Bengaluru: 100 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ: 56 ಸಾವಿರ ರೂ. ದಂಡ, ಬಂಧನ, ಡಿಎಲ್ ಅಮಾನತು
ಬೆಂಗಳೂರು ನಗರ ಈಗಾಗಲೇ ಟ್ರಾಫಿಕ್‌ನಿಂದ ವಿಶ್ವದಲ್ಲೇ ಕೆಟ್ಟ ಹೆಸರು ಪಡೆದುಕೊಂಡಿದೆ. ಇದರ ಜೊತೆ ಕೆಲವು ವಾಹನ ಸವಾರರ ಬೇಜವಬ್ದಾರಿತನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವು ಸವಾರರಂತು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಒನ್ ವೇನಲ್ಲಿ ವಿರುದ್ಧ ದಿಕ್ಕಿ ಗಾಡಿ ಚಲಾಯಿಸುವುದು ಮಾಡುತ್ತಾರೆ.
ಟ್ರಾಫಿಕ್ ನಿಯಮ ಉಲ್ಲಂಘಿಸುವ ಇಂತಹವರನ್ನು ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ದಂಡ ವಿಧಿಸುವುದು, ಪ್ರಕರಣ ದಾಖಲಿಸುವುದು ಮಾಡುತ್ತಾರೆ. ವಾಹನ ಸಂಚಾರ ಉಲ್ಲಂಘನೆ ಕ್ಯಾಮರಾದಲ್ಲಿ ದಾಖಲಾದಾಗ ಪ್ರಕರಣ ದಾಖಲಾಗುತ್ತವೆ.

ಬೆಂಗಳೂರು ನಗರದಲ್ಲಿ ಇಂತಹುದ್ದೇ ದ್ವಿಚಕ್ರ ವಾಹನ ಸವಾರನೊಬ್ಬ 100ನೇ ಬಾರಿ ಟ್ರಾಫಿಕ್ ನಿಮಯ ಉಲ್ಲಂಘಿಸಿದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ 56000 ರೂಪಾಯಿ ದಂಡ ಕಟ್ಟಬೇಕಾಗಿದೆ.
“Blatant”
— alok kumar (@alokkumar6994) September 26, 2023
Action will be taken against this person
“Timely action regarding violations can only act as deterrence ” https://t.co/WRzAHbNYKP
ಪ್ರಕರಣದ ಸಂಪೂರ್ಣ ವಿವರ
ಪ್ರಸನ್ನ ಕುಮಾರ್ ಎನ್ನುವ ಎಕ್ಸ್ (ಟ್ವಿಟರ್) ಬಳಕೆದಾರರು ಸೆಪ್ಟೆಂಬರ್ 26ರಂದು ಈ ಬಗ್ಗೆ ತಮ್ಮ ಖಾತೆಯಲ್ಲಿ ಈ ದ್ವಿಚಕ್ರ ವಾಹನದ ಬಗ್ಗೆ ಮಾಹಿತಿ ನೀಡಿದ್ದು ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದರು. ಸೆಪ್ಟೆಂಬರ್ 25ರಂದು ದ್ವಿಚಕ್ರ ವಾಹನ ಸವಾರ ವೆಗಾ ಸಿಟಿ ಬಳಿ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಿರುವುದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಸನ್ನ ಕುಮಾರ್ ದ್ವಿಚಕ್ರ ವಾಹನದ ಸಂಖ್ಯೆಯನ್ನು ಆಪ್ ಮೂಲಕ ಪರಿಶೀಲನೆ ಮಾಡಿದಾಗ 99 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದು, 56 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಿರುವುದು ಬೆಳಕಿದೆ ಬಂದಿದೆ. ಈ ಎಲ್ಲಾ ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡು ಸೂಕ್ರ ಕ್ರಮ ತೆಗೆದುಕೊಳ್ಳುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು.
Good job @DCPTrSouth & team
— alok kumar (@alokkumar6994) September 27, 2023
-Vehicle detained
- DL being suspended
- FIR registered
“ No one is beyond the reach of the law, it’s only matter of time” https://t.co/O6FwwFYnKD
ಸವಾರನ ಬಂಧನ, ವಾಹನ ವಶಕ್ಕೆ
ಇದನ್ನು ನೋಡಿದ ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ದಕ್ಷಿಣ ಸಂಚಾರ ಪೊಲೀಸರು ದ್ವಿಚಕ್ರ ವಾಹನ ಮತ್ತು ಸವಾರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಸಂಚಾರ ಡಿಸಿಪಿ ತಮ್ಮ ಎಕ್ಸ್ (ಟ್ವಿಟರ್ ಖಾತೆಯಲ್ಲಿ) ಹಂಚಿಕೊಂಡಿದ್ದಾರೆ.
"99 ಸಂಚಾರ ನಿಯಮ ಉಲ್ಲಂಘನೆಯೊಂದಿಗೆ 56000 ರೂ. ದಂಡ ಸಹಿತ ದಸ್ತಗಿರಿ ಮಾಡಲಾಗಿದೆ , ಮಾಲಕನ ವಿರುದ್ಧ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ, ಅಪರಾಧ ಕ್ರಮಾಂಕ 181/23 ಯು/ಎಸ್ 279 ಐಪಿಸಿ ಆರ್/ಡಬ್ಲ್ಯು 184 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ." ಎಂದು ಮಾಹಿತಿ ನೀಡಿದ್ದಾರೆ.
ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಅಲೋಕ್ ಕುಮಾರ್ ಅವರು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಹನ ವಶಕ್ಕೆ ಪಡೆಯಲಾಗಿದ್ದು, ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ , ಕಾನೂನಿಗೆ ಯಾರೂ ಹೊರತಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications