ಬೆಂಗಳೂರಿನ ಮಾರತ್ತಹಳ್ಳಿ ಬಳಿಯ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆ ಅಂಡರ್‌ಪಾಸ್ ಸಿದ್ಧ- ಯಾರಿಗೆ ಅನುಕೂಲ? ವರದಿ ಇಲ್ಲಿದೆ
ಬೆಂಗಳೂರಿನ ಮಾರತ್ತಹಳ್ಳಿ ಬಳಿಯ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆ ಅಂಡರ್‌ಪಾಸ್ ಸಿದ್ಧವಾಗಿದೆ. ಇದು ಯಾವೆಲ್ಲ ಪ್ರಯಾಣಿಕರಿಗೆ ಅನೂಕಲವಾಗಲಿದೆ. ಎಷ್ಟು ಪ್ರಯಾಣದ ಸಮಯ ಕಡಿತಗೊಳ್ಳಲಿದೆ ಎಂಬುದನ್ನು ತಿಳಿಯಲು ಈ ವರದಿ ಓದಿ
ಬೆಂಗಳೂರು, ಫೆಬ್ರವರಿ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಕೇವಲ 58 ದಿನಗಳಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಬಳಿ ಇರುವ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆಯ ಪುಷ್ ಬಾಕ್ಸ್ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದೆ. ಈ ಕೆಳಸೇತುವೆಯು ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ಹೊರವರ್ತುಲ ರಸ್ತೆ (ORR) ಮೂಲಕ ಸರ್ಜಾಪುರ ರಸ್ತೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಎರಡು ತಿಂಗಳೊಳಗೆ ಪ್ರಿಫ್ಯಾಬ್ರಿಕೇಟೆಡ್ ಪುಶ್ ಬಾಕ್ಸ್ ಅಂಡರ್‌ಪಾಸ್‌ನಲ್ಲಿ ಇಷ್ಟು ವೇಗದ ಗತಿಯ ಕೆಲಸಕ್ಕಾಗಿ, ಬಿಬಿಎಂಪಿ ಸಾಕಷ್ಟು ಪ್ರಶಂಸೆಯನ್ನು ಗಳಿಸುತ್ತಿದೆ. 7.7 ಮೀಟರ್ ಅಗಲ ಮತ್ತು 4.4 ಮೀಟರ್ ಎತ್ತರದ ಈ ಸೌಲಭ್ಯವನ್ನು ಬುಧವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
ಇದುವರೆಗೆ ಸರ್ಜಾಪುರಕ್ಕೆ ತೆರಳುವ ಜನರು ಕುಂದನಹಳ್ಳಿಯವರೆಗೆ 2.5 ಕಿ.ಮೀ ದೂರದಲ್ಲಿ ಯು-ಟರ್ನ್ ಮಾಡಿ ಹೊರ ವರ್ತುಲ ರಸ್ತೆಗೆ ಪ್ರವೇಶಿಸಬೇಕಾಗಿತ್ತು ಆದರೆ ಪುಶ್ ಬಾಕ್ಸ್ ಅಂಡರ್‌ಪಾಸ್ ತೆರೆಯುವ ಮೂಲಕ ವಾಹನಗಳು ಯು-ಟರ್ನ್ ತೆಗೆದುಕೊಳ್ಳಬಹುದು.

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ 24 ಕೋಟಿ ರೂ.ವೆಚ್ಚದ ರೈಲ್ವೆ ಮೇಲ್ಸೇತುವೆ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು 10 ತಿಂಗಳುಗಳನ್ನು ತೆಗೆದುಕೊಂಡರೆ, ಬಿಬಿಎಂಪಿ ಪುಶ್ ಬಾಕ್ಸ್ ಅಂಡರ್‌ಪಾಸ್‌ಗೆ ಮಾತ್ರ ಆರು ಕೋಟಿ ರೂಗಳನ್ನು ತೆಗೆದುಕೊಂಡಿದೆ.
ಈ ಕೆಳಸೇತುವೆಯಿಂದ ಪ್ರಯಾಣದ ಅವಧಿ ಶೇ.60-70ರಷ್ಟು ಕಡಿತಗೊಳ್ಳಲಿದ್ದು, ಮಾರತ್ತಹಳ್ಳಿಯಿಂದ ಕಾಡುಬೀಸನಹಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಯೋಜನೆಯಲ್ಲಿ ಕೆಲಸ ಮಾಡಿದ ಎಂಜಿನಿಯರ್ ಶಿವಶಂಕರ್ ಹೇಳಿದರು. ಅಲ್ಲದೇ ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಬಿಬಿಎಂಪಿಯಿಂದ ದಾಖಲೆ ಸಮಯದಲ್ಲಿ ಕಾಮಗಾರಿ ನಡೆದಿದೆ ಎಂದರು.

ಹೆಚ್ಚುವರಿಯಾಗಿ, ಪ್ರಯಾಣಿಕರು ಸಹ ಅಂಡರ್‌ಪಾಸ್ ತೆರೆಯುವ ಬಗ್ಗೆ ಉತ್ಸುಕರಾಗಿದ್ದಾರೆ ಆದರೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾರಣದಿಂದಾಗಿ ಕಾಮಗಾರಿಯು ತ್ವರಿತ ಗತಿಯಲ್ಲಿ ಪೂರ್ಣಗೊಂಡಿದೆ ಎಂದು ಅವರಲ್ಲಿ ಒಬ್ಬರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.
ದಿನನಿತ್ಯದ ಪ್ರಯಾಣಿಕರಾದ ಮುರಳಿ ಎಸ್, 'ಅಂಡರ್‌ಪಾಸ್‌ನ ಕಾಮಗಾರಿ ನಡೆಯುತ್ತಿರುವಾಗ, ವಾಹನಗಳು ಕೆಲವೊಮ್ಮೆ 3 ಕಿ.ಮೀ ವರೆಗೆ ಸಾಲುಗಟ್ಟಿ ನಿಲ್ಲುವ ಮೂಲಕ ಭಾರಿ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿತ್ತು ಎಂದು ಹೇಳಿದ್ದಾರೆ. ಮುನ್ನೆಕೊಲ್ಲಾಲ ಅಂಡರ್‌ಪಾಸ್ ತೆರೆಯುವುದರೊಂದಿಗೆ ಸರ್ಜಾಪುರಕ್ಕೆ ಪ್ರಯಾಣಿಸುವ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ನೋವು ತಕ್ಕದ್ದಾಗಿದೆ ಎಂದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಕಾಮಗಾರಿಯನ್ನು ತ್ವರಿತವಾಗಿ ನಡೆಸಲಾಗಿದೆ ಎಂದು ಮತ್ತೊಬ್ಬ ವಾಹನ ಚಾಲಕ ಹೇಳಿದರು. ಇಲ್ಲವಾದಲ್ಲಿ ಅಧಿಕಾರಿಗಳು ಯಾವುದೇ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications