ಮತ್ತೆ ಮುನ್ನಲೆಗೆ ಬಂದ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ
Bengaluru-Tumakuru National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಈ ನಡುವೆಯೇ ಕೆಲ ಹೆದ್ದಾರಿಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತಲಿವೆ. ಹಾಗಾದ್ರೆ, ಇದೀಗ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಶುಲ್ಕ ಸಂಗ್ರಹ ಮುನ್ನೆಲೆಗೆ ಬಂದಿದೆ. ಹಾಗಾದ್ರೆ, ಇದಕ್ಕೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಆದಾಗಿನಿಂದಲೂ ಇದು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಆರಂಭದಲ್ಲಿ ಟೋಲ್ ಶುಲ್ಕದ ವಿಚಾರವಾಗಿ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಮಾರಾಮಾರಿಯಂತಹ ಘಟನೆಗಳು ನಡೆದಿವೆ. ಈಗಲೂ ಕೂಡ ಇಲ್ಲಿ ಒಂದಲ್ಲ ವಿಚಾರಕ್ಕೆ ಸುದ್ದಿಯಾಗುತ್ತಲಿದೆ. ಹಾಗೆಯೇ ಇದೀಗ ಬೆಂಗಳೂರು-ತುಮಕೂರು ಹೆದ್ದಾರಿ ಟೋಲ್ ಸಂಗ್ರಹದ ವಿಚಾರ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದೇನು ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿರುತ್ತದೆ. ಅದಕ್ಕೆಲ್ಲ ಉತ್ತರ ಇಲ್ಲಿ ಕಣ್ಣಾಡಿಸಿ.

ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಟೋಲ್ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ಅಗಲೀಕರಣದ ಕಾರ್ಯ ವಿಳಂಬ ಆಗಿದೆ. ಅಲ್ಲದೆ, ಟೋಲ್ ಕಾರ್ಯಾಚರಣೆ ಗುತ್ತಿಗೆ ಅವಧಿ ಮುಗಿದಿದ್ದರೂ ಸಹ ಟೋಲ್ ಸಂಗ್ರಹಣೆ ಮಾಡುತ್ತುದ್ದಾರೆ. ಈ ಸುಲಿಗೆಯನ್ನ ಈಗಿಂದೀಗಲೇ ನಿಲ್ಲಿಸಬೇಕೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಬೆಂಗಳೂರಿನಿಂದ ಹಿಡಿದು ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕಕ್ಕೆ ಹೋಗುವ ಸಂಪರ್ಕ ಸೇತುವೆಯಾಗಿದೆ. ಇನ್ನು ಈ ಹೆದ್ದಾರುಯ ನಾಗಸಂದ್ರ, ಕುಲುಮೆಪಾಳ್ಯ ಹಾಗೂ ಕ್ಯಾತಸಂದ್ರದಲ್ಲಿ ಟೋಲ್‌ಗಳಿವೆ. ಆದರೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಪ್ರತಿನಿತ್ಯವೂ ಸಮಸ್ಯೆ ಎದುರಿಸುವಂತಾಗಿದೆ ಅಂತಲೂ ವಾಹನ ಸವಾರರು ಆರೋಪ ಮಾಡಿದ್ದಾರೆ.
ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕೂಡ ಏನಿಲ್ಲ ಅಂದರೂ ಈ ಎರಡು ಟೋಲ್‌ಗಳಲ್ಲಿ ಪ್ರತಿನಿನಿತ್ಯ ಲಕ್ಷಾಂತರ ರೂಪಾಯಿ ಹಣವನ್ನು ಪೀಕಲಾಗುತ್ತಿದೆ. ಆದ್ದರಿಂದ ಕಾಮಗಾರಿಯ ಮುಕ್ತಾಯ ಆಗುವವರೆಗೂ ಟೋಲ್ ಶುಲ್ಕವನ್ನು ನಿಲ್ಲಿಸಬೇಕೆಂದು ವಾಹನ ಸವಾರರು ಎನ್‌ಎಚ್‌ಎಐಗೆ ಆಗ್ರಹಿಸಿದ್ದಾರೆ. ಸಾಮಾನ್ಯವಾಗಿ ನಿಯಮದ ಪ್ರಕಾರ, ಯಾವುದೇ ಹೆದ್ದಾರಿಯ ಕಾಮಗಾರಿ ಪ್ರಗತಿಯಲ್ಲಿದ್ದರೆ ಅದು ಪೂರ್ಣಗೊಳ್ಳುವವರೆಗೂ ವಾಹನ ಸವಾರರ ಬಳಿ ಟೋಲ್ ಶುಲ್ಕವನ್ನು ಕಟ್ಟಿಸಿಕೊಳ್ಳಬಾರದು. ಇದು ಮುಕ್ತಾಯವಾದ ಬಳಿಕವೇ ಟೋಲ್ ಸಂಗ್ರಹ ಮಾಡಬೇಕಾಗುತ್ತದೆ.
ಇನ್ನು ವಿಧಾನ ಪರಿಷತ್ತಿನಲ್ಲಿ ಈ ವಿಷಯನ್ನ ಕೂಡ ಚರ್ಚೆ ಮಾಡಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಗುತ್ತಿಗೆ ಅವಧಿ ಮುಕ್ತಾಯ ಆಗಿದ್ದರೂ ಸಹ ಟೋಲ್ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಳಿಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ ರಾಷ್ಟ್ರೀಯ ಹೆದ್ದಾರಿಗೆ ಟೋಲ್ ಅಧಿಸೂಚನೆ ಹೊರಡಿಸಿದರೆ, ಅದು ಶಾಶ್ವತವಾಗಿ ಮುಂದುವರಿಯುತ್ತದೆ ಎಂದು ಹೇಳಿದರು. ಇದಕ್ಕೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದು, ಟೋಲ್ ದರ ಹೆಚ್ಚಳ ಮಾಡಿದ್ದಾರೆ. ಈ ನಡುವೆಯೂ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಟೋಲ್ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ಟೋಲ್ ಸಂಗ್ರಹವನ್ನು ತಕ್ಷಣ ನಿಲ್ಲಿಸಬೇಕು ಎಂದು ವಾಹನ ಸವಾರರು ಹಾಗೂ ಸಾರ್ವಜನರಿಕರು ಎನ್‌ಎಚ್‌ಎಐಗೆ ಮನವಿ ಮಾಡಿದ್ದಾರೆ.












Click it and Unblock the Notifications