Video: ಬೆಂಗಳೂರು ಏರ್‌ಪೋರ್ಟ್‌ನಿಂದ ಮುಂಬೈಗೆ ಹಾರಿದ ಸ್ನೇಹಿತ, ಜೆಪಿನಗರ ತಲುಪದೇ ಟ್ರಾಫಿಕ್‌ನಲ್ಲಿ ಸಿಲುಕಿದ ಮತ್ತೊಬ್ಬ!

ಬೆಂಗಳೂರು: ವಿಶ್ವ ಮಟ್ಟದಲ್ಲೂ ಬೆಂಗಳೂರಿನ ಟ್ರಾಫಿಕ್ ಜಾಮ್ ಸಹ ಸ್ಥಾನ ಪಡೆದಿದೆ. ಇದು ಆಗಾಗ ಸಾಬೀತಾಗುತ್ತಲೇ ಇದೆ. ಇದೀಗ ಇಬ್ಬರು ಸ್ನೇಹಿತರ ಬೆಂಗಳೂರಿನ ಟ್ರಾಫಿಕ್ ಜಾಮ್ ಎಷ್ಟಿರುತ್ತದೆ ಎಂದು ಒಂದು ಚಾಲೇಂಜ್ ಮೂಲಕ ಖಚಿತಪಡಿಸಿದ್ದಾರೆ. ಬೆಂಗಳೂರು ಏರ್‌ ಪೋರ್ಟ್‌ನಿಂದ ಮುಂಬೈ ತಲುಪಬಹುದು, ಅಷ್ಟೇ ಸಮಯದಲ್ಲಿ ಬೆಂಗಳೂರಿನ ಜೆಪಿ ನಗರ ತಲುಪಲು ಆಗುವುದಿಲ್ಲ ಎಂಬುದು ತೋರಿಸಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹರ್ಷಿತ್ (harshitchajjed) ಎಂಬುವವರು ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಬೆಂಗಳೂರಿನ ಜನರು ನಿತ್ಯವು ಅನುಭವಿಸುವ ನರಕ ಸದೃಶ್ಯ ಅನುಭವವನ್ನು ಎಳೆಎಳೆಯಾಗಿ ತೋರಿಸಿದೆ. ಈ ಇಬ್ಬರು ಸ್ನೇಹಿತರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ನಿಂತುಕೊಂಡು ಕ್ರೇಜಿ ಚಾಲೆಂಜ್ ಮಾಡುತ್ತಾರೆ. ನಾನು ಮುಂಬೈ ತಲುಪುತ್ತೇನೆ, ನೀನು ಮರಳಿ ಜೆಪಿ ನಗರ ತಲುಪುವಂತೆ ಮಾತನಾಡಿಕೊಳ್ಳುತ್ತಾರೆ?. ಇಬ್ಬರ ಎರಡು ಕಡೆಗಿನ ಪ್ರಯಾಣದ ವಿಡಿಯೋ ಇದಾಗಿದ್ದು, ಮುಂಬೈ ತಲುಪಿದ ಸ್ನೇಹಿತನ ಕರೆ ಸ್ವೀಕರಿಸಿದ ಬೆಂಗಳೂರಿನ ಸ್ನೇಹಿತ ಒಂದು ಕ್ಷಣ ಶಾಕ್ ಆಗಿದ್ದಾರೆ.

Bengaluru Traffic Jam

ಚಾಲೆಂಜ್‌ನಲ್ಲಿ ಗೆದ್ದಿದ್ದು ಟ್ರಾಫಿಕ್!

ಬೆಂಗಳೂರು ಏರ್‌ಪೋರ್ಟ್‌ನಿಂದ ಸ್ನೇಹಿತ ಮುಂಬೈಗೆ ತೆರಳುವ ಮುನ್ನ ಬೋರ್ಡಿಂಗ್ ಪಾಸ್ ಪಡೆದು ಒಳಪ್ರವೇಶಿಸಿ, ಸ್ವಲ್ಪ ಹೊತ್ತು ಕೂತು, ತಿಂಡಿ ತಿಂದಿದ್ದಾರೆ. ಬಳಿಕ ಫ್ಲೈಟ್ ಹಿಡಿದು ಮುಂಬೈ ತಲುಪಿದ್ದಾರೆ. ಮುಂಬೈ ನಿಲ್ದಾಣ ಇಳಿಯುತ್ತಲೇ ಬೆಂಗಳೂರಿನಲ್ಲಿದ್ದ ಸ್ನೇಹಿತನಿಗೆ ತಾನು ರೀಚ್ ಆಗಿದ್ದಾಗಿ ವಿಡಿಯೋ ಕಾಲ್ ಮಾಡಿದ್ದಾನೆ.

ಆದರೆ ಏರ್‌ಪೋರ್ಟ್‌ನಿಂದ ಜೆಪಿ ನಗರಕ್ಕೆ ಹೊರಟಿದ್ದ ಮತ್ತೊಬ್ಬ ಸ್ನೇಹಿತ ಟ್ರಾಫಿಕ್‌ನಲ್ಲಿ ಸಿಲುಕಿದ್ದ. ಆತ ಮುಂಬೈ ತಲುಪಿದರೂ ಈತ ಮಾತ್ರ ಇನ್ನೂ ಕಾರಿನಲ್ಲೇ ಕುಳಿತಿದ್ದ. ಯಲಹಂಕ, ಹೆಬ್ಬಾಳ ಜಂಕ್ಷನ್ ಮೂಲಕ ಸಾಗಿ ಬರುಷ್ಟವರಲ್ಲಿ ಸಾಕು ಸಾಕಾಗಿ ಹೋಗಿತ್ತು. ಕಾರಿನಲ್ಲಿರುವಾಗಲೇ ಸ್ನೇಹಿತ ಮುಂಬೈ ತಲುಪಿದ್ದೇನೆ ನೋಡು ಎಂದು ವಿಡಿಯೋ ಕಾಲ್ ಮೂಲಕ ತಿಳಿಸಿದ್ದ. ಸ್ನೇಹಿತ ಮುಂಬೈ ತಲುಪಿದರೂ ಪರವಾಗಿಲ್ಲ, ನಿನ್ನನ್ನು ಜೆಪಿ ನಗರ ತಲುಪಲು ಬಿಡುವುದಿಲ್ಲ ಎಂದು ಬೆಂಗಳೂರು ಟ್ರಾಫಿಕ್ ಸಾರಿ ಸಾರಿ ಹೇಳಿದಂತಿತ್ತು. ಕೊನೆಗೂ ಅಲ್ಪ ದೂರ ಸಂಚಾರಕ್ಕೆ ತಡೆ ನೀಡುವಲ್ಲಿ ಬೆಂಗಳೂರು ಟ್ರಾಫಿಕ್ ಗೆದ್ದಿತು.

ಲಂಡನ್‌ಗೂ ಹೋಗಿ ಬರಬಹುದು: ನೆಟ್ಟಿಗರ ತಮಾಷೆ ಕಾಮೆಂಟ್ಸ್

ಬೆಂಗಳೂರು ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಸ್ನೇಹಿತರ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ ನೆಟ್ಟಿಗರಿಂದ ಬಗೆ ಬಗೆಯ ತಮಾಷೆಯ ಕಾಮೆಂಟ್ ಬಂದಿವೆ. ನೆಟ್ಟಿಗರಲ್ಲಿ ಯಾರೋಬ್ಬರು ಟ್ರಾಫಿಕ್ ಡಿಫೆಂಡ್ ಮಾಡಿಕೊಳ್ಳಲು ಮುಂದಾಗಿಲ್ಲ. 'ಇದು ಬೆಂಗಳೂರು ಟ್ರಾಫಿಕ್‌ನ ನೈಜ ಮುಖ' ಎಂದು ಒಬ್ಬರು ತಿಳಿಸಿದ್ದಾರೆ. ಮತ್ತೊಬ್ಬರು 'ಬೆಂಗಳೂರು ಏರ್‌ಪೋರ್ಟ್‌ನಿಂದ ಸಿಲ್ಕ್ ಬೋರ್ಡ್ ತಲುಪುವ ಸಮಯದಲ್ಲಿ ಲಂಡನ್‌ಗೆ ಹೋಗಿ ಬರಬಹುದು' ಎಂದು ಟ್ರಾಫಿಕ್‌ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಿತ್ಯ ಟ್ರಾಫಿಕ್‌ ನಲ್ಲಿ ಅನುಭವಿಸುವ ಪಡಿಪಾಟಲುಗಳನ್ನು ನೆಟ್ಟಿಗರು ತಮಾಷೆಯಾಗಿ ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+