Bengaluru Traffic Advisory: ಇಂದು ಸಂಜೆವರೆಗೆ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗಗಳಿವು

Bengaluru Traffic Alert: ಬೆಂಗಳೂರಲ್ಲಿ ಕಾಮಗಾರಿ, ಕಾರ್ಯಕ್ರಮ, ಇತರ ಕಾರಣಗಳಿಂದ ವಾಹನ ಸವಾರರಿಗೆ ತಾಪತ್ರಯ ತಪ್ಪುತ್ತಿಲ್ಲ. ಮಾರ್ಗ ಬದಲಾವಣೆ, ಪರ್ಯಾಯ ರಸ್ತೆ ಅನುಸರಣೆ ದೈನಂದಿನ ಭಾಗವಾಗಿದೆ. ಇದೀಗ ಬೆಂಗಳೂರು ಸಂಚಾರಿ ಪೊಲೀಸರು ಇಂದು ನವೆಂಬರ್ 19 ರಂದು ಬುಧವಾರ ಬೆಳಗ್ಗೆ 07 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಈ ಕೆಳಗಿನ ರಸ್ತೆಗಳಲ್ಲಿನ ಸಂಚಾರ ನಿರ್ಬಂಧಿಸಿದ್ದಾರೆ. ಪರ್ಯಾಯ ಮಾರ್ಗ ನೀಡಿದ್ದು, ಸಂಚಾರ ಸಲಹೆ ಕೊಟ್ಟಿದ್ದಾರೆ. ಅವುಗಳ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ನಂ-01, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಇಂದು ಬುಧವಾರ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಇಗದೆ. ಹೀಗಾಗಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರು. ಇತರ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 80,000 ಸಾರ್ವಜನಿಕರು ಹಾಗೂ ಸುಮಾರು 2305 ವಾಹನಗಳು ಬರುವ ನಿರೀಕ್ಷೆ ಇರುತ್ತದೆ.

Bengaluru Traffic Advisory Major Road Restrictions Today for This Reason check Alternate routes

ಕಾರ್ಯಕ್ರಮ ನಡೆಯುವ ಸ್ಥಳವಾದ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ಹಾಗೂ ಬಳ್ಳಾರಿ ರಸ್ತೆ. ಸಿ ವಿ ರಾಮನ್ ರಸ್ತೆ, ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿಲ್ಲ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಇಂದು ನವೆಂಬರ್ 19 ರಂದು ಬಳ್ಳಾರಿ ರಸ್ತೆಯಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಓಲ್ಡ್ ಹೈಗೌಂಡ್ ಜಂಕ್ಷನ್ -ಕಲ್ಪನಾ ಜಂಕ್ಷನ್ - ಓಲ್ಡ್ ಉದಯ ಟಿವಿ ಜಂಕ್ಷನ್-ಕಂಟೋನ್ಸೆಂಟ್ ರೈಲ್ವೇ ಸ್ಟೇಷನ್ - ಟ್ಯಾನರಿ ರಸ್ತೆ- ನಾಗಾವರ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗಬೇಕಿದೆ.

* ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕೇಂದ್ರ ಭಾಗದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಹೆಬ್ಬಾಳದಲ್ಲಿ ಬಲತಿರುವು ಪಡೆಯಬೇಕು. ಅಲ್ಲಿಂದ ನಾಗಾವರ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಬಂಬು ಬಜಾರ್ ಕ್ಲೀನ್ಸ್ ರಸ್ತೆ ಮುಖಾಂತರ ಸಿಟಿ ಕಡೆಗೆ ಹೋಗಬೇಕು. ಅಥವಾ ಹೆಬ್ಬಾಳ ರಿಂಗ್ ರಸ್ತೆ-ಕುವೆಂಪು ಸರ್ಕಲ್ -ಗೊರಗುಂಟೆ ಪಾಳ್ಯ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ನಗರದ ಕಡೆ ಹೋಗಬಹುದಾಗಿದೆ.

* ಯಶವಂತಪುರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಮತ್ತಿಕೆರೆ ರಸ್ತೆ ಮೂಲಕ ಬಿ ಇ ಎಲ್ ವೃತ್ತದಲ್ಲಿ ಬಲತಿರುವು ಪಡೆದು ರಿಂಗ್ ರಸ್ತೆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವುದು.

* ಯಶವಂತಪುರ ಕಡೆಯಿಂದ ಸಿಟಿ ಕಡೆಗೆ ಹೋಗುವವರು ಡಾ. ರಾಜ್ ಕುಮಾರ್ ರಸ್ತೆ ಮೂಲಕ ಸಿಟಿ ಕಡೆಗೆ ಹೋಗುವುದು.

ಭಾರೀ ವಾಹನಗಳ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ

* ಹೆಬ್ಬಾಳ ಜಂಕ್ಷನ್: ಹೆಬ್ಬಾಳ ಕಡೆಯಿಂದ ಬರುವ ಬಾರೀ ವಾಹನಗಳನ್ನು ಬಳ್ಳಾರಿ ರಸ್ತೆಯ ಕಡೆ ಕಳುಹಿಸದೇ ಔಟರ್ ರಿಂಗ್ ರೋಡ್ ನಲ್ಲಿ ಕಳುಹಿಸಲಾಗುತ್ತದೆ.

* ಓಲ್ಡ್ ಹೈಗೌಂಡ್ಸ್ ಪಿ.ಎಸ್ ಜಂಕ್ಷನ್ : ಹೈಗೌಂಡ್ ಕಡೆಯಿಂದ ಬರುವ ವಾಹನಗಳನ್ನು ಕಲ್ಪನಾ ಜಂಕ್ಷನ್ - ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನ್ಸೆಂಟ್ ರೈಲ್ವೇ ಸ್ಟೇಷನ್ - ಟ್ಯಾನರಿ ರಸ್ತೆ-ನಾಗವರ ಕಡೆ ಕಳುಹಿಸಲಾಗುವುದು.

* ಯಶವಂತಪುರ ಕಡೆಯಿಂದ ಸಿ.ವಿ ರಾಮನ್ ರಸ್ತೆಯ ಕಡೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳ ಪಟ್ಟಿ

* ಪ್ಯಾಲೇಸ್ ರಸ್ತೆ ನಂದಿದುರ್ಗ ರಸ್ತೆ
* ಬಳ್ಳಾರಿ ರಸ್ತೆ
* ಜಯಮಹಲ್ ರಸ್ತೆ
* ಸಿ.ವಿ.ರಾಮನ್ ರಸ್ತೆ
* ಗುಟ್ಟಹಳ್ಳಿ ರಸ್ತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+