ಬೆಂಗಳೂರು ಅನ್‌ಲಾಕ್; 2 ತಿಂಗಳ ನಂತರ ತೆರೆದ ಮಾಲ್, ಕಾಂಪ್ಲೆಕ್ಸ್‌ಗಳು
ಬೆಂಗಳೂರು, ಜುಲೈ 05: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಶನಿವಾರ ಸಿಎಂ ಯಡಿಯೂರಪ್ಪ ಜುಲೈ 5ರಿಂದ ಅನ್‌ಲಾಕ್ 3.0 ಘೋಷಿಸಿದ್ದು, ಎರಡು ತಿಂಗಳ ನಂತರ ಸೋಮವಾರದಿಂದ ಮಾಲ್‌ಗಳು ಕಾರ್ಯಾಚರಣೆ ಆರಂಭಿಸಿವೆ.
Recommended Video
ಈ ಮೂಲಕ ಸತತ ಎರಡು ತಿಂಗಳ ನಂತರ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ. ಜುಲೈ 5ರಿಂದ ಇನ್ನಷ್ಟು ನಿಯಮಗಳನ್ನು ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಶನಿವಾರ ಅನ್‌ಲಾಕ್ 3.0 ಘೋಷಣೆ ಮಾಡಿತ್ತು.
ಮಾಲ್‌ಗಳು, ಕಚೇರಿಗಳು ಇನ್ನಿತರ ಸಂಸ್ಥೆಗಳು ಕೊರೊನಾ ನಿಯಮಾವಳಿಗಳ ಪಾಲನೆಯೊಂದಿಗೆ ಕಾರ್ಯಾಚರಣೆ ಆರಂಭಿಸಬಹುದೆಂದು ಸೂಚಿಸಲಾಗಿತ್ತು.

ಎರಡು ತಿಂಗಳ ನಂತರ ಮಾಲ್‌ಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಿದ್ದರಿಂದ ಭಾನುವಾರವೇ ಹಲವು ಮಾಲ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದುದು ಕಂಡುಬಂತು.
ಬಿಬಿಎಂಪಿಯ ಮಾರ್ಷಲ್‌ಗಳು ಹಾಗೂ ನಗರ ಪೊಲೀಸ್ ಸಿಬ್ಬಂದಿ ಒಳಗೊಂಡಂತೆ ನಗರದಲ್ಲಿ 54 ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೊರೊನಾ ನಿಯಮ ಪಾಲನೆಗೆ ಸಂಬಂಧಿಸಿದಂತೆ ಈ ತಂಡಗಳು ನಿಗಾ ವಹಿಸಲಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಿದೆ.
ಶನಿವಾರ ಅನ್‌ಲಾಕ್ ಘೋಷಣೆ ಮಾಡಲಾಗಿದ್ದು, ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಲಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇಕಡಾ 100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಮಾಲ್‌ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯುವ ಬಗ್ಗೆ ಕೆಲವು ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿದೆ. ಬಾರ್ಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ ಚಿತ್ರಮಂದಿರಗಳಿಗೆ ಇನ್ನೂ ಅವಕಾಶ ಕಲ್ಪಿಸಿಲ್ಲ.
ರಾಜ್ಯದಲ್ಲಿ ಭಾನುವಾರದ ಮಾಹಿತಿಯಂತೆ 1564 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಹೊಸ ಪ್ರಕರಣಗಳು 2,000ಕ್ಕಿಂತ ಕಡಿಮೆಯಾಗಿದ್ದು, ಸಾವಿನ ಸಂಖ್ಯೆ 60ಕ್ಕಿಂತಲೂ ಕಡಿಮೆಯಾಗಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.02ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 3.77ರಷ್ಟಿದೆ.












Click it and Unblock the Notifications