Traffic Advisory: ಭಾನುವಾರ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ಬಂದ್, ಪರ್ಯಾಯ ರಸ್ತೆಗಳಿವು
ಬೆಂಗಳೂರು, ನವೆಂಬರ್ 22: ಬೆಂಗಳೂರಿನಲ್ಲಿ ಆಗಾಗ ಒಂದಲ್ಲಾ ಒಂದು ಕಡೆಗಳಲ್ಲಿ ಸಭೆ, ಸಮಾರಂಭ, ವಿಐಪಿ ಸಂಚಾರ ಇರುತ್ತದೆ. ಆಗ ಆಯಾ ರಸ್ತೆಗಳಲ್ಲಿ ಸಂಚಾರ ಬಂದ್ ಆಗಿರುತ್ತದೆ. ನಾಡಿದ್ದು ಭಾನುವಾರ ನವೆಂಬರ್ 24ರಂದು ಸಹ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಯಲ್ಲಿ ಸಂಚಾರ್ ಬಂದ್ ಆಗಿರಲಿದೆ. ಸವಾರರು ಇಲ್ಲಿ ತಿಳಿಸಿರುವ ಪರ್ಯಾಯ ರಸ್ತೆ ಗಮನಿಸಿ ಸಂಚರಿಸಬೇಕು.
ಬೆಂಗಳೂರು ನಗರ ಸಂಚಾರಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ದಿನಾಂಕ: 24.11.2024 ರಂದು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 11.30 ಗಂಟೆಯವರೆಗೆ ಮಿಲ್ಲರ್ಸ್ ರಸ್ತೆಯಲ್ಲಿರುವ ಈದ್ಗಾ ಖುದ್ದೂಸ್ ಸಾಹೇಬ್ ಮೈದಾನದಲ್ಲಿ (ಓಲ್ಡ್ ಹಜ್ ಕ್ಯಾಂಪ್) ಸಾರ್ವಜನಿಕ ಸಭೆಯು ಆಯೋಜನೆಗೊಂಡಿದೆ. ಇದರಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ ಎಂದು ತಿಳಿಸಿದ್ದಾರೆ.

ಈದ್ಗಾ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ಪಕ್ಕದ ಮುಖ್ಯ ರಸ್ತೆ ಸೇರಿದಂತೆ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರುತ್ತದೆ. ಬದಲಿ ಮಾರ್ಗಗಳನ್ನು ನೀಡಲಾಗಿದೆ.
ಸಂಚಾರ ನಿರ್ಬಂಧಗೊಂಡ ರಸ್ತೆ, ಮಾರ್ಗ
* ಮಿಲ್ಲರ್ಸ್ ರಸ್ತೆ ಕಂಟೋನ್ಸೆಂಟ್ ರೈಲ್ವೆ ಅಂಡರ್ ಬ್ರೆಡ್‌ನಿಂದ ಹೇನ್ಸ್ ರಸ್ತೆ ಜಂಕ್ಷನ್ ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
* ಹೇನ್ಸ್ ರಸ್ತೆ ಜಂಕ್ಷನ್‌ನಿಂದ ಮಿಲ್ಲರ್ಸ್ ರಸ್ತೆ ಕಂಟೋನ್ಸೆಂಟ್ ರೈಲ್ವೆ ಅಂಡರ್ ಬ್ರಿಡ್ಜ್ ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
* ನಂದಿದುರ್ಗ ರಸ್ತೆ ಬೆನ್ಸನ್ ಕ್ರಾಸ್ ರಸ್ತೆ ಜಂಕ್ಷನ್‌ನಿಂದ ಮಿಲ್ಲರ್ಸ್ ರಸ್ತೆ ಜಂಕ್ಷನ್‌ವರೆಗೆ (ಓಲ್ಡ್ ಹಜ್ ಕ್ಯಾಂಪ್) ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಸವಾರರ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
* ಮಿಲ್ಲರ್ಸ್ ರಸ್ತೆ ಕಡೆಯಿಂದ ಹೇನ್ಸ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಮಿಲ್ಲರ್ಸ್ ರಸ್ತೆಯಲ್ಲಿ ಬಲ ತಿರುವು ಪಡೆದು ಕಂಟೋನ್ಸೆಂಟ್ ರೈಲ್ವೆ ನಿ ರೈಲ್ವೆ ನಿಲ್ದಾಣದ ಮುಂಭಾಗ ಕಂಟೋನ್ಸೆಂಟ್ ರಸ್ತೆಯಲ್ಲಿ ನೇರವಾಗಿ ಸಾಗಿ ಬಂಬೂಬಜಾರ್ ಜಂಕ್ಷನ್ ತಲುಪಿ ನಂತರ ನೇತಾಜಿ ರಸ್ತೆ ಮುಖಾಂತರ ಪುಲಕೇಶಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ.
"ಸಂಚಾರ ಸಲಹೆ/Traffic advisory" pic.twitter.com/yWyMO4hbBN
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 22, 2024
* ಹೇನ್ಸ್ ರಸ್ತೆ ಕಡೆಯಿಂದ ಮಿಲ್ಲರ್ಸ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಹೇನ್ಸ್ ರಸ್ತೆ ಜಂಕ್ಷನ್‌ನಿಂದ ಹೇನ್ಸ್ ರಸ್ತೆಯಲ್ಲಿ ನೇರವಾಗಿ ಸಾಗಿ ಧನಕೋಟಿ ರಸ್ತೆಯಲ್ಲಿ ಬಲ ತಿರುವು ಪಡೆದು ಎ.ಎಂ ರಸ್ತೆ ಮುಖಾಂತರ ಬಂಬೂ ಬಜಾರ್ ತಲುಪಿ ಕಂಟೋನ್ಸೆಂಟ್ ರಸ್ತೆಯಲ್ಲಿ ನೇರವಾಗಿ ಸಾಗಿ ಕ್ಲೀನ್ಸ್ ರಸ್ತೆ - ತಿಮ್ಮಯ್ಯ ರಸ್ತೆ ಮುಖಾಂತರ ಜಯಮಹಲ್ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ.
* ನಂದಿದುರ್ಗ ರಸ್ತೆ ಕಡೆಯಿಂದ ಹೇನ್ಸ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ನಂದಿದುರ್ಗ ರಸ್ತೆ ಬೆನ್ಸನ್ ಕ್ರಾಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಬೆನ್ಸನ್ ಕ್ರಾಸ್ ರಸ್ತೆಯಲ್ಲಿ ನೇರವಾಗಿ ಸಾಗಿ ಬೋರ್ ಬಂಕ್ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಸಾಗಿ ಪಾಟರಿ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಪುಲಕೇಶಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು
ಕಂಟೋನ್ಸೆಂಟ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಮಿಲ್ಲರ್ಸ್ ರಸ್ತೆ, ನಂದಿದುರ್ಗ ರಸ್ತೆ, ಹೇನ್ಸ್ ರಸ್ತೆ, ನೇತಾಜಿ ರಸ್ತೆ, ಕಂಟೋನ್ಸೆಂಟ್ ರಸ್ತೆ, ಹೆಚ್.ಎಂ.ರಸ್ತೆ ಮತ್ತು ಎಂ.ಎಂ ರಸ್ತೆಯಲ್ಲಿ ದಿನಾಂಕ 24/11/2024 ರಂದು ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.












Click it and Unblock the Notifications