ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಲವನ್ನು ಎದುರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರಂತೂ ರೆಡಿ

|
Google Oneindia Kannada News

ಬೆಂಗಳೂರು, ಮೇ 30: ಮಳೆಗಾಲವನ್ನು ಎದುರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರಂತೂ ಸಿದ್ಧರಾಗಿದ್ದಾರೆ.

ಒಟ್ಟು 44 ವಿಶೇಷ ತಂಡಗಳನ್ನು ರಚಿಸಿದ್ದು ಬಿಬಿಎಂಪಿಗಿಂತಲೂ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡುತ್ತಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲೂ ಒಂದೊಂದು ವಿಶೇಷ ತಂಡ ತಯಾರಿದೆ. ಹಗ್ಗ, ಬಕೆಟ್‌ಗಳು, ಮರಗಳನ್ನು ಕತ್ತರಿಸುವ ಸಾಧನಗಳನ್ನು ಸಿದ್ಧವಿಟ್ಟುಕೊಂಡಿದೆ.

ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್, ಪ್ರಯಾಣಿಕರು ಸುಸ್ತೋ ಸುಸ್ತು ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್, ಪ್ರಯಾಣಿಕರು ಸುಸ್ತೋ ಸುಸ್ತು

ಈ ವಿಶೇಷ ತಂಡಗಳು ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಅರಣ್ಯ ಇಲಾಖೆ ಇನ್ನಿತರೆ ವಾಟ್ಸಪ್ ಗ್ರೂಪ್‌ಗಳನ್ನು ಆರಂಭಿಸಲು ಸೂಚನೆ ನೀಡಿದೆ.ಸಿಲ್ಕ್ ಬೋರ್ಡ್ ಜಂಕ್ಷನ್, ನಾಗವಾರ, ಮೈಸೂರು ರಸ್ತೆ ಇನ್ನು ಮುಂತಾದ ಕಡೆಗಳಲ್ಲಿ ಮಳೆ ಬಂದ ತಕ್ಷಣ ನೀರು ಹರಿಯದೇ ಅಲ್ಲೇ ನಿಲ್ಲುತ್ತದೆ .

Bengaluru traffic police are ready for monsoon

ಈ ವಿಶೇಷ ತಂಡವು ಈಗಾಗಲೇ ಕಾರ್ಯ ಆರಂಭಿಸಿದೆ. ರಸ್ತೆಯ ಅಕ್ಕ ಪಕ್ಕದಲ್ಲಿರುವ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ಅದರ ರೆಂಬೆಗಳನ್ನು ಕಟಾವು ಮಾಡಲಾಗುತ್ತದೆ. ಅಕ್ರಮ ಕೇಬಲ್‌ಗಳ ತೆರವಿಗೂ ಮುಂದಾಗಿದ್ದಾರೆ.

ಮೇ ತಿಂಗಳಲ್ಲಿ ನಗರಾದ್ಯಂತ 125 ಮರಗಳು ಹಾಗೂ 370 ರೆಂಬೆಗಳು ಮುರಿದುಬಿದ್ದಿವೆ. 15 ಅಡಿ ಎತ್ತರದ ಮರಕ್ಕೆ 8 ಸಾವಿರ ನೀಡಬೇಕು. ಬಿಬಿಎಂಪಿಯು ಸ್ಥಳೀಯರಿಗೆ ಯಾವುದೇ ತೊಂದರೆ ನೀಡದೆ ಅವರಿಂದ ಹಣ ಪಡೆಯದೆ ಕೆಲಸ ಮಾಡಿಕೊಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Readying for the onset of the monsoon, police have formed 44 special teams to ease traffic woes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X