ಕುಡುಕರಿಗೆ ದುಸ್ವಪ್ನವಾಗಿದ್ದ ಬೆಂಗಳೂರು ಪೊಲೀಸ್‌ಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಜನವರಿ 26: ಕುಡುಕರಿಗೆ ದುಸ್ವಪ್ನವಾಗಿದ್ದ ಬೆಂಗಳೂರು ಟ್ರಾಫಿಕ್ ಪೊಲೀಸ್‌ಗೆ ರಾಷ್ಟ್ರಪತಿ ಪದಕ ಲಭಿಸಿದೆ.

ಪೊಲೀಸ್ ಕೆ ವೆಂಕಟೇಶ್ ಅವರು ತಮ್ಮ 5 ವರ್ಷದ ಸೇವಾವಧಿಯಲ್ಲಿ ಒಟ್ಟು 680 ಡ್ರಂಕ್ ಆಂಡ್ ಡ್ರೈವ್ ಪ್ರಕರಣಗಳನ್ನು ಅವರು ಪತ್ತೆ ಮಾಡಿದ್ದರು.ಜೊತೆಗೆ 1.3 ಲಕ್ಷ ರೂ ದಂಡ ವಸೂಲಿ ಮಾಡಿದ್ದರು.

ಒಟ್ಟು ಕರ್ನಾಟಕದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ ದೊರೆತಿದೆ. ವೆಂಕಟೇಶ್ ಅವರು ಈಗ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಅಸಿಸ್ಟೆಂಟ್ ಸಬ್‌ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Bengaluru Traffic Police Who Caught 680 Drunken Drivers Gets President Police Medal

ಕುಡಿದು ವಾಹನ ಚಲಾಯಿಸುವವರಿಂದ ಸಾಕಷ್ಟು ಮಂದಿಗೆ ಪ್ರಾಣಾಪಾಯ ಕಟ್ಟಿಟ್ಟ ಮುತ್ತಿ ಎನ್ನುವುದನ್ನು ಅರಿತಿದ್ದ ಅವರು, ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದರು.

ಯಾರಿಗೆ ಪೊಲೀಸ್ ಪದಕ
1.ಓಬಳೇಶ್ ನಂಜಪ್ಪ ಬೀಕಲ, ಎಸ್​ಪಿ(ಐಪಿಎಸ್​ಯೇತರ) ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್
2. ಮಹದೇವ ಪ್ರಸಾದ್ ಕಬ್ಬಳ್ಳಿ ಮಾದಪ್ಪ, ಕಮಾಂಡೆಂಟ್​, ಐಆರ್​ಬಿ ಮುನಿರಾಬಾದ್​, ಕೊಪ್ಪಳ
3. ಪಂಪಾಪತಿ ಮುದ್ಲಾಪುರ ಗೌಡರ್, ಎಸಿಪಿ, ಮಾರತಹಳ್ಳಿ ಸಬ್​ಡಿವಿಷನ್​, ಬೆಂಗಳೂರು
4. ಧರ್ಮೇಂದ್ರ ಎಚ್​.ಎನ್​. ಎಸಿಪಿ, ವಿಜಯನಗರ ಸಬ್​ಡಿವಿಷನ್, ಬೆಂಗಳೂರು
5. ಚಂದ್ರಶೇಖರ ಶಿರಗಳಲೆ ತಿಮ್ಮೇಗೌಡ, ಡಿವೈಎಸ್​ಪಿ, ಸಿಐಡಿ, ಬೆಂಗಳೂರು
6. ಶಂಕರ್​ ಮಲ್ಲಿಕಾರ್ಜುನಪ್ಪ ರಾಗಿ, ಡಿವೈಎಸ್​ಪಿ, ಕರ್ನಾಟಕ ಲೋಕಾಯುಕ್ತ ಧಾರವಾಡ
7. ಸಿದ್ದರಾಜು ಸಿ. ಡಿವೈಎಸ್​ಪಿ ಸ್ಪೆಷಲ್ ಇನ್​ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು
8. ಕರಿಯಪ್ಪ ಅಮ್ಮಂಡ ಗಣಪತಿ, ಡಿವೈಎಸ್​ಪಿ, ಸ್ಪೆಷಲ್ ಇನ್​ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು
9. ಸಂಗಪ್ಪ ಹುಲ್ಲೂರು ಸಿದ್ದಪ್ಪ, ಡಿವೈಎಸ್​ಪಿ, ಕಲಬುರಗಿ ಗ್ರಾಮೀಣ ಉಪವಿಭಾಗ, ಕಲಬುರಗಿ
10. ಲಕ್ಷ್ಮಿನಾರಾಯಣ ಎ.ವಿ., ಡಿವೈಎಸ್​ಪಿ, ಮಾಗಡಿ ಉಪವಿಭಾಗ, ರಾಮನಗರ
11 ಶಂಕರಪ್ಪ ಗೋವಿಂದಯ್ಯ ಬೆಂಕಿಕೆರೆ, ಪೊಲೀಸ್ ಇನ್​ಸ್ಪೆಕ್ಟರ್​, ಸಿಐಡಿ, ಬೆಂಗಳೂರು
12. ಸತೀಶ್ ಸುಬ್ಬಣ್ಣ ಬಿಲಗಳಿ, ಪೊಲೀಸ್ ಇನ್​ಸ್ಪೆಕ್ಟರ್, ಎಸಿಬಿ ಉಡುಪಿ
13 ಬಾಬುಸಿಂಗ್ ಹನುಮಂತ ಸಿಂಗ್ ಕಿತ್ತೂರು, ಪಿಎಸ್​ಐ, ಫಿಂಗರ್ ಪ್ರಿಂಟ್​ ಯೂನಿಟ್ ಆಫೀಸ್ ಆಫ್​ ದ ಕಮಿಷನರ್ ಆಫ್ ಪೊಲೀಸ್ ಹುಬ್ಬಳ್ಳಿ ಧಾರವಾಡ ಸಿಟಿ
14 ವೆಂಕಟೇಶ ಕೃಷ್ಣಪ್ಪ, ಎಎಸ್​ಐ, ಬಸವನಗುಡಿ ಟ್ರಾಫಿಕ್​ ಪೊಲೀಸ್ ಸ್ಟೇಷನ್, ಬೆಂಗಳೂರು
15. ಶಿವಯ್ಯ ಸುಕುಮಾರ್, ಎಎಸ್​ಐ, ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆ
16 ರಾಜಕುಮಾರ್​, ಅಸಿಸ್ಟೆಂಟ್ ರೆವೆನ್ಯೂ ಸಬ್​ ಇನ್​ಸ್ಪೆಕ್ಟರ್​, ಡಿಎಆರ್​ ಮೈಸೂರು
17. ಶಿವ ಕುಮಾರ್ ಪಿ.ಎಸ್​. ಹೆಡ್​ಕಾನ್​​ಸ್ಟೆಬಲ್​, ಇಂಟೆಲಿಜೆನ್ಸ್ ಬೆಂಗಳೂರು
18 ನಂಜುಂಡಯ್ಯ ಚಂದ್ರಯ್ಯ ಗೊಬ್ಬಡಿ, ಹೆಡ್​ ಕಾನ್​ಸ್ಟೆಬಲ್​, ಇಂಟೆಲಿಜೆನ್ಸ್ ಬೆಂಗಳೂರು
19. ರಂಗನಾಥ ರಂಗಶಾಮಯ್ಯ, ಸಿವಿಲ್ ಹೆಡ್​ಕಾನ್​ಸ್ಟೆಬಲ್​, ಎಸ್​ಸಿಆರ್​ಬಿ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+