ಬೆಂಗಳೂರಿನ ಈ ಭಾಗದ ರಸ್ತೆಗಳಲ್ಲಿ 3 ತಿಂಗಳು ವಾಹನ ಸಂಚಾರಕ್ಕೆ ನಿರ್ಬಂಧ
ಬೆಂಗಳೂರು, ಜನವರಿ 6: ಸಾಮಾನ್ಯವಾಗಿ ಕಾಮಗಾರಿ ನಡೆಯುವಂತಹ ಮಾರ್ಗದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಹಾಗೆಯೇ ಇದೀಗ ಬೆಂಗಳೂರಿನ ಈ ರಸ್ತೆಗಳಲ್ಲಿ 3 ತಿಂಗಳವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂನ ಮಂತ್ರಿ ಮಾಲ್‌ವರೆಗಿನ ರಸ್ತೆಗೆ ವೈಟ್ ಟ್ಯಾಪಿಂಗ್ ನಡೆಯಲಿರುವ ಹಿನ್ನೆಲೆ ಮೂರು ತಿಂಗಳು ರಸ್ತೆ ಬಂದ್ ಆಗಲಿದೆ. ಆದ್ದರಿಂದ ಪ್ರಯಾಣಿಕರು ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಓಕುಳಿಪುರಂ ಅಂಡರ್ ಪಾಸ್ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂ ಪ್ರವೇಶ ಮಾಡಬೇಕಿದೆ. ಆದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಸ್ತಿ ಆಗಲಿದೆ.

ಈ ಮೊದಲು ಮೆಜೆಸ್ಟಿಕ್‌ನಿಂದದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂಗೆ ಹೋಗಬಹುದಿತ್ತು. ಆದರೆ, ರಸ್ತೆ ಬಂದ್ ಆಗಿರುವ ಕಾರಣ ಪೀಕ್ ಸಂದರ್ಣದಲ್ಲಿ ಮಲ್ಲೇಶ್ವರಂಗೆ ಬರಲು ಕನಿಷ್ಠ 30ರಿಂದ 1 ಗಂಟೆ ಸಮಯ ಬೇಕಾಗುತ್ತದೆ. ಟ್ರಾಫಿಕ್ ಜಾಮ್ ಆದರೆ, ಮತ್ತಷ್ಟು ಸಮಯ ಬೇಕಾಗುತ್ತದೆ. ಬಿ ಸ್ಟೈಲ್ ಕಡೆಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದ್ದು, ಮುಂದಿನ ಮೂರು ತಿಂಗಳು ರಸ್ತೆ ಬಂದ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಅಂದ್ರೆ ಮೊದಲಿಗೆ ನೆನಪಿಗೆ ಬರುವುದೇ ಟ್ರಾಫಿಕ್ ನಗರ ಅಂತಾ. ನಗರದಲ್ಲಿ ಪ್ರತಿನಿತ್ಯ ವಾಹನ ಸವಾರರು ಟ್ರಾಫಿಕ್‌ನಿಂದ ಪರದಾಡುತ್ತಿರುತ್ತಾರೆ. ಅದರಲ್ಲೂ ಗುಂಡಿ ಬಿದ್ದ ರಸ್ತೆಗಳ ಭಾಗಗಳಂತೂ ಟ್ರಾಫಿಕ್ ನಡುವೆಯೂ ವಾಹನ ಚಲಾಯಿಸುವುದೇ ಸವಾಲಾಗಿಬಿಟ್ಟಿದೆ. ಈ ನಡುವೆಯೇ ಕೆಲವೆಡೆ ರಸ್ತೆ ನಿರ್ಮಾಣ ಕಾಮಗಾರಿ, ವೈಟ್ ಟಾಪಿಂಗ್ ಕೆಲಸಗಳು ನಡೆಯುತ್ತಿವೆ.
ನಗರದ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂನ ಮಂತ್ರಿ ಮಾಲ್‌ವರೆಗಿನ ರಸ್ತೆಗೆ ವೈಟ್ ಟ್ಯಾಪಿಂಗ್ ಕಾರ್ಯ ನಡೆಯುತ್ತಿದೆ. ಇದರಿಂದ ಈ ಭಾಗಗಳಲಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ಮೂರು ತಿಂಗಳು ಈ ಭಾಗಗಳ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.












Click it and Unblock the Notifications