ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಪೊಲೀಸರ ಕೈಗೆ ಹೊಸ ಮೊಬೈಲ್, ನಿಯಮ ಉಲ್ಲಂಘನೆ ಅಸಾಧ್ಯ

By Manjunatha
|
Google Oneindia Kannada News

ಬೆಂಗಳೂರು, ಜನವರಿ 29: ಇನ್ನು ಮುಂದೆ ಟ್ರಾಫಿಕ್ ಪೊಲೀಸರ ಕಣ್ ತಪ್ಪಿಸುವುದು ಕಷ್ಟವಾಗಬಹುದು ಏಕೆಂದರೆ ನಗರದ ಟ್ರಾಫಿಕ್ ಪೊಲೀಸರ ಕೈಗೆ ವಿಶೇಷ ತಂತ್ರಜ್ಞಾನ ಅಳವಡಿಸಿರುವ ಸ್ಮಾರ್ಟ್‌ಫೋನ್‌ಗಳು ಬಂದಿವೆ.

ಹೌದು, ನಿಯಮ ಉಲ್ಲಂಘನೆ ದಾಖಲಿಸುವ ಆಪ್ ಅಳವಡಿಸಿರುವ ಈ ಹೊಸ ಸ್ಮಾರ್ಟ್‌ ಫೋನ್‌ಗಳು ನಂಬರ್‌ ಪ್ಲೇಟ್‌ಗಳನ್ನು ಚಕ್ಕನೆ ಗುರುತಿಸಿ ವಾಹನದ ಸಂಪೂರ್ಣ ಮಾಹಿತಿ ಹೊರತೆಗೆಯುವ ನಿಪುಣತೆಯನ್ನು ಹೊಂದಿದ್ದು, ಎಷ್ಟೇ ವೇಗವಾಗಿ ಓಡುವ ವಾಹನದ ನಂಬರ್‌ ಪ್ಲೇಟ್‌ ಅನ್ನೂ ಕೂಡ ಕ್ಷಾರ್ಧದಲ್ಲೆ ಸ್ಕ್ಯಾನ್ ಮಾಡಿ ಮಾಹಿತಿ ನೀಡಬಲ್ಲುದಾಗಿದೆ.

ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'

ಈಗಾಗಲೇ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಹೊಸ ತಂತ್ರಜ್ಞಾನ ಉಳ್ಳ ಈ ಸ್ಮಾರ್ಟ್‌ಪೋನ್‌ಗಳನ್ನು ಹಿಡಿದು ನಿಂತಿದ್ದು, ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಲೇ ಬೇಕಾದ ಅನಿವಾರ್ಯತೆ ಇದೆ.

Bengaluru Traffic police gets new technology to catch traffic violation

ಈ ಹೊಸ ಸ್ಮಾರ್ಟ್‌ಪೋನ್‌ನಿಂದಾಗಿ ಟ್ರಾಫಿಕ್ ಪೊಲೀಸರ ಶ್ರಮ ಕಡಿಮೆ ಆಗಿದ್ದು, ಸಿಗ್ನಲ್ ಜಂಪ್, ಅಡ್ಡಾ ದಿಡ್ಡಿ ಚಾಲನೆ, ಪಲಾಯನ ಮಾಡುವ ವಾಹನ ಸವಾರರನ್ನು ಕ್ಷಣಾರ್ಧದಲ್ಲಿ ಗುರುತು ಹಿಡಿದು ಅವರ ಮೇಲೆ ಕೇಸು ದಾಖಲಿಸಬಹುದಾಗಿದೆ.

ಹೊಸ ತಂತ್ರಜ್ಞಾನ ಉಳ್ಳ ಸ್ಮಾರ್ಟ್‌ಫೋನ್‌ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಈ ಟ್ವೀಟ್‌ಗೆ ಹಲವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Bengaluru Traffic police gets new technology to catch traffic violation

ಕೆಲವರು ಪೊಲೀಸರ ಕಾಲೆಳೆದಿದ್ದು, ಈ ಉಪಕರಣ ಭಾರತದ್ದಾ ಅಥವಾ ಚೈನಾದ್ದ ಎಂದು ಕೇಳಿದ್ದಾರೆ. ಮತ್ತೊಬ್ಬರು 'ಹೊಸ ಉಪಕರಣದಲ್ಲಿ ನಿಯಮ ಮುರಿಯುವ ಪೊಲೀಸರಿಗೆಂದು ಹೊಸ ಆಯ್ಕೆ ನೀಡಿ' ಎಂದು ಮೂದಲಿಸಿದ್ದಾರೆ.

English summary
Bengaluru Traffic police introduced new technology smartphones to get catch traffic violators. New smartphones has Violation Recording Mobile APP in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X