ ಸರ್ಕಸ್ ಸಹ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಯಾವ ಸಿನಿಮಾಗೂ ಕಡಿಮೆ ಇಲ್ಲ ಎನ್ನುವಂತಿದೆ.

ಈಚೆಗೆ ಈ ಮಹಿಳೆಯ ಫೋಟೋವನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೋಡಿದ್ದ ಮಹಿಳೆಯೊಬ್ಬರು @unitechy ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಿದ್ದರು. ನಗರದ ಹೊರಗೆ ಪ್ರಯಾಣಿಸುವಾಗ ಈ ಫೋಟೋವನ್ನು ನಾನು ಪದೇ ಪದೇ ನೋಡಿದ್ದೇನೆ. ಅದರಲ್ಲೂ ಮುಖ್ಯವಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ಈ ಫೋಟೋವನ್ನು ಬಳಸಿದ್ದಾರೆ. ಯಾರು ಈ ಸೀರೆಯನ್ನುಟ್ಟ ಮಹಿಳೆ ಎಂದು ಪೋಸ್ಟ್‌ ಮಾಡಿದ್ದರು.

ಮಹಿಳೆ ಆ ಫೋಟೋವನ್ನು ಕ್ಲಿಕ್ ಮಾಡಿ ಗೂಗಲ್ ಲೆನ್ಸ್ ಬಳಸಿ ಇವರು ಯಾರು ಎಂದು ತಿಳಿಯುವ ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಗೂಗಲ್‌ನಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಜನವರಿ 5ರಂದು ಈ ಪೋಸ್ಟ್‌ ಹಂಚಿಕೊಳ್ಳಲಾಗಿತ್ತು. ಕೆಲವೇ ದಿನಗಳಲ್ಲಿ, ಪೋಸ್ಟ್ 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಚರ್ಚೆ ಹೆಚ್ಚಾದಂತೆ ಎಕ್ಸ್ ಬಳಕೆದಾರರೊಬ್ಬರು AI ಪ್ಲಾಟ್‌ಫಾರ್ಮ್‌ಗೆ ಕೇಳಿದ ಪ್ರಶ್ನೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ AI-ರಚಿತ ಪ್ರತಿಕ್ರಿಯೆಯ ಪ್ರಕಾರ, ಪೋಸ್ಟರ್‌ನಲ್ಲಿರುವ ಮಹಿಳೆಯನ್ನು ಕರ್ನಾಟಕ ಮೂಲದ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಗುರುತಿಸಲಾಗಿದೆ. ಆಕೆಯ ಆಶ್ಚರ್ಯಕರ ಮುಖಭಾವವು 2023 ರಲ್ಲಿ ವೈರಲ್ ಆದ ವೀಡಿಯೊ ಕ್ಲಿಪ್‌ನಿಂದ ಹುಟ್ಟಿಕೊಂಡಿದೆ ಎಂದು ಹೇಳಿದೆ. ಈ ಮೂಲಕ ಕೊನೆಗೂ ಕನ್ನಡಿಗರ ಯಕ್ಷ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇನ್ಮುಂದೆ ಈ ದೃಷ್ಟಿಗೊಂಬೆ ಮಾದರಿ ಫೋಟೋವನ್ನು ನೋಡಿದರೆ ಅವರು ಯಾರು ಅಂತ ಕೇಳಬೇಡಿ!

ತಮಿಳುನಾಡಿನಲ್ಲೂ ಫೇಮಸ್

ಇನ್ನು ಈ ಮಹಿಳೆಯ ಫೋಟೋ ಈಗ ಕರ್ನಾಟಕದಿಂದ ತಮಿಳುನಾಡಿನಲ್ಲೂ ಪ್ರಸಿದ್ಧಿ ಗಳಿಸಿದೆ. ತಮಿಳುನಾಡಿನ ನಿರ್ಮಾಣ ಹಂತದ ಕಟ್ಟಡಗಳಲ್ಲೂ ನಿಹಾರಿಕ ರಾವ್‌ ಅವರ ಫೋಟೋವನ್ನು ದೃಷ್ಟಿಗೊಂಬೆ ಅಂತ ಬಳಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+