ಬೆಂಗಳೂರು: ಬೇಕಾಬಿಟ್ಟಿ ವಾಹನ ನಿಲ್ಲಿಸುವವರೇ ಎಚ್ಚರ! ಟೋಯಿಂಗ್ ವ್ಯವಸ್ಥೆ ಮರು ಜಾರಿ?

ಬೆಂಗಳೂರು, ಡಿಸೆಂಬರ್ 15: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಓಡಾಡುವವರಿಗೆ ಪೊಲೀಸ್ ಇಲಾಖೆ ಚುರುಕು ಮುಟ್ಟಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೇವಲ ಗಾಂಧಿ ನಗರದಲ್ಲಿ ಮಾತ್ರವೇ ಜಾರಿಯಲ್ಲಿರುವ ವಾಹನಗಳ ಟೋಯಿಂಗ್ ವ್ಯವಸ್ಥೆಯನ್ನು ಮರು ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ನಗರದಲ್ಲಿ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಓಡಾಡಲಾಗುತ್ತಿದೆ. ಇದರಿಂದ ಇತರ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇದರಿಂದಾಗಿ ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದರು.

Bengaluru Vehicle Towing System to Resume Soon Police Commissioner B Dayanand

ಕೆಂಗೇರಿ ಉಪನಗರದ ಕಾಲೇಜೊಂದರಲ್ಲಿ ಶನಿವಾರ ಸಂಚಾರಿ ಪೊಲೀಸರು ಆಯೋಜಿಸಿದ್ದ 'ಸಂಚಾರ ಸಂಪರ್ಕ ದಿವಸ' ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನರ ಕುಂದು ಕೊರತೆ ಆಲಿಸಿ ಅವರು ಮಾತನಾಡಿದರು.

ಕೆಂಗೇರಿ ಕಡೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಓಡಾಡುತ್ತಾರೆ. ಇದರಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆ. ಕೆಂಗೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸರಿಯಾದ ಪಾರ್ಕಿಂಗ್, ನಿಯಮ ಪಾಲನೆ ಆಗುತ್ತಿಲ್ಲ. ಹೀಗಾಗಿ ವ್ಯವಸ್ಥೆ ಮತ್ತೆ ಆರಂಭಿಸಲಾಗುವುದು.

ಪ್ರಮುಖ ರಸ್ತೆ, ಜನ ಸಂಚಾರದ ರಸ್ತೆಗಳಲ್ಲಿ ಬೇಕಾ ಬಿಟ್ಟಿಯಾಗಿ ವಾಹನ ನಿಲ್ಲಿಸಿದರೆ, ತೊಂದರೆಯಾಗುತ್ತಿದೆ. ಕೆಂಗೇರಿ, ಸೇರಿ ವಿವಿಧೆಡೆ ಇಂತದ್ದೆ ಸಮಸ್ಯೆಗಳಾಗುತ್ತಿರುವ ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಈ ರೀತಿಯ ಸಂಚಾರ ದಟ್ಟಣೆಯ ನಿವಾರಣೆಗೆ ಟೋಯಿಂಗ್ ಪುನಃ ಆರಂಭಿಸಲಾಗುವುದು. ಇದರಿಂದ ದಟ್ಟಣೆ ಕಡಿಮೆ ಆಗುತ್ತದೆ. ನಿಯಮ ಪಾಲಿಸುವುದರಿಂದ ಅನಗತ್ಯ ಸ್ಥಳಗಳಲ್ಲಿ ಪಾರ್ಕಿಂಗ್ ಗೆ ಕಡಿವಾಣವಾಗುತ್ತದೆ.

ಬೆಂಗಳೂರಿನಲ್ಲಿ ಸದ್ಯ ಗಾಂಧಿನಗರ ವ್ಯಾಪ್ತಿಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾತ್ರವೇ ಟೋಯಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ಶೀಘ್ರವೇ ನಗರಾದ್ಯಂತ ವಿಸ್ತರಣೆ ಮಾಡುವ ವಾಹನ ದಟ್ಟಣೆಗೆ ಕಡಿವಾಣ ಹಾಕುವ ಪ್ರಯತ್ನ ನಡೆಯಲಿದೆ ಎಂದು ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ.

ಟೋಯಿಂಗ್‌ಗೆ ವ್ಯಾಪಕ ಆಕ್ರೋಶ: ವ್ಯವಸ್ಥೆ ಸ್ಥಗಿತ

ಈ ಹಿಂದೆ ಬೆಂಗಳೂರಿನಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆ ಪೊಲೀಸರೊಬ್ಬರು ದಿವ್ಯಾಂಗ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು. ಇನ್ನೊಂದೆಡೆ ಡೆಲಿವರಿ ಬಾಯ್ ದ್ವಿಚಕ್ರವಾಹನ ಟೋಯಿಂಗ್ ಆದ ಸಂದರ್ಭದಲ್ಲಿ ವಾಹನ ಬಿಡಿಸಿಕೊಳ್ಳಲು ಪೊಲೀಸ್ ಗಾಡಿಯಿಂದ ಓಡೋಡಿ ಹೋಗಿದ್ದರು. ಇದು ವೈರಲ್ ಆಗುತ್ತಿದ್ದ ಟೊಯಿಂಗ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಇಂತಹ ಘಟನೆಗಳು ಮರುಕಳಿಸುತ್ತಿದ್ದಂತೆ ಸಾರ್ವಜನಿಕರು ಸಂಚಾರಿ ಪೊಲೀಸರ ನಡೆಗೆ ಆಕ್ರೋಶ ಹೊರ ಹಾಕಿದರು. ಬಳಿಕ ಟೋಯಿಂಗ್ಯ ವ್ಯವಸ್ಥೆ ಕೈಬಿಡಲಾಗಿತ್ತು. ಇದೀಗ ಮತ್ತೆ ಜಾರಿಗೆ ಪೊಲೀಸರು ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+