Bengaluru Traffic Advisory: ಈದ್ ಮಿಲಾದ್, ಆ.26ರಂದು ಪ್ರಮುಖ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಇಲ್ಲಿವೆ

ಬೆಂಗಳೂರು: ಆಗಸ್ಟ್ 26 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಮದ್ಯಾಹ್ನ 12 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ನೃಪತುಂಗ ರಸ್ತೆಯಲ್ಲಿನ Y.M.C.A. ಮೈದಾನಕ್ಕೆ ಜನರು ಅಲಂಕೃತ ವಾಹನಗಳಲ್ಲಿ ಹಾಗೂ ಮೆರವಣಿಗೆ ಮೂಲಕ ಆಗಮಿಸಲಿದ್ದಾರೆ. ಈ ಸಂಬಂಧ ಪ್ರಮುಖ ರಸ್ತೆಗಳ ಮೂಲಕ ಬರುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಕೆಲವು ರಸ್ತೆಗಳ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಅದರ ವಿವರ ಇಲ್ಲಿದೆ.

ಜೆ.ಸಿ ರಸ್ತೆ, ಆರ್.ಆರ್.ಎಂ.ಆರ್ ರಸ್ತೆ, ಕಸ್ತೂರ ಬಾ ರಸ್ತೆ, ದೇವಾಂಗ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕೆ.ಜಿ ರಸ್ತೆ, ಆರ್.ಟಿ ನಗರ ಮುಖ್ಯ ರಸ್ತೆ, ಚಾಮುಂಡಿನಗರ ಮುಖ್ಯರಸ್ತೆ, ದಿನ್ನೂರು ಮುಖ್ಯ ರಸ್ತೆ, ದೇವೆಗೌಡ ರಸ್ತೆ, ಜಯಮಹಲ್ ರಸ್ತೆ, ದಿನ್ನೂರು ಮುಖ್ಯ ರಸ್ತೆ, ಚರ್ಚ್ ರಸ್ತೆ, ನಾಗವಾರ ಮುಖ್ಯರಸ್ತೆ, ಟ್ಯಾನರಿ ಮುಖ್ಯರಸ್ತೆ, ಮತ್ತು ಹೇನ್ಸ್ ರಸ್ತೆ ಮಿಲ್ಲರ್ಸ್ ಮುಖ್ಯರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಈ ಮಾರ್ಗ ಸವಾರರು ಪರ್ಯಾಯ ಮಾರ್ಗ ಗಮನಿಸಬೇಕು.

Bengaluru Traffic Advisory

ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು ಇವು

* ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್.ಪಿಸಿ ಲೇಔಟ್ ಜಂಕ್ಷನ್-ವೆಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್ ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್-ಮಾಲ್‌- ಓಕಳಿಪುರಂ ಜಂಕ್ಷನ್-ಖೋಡೆ ಜಂಕ್ಷನ್- ಮೂಲಕ ಮೆಜೆಸ್ಟಿಕ್‌ ತೆರಳಬೇಕು.

* ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ದೀಪಾಂಜಲಿನಗರ ಜಂಕ್ಷನ್ ಮುಖಾಂತರ ವೆಸ್ಟ್ ಆಫ್ ಕಾರ್ಡ್ ರಸ್ತೆ ತಲುಪಿ, ವೆಸ್ಟ್ ಆಫ್ ಕಾರ್ಡ್ ರಸ್ತೆ -ವಿಜಯನಗರ -ಮಾಗಡಿ ರಸ್ತೆ ಮುಖಾಂತರ ಮೆಜೆಸ್ಟಿಕ್ ಅಥವಾ ಮಾರ್ಕೆಟ್ ಕಡೆಗೆ ಸಂಚರಿಸಬೇಕು.

* ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್‌ಪಿಸಿ ಲೇಔಟ್ ಜಂಕ್ಷನ್-ವೆಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್ ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಅಂಗಾಳಪರಮೇಶ್ವರಿ ದೇವಸ್ಥಾನ- ಬಿನ್ನಿಮಿಲ್ ಜಂಕ್ಷನ್- ಗೂಡ್ಸ್‌ಶೆಡ್ ರಸ್ತೆ-ರಾಯನ್ ರಸ್ತೆ ಶಾಂತಲ ವೃತ್ತ-ಖೋಡೆ ಜಂಕ್ಷನ್- ಲಕ್ಷ್ಮಣಪುರಿ ಬ್ರಿಡ್ಜ್- ಫ್ರೀಡಂ ಪಾರ್ಕ್ ಜಂಕ್ಷನ್-ಕೆ.ಆರ್ ಸರ್ಕಲ್-ಇನ್‌ಸೈಡ್ ಕಬ್ಬನ್‌ಪಾರ್ಕ- ಲೈಬ್ರರಿ ರಸ್ತೆ- ಹಡ್ಸ್‌ನ ಸರ್ಕಲ್-ಟೌನ್ ಹಾಲ್ ಜಂಕ್ಷನ್- ಎನ್.ಆರ್ ರಸ್ತೆ ಮೂಲಕ ಕೆ.ಆರ್. ಮಾರುಕಟ್ಟೆ ತಲುಪಬಹುದು.

* ಸ್ಥಬ್ದ ಚಿತ್ರಗಳು ಮಾರ್ಕೆಟ್ ಸರ್ಕಲ್‌ಗೆ ಬಂದಾಗ ಎ.ಎಸ್ ಚಾರ್ ಸ್ಟ್ರೀಟ್ ಜಂಕ್ಷನ್‌ನಲ್ಲಿ ವಾಹನಗಳನ್ನು ಎಡ ತಿರುವು ನೀಡುವುದು. (ಬಿವಿಕೆ ಅಯ್ಯಂಗಾರ್ ರಸ್ತೆ ಕಡೆಗೆ) ಹಾಗೂ ಜಿ.ಪಿ ಸ್ಪೀಟ್ ನಿಂದ ಎಸ್. ಆರ್ ರಸ್ತೆ ಮಾರ್ಗವಾಗಿ ಬರುವ ವಾಹಗಳನ್ನು ಎಸ್.ಆರ್ ಸ್ಟ್ರೀಟ್ ರಸ್ತೆಗೆ ಬಿಡದಂತೆ ಜಿಪಿ ಸ್ಟ್ರೀಟ್ ರಸ್ತೆಯಲ್ಲಿಯೇ ಮುಂದುವರೆದು ಬಿ.ವಿ.ಕೆ ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸುವಂತೆ ಮಾರ್ಗ ಬದಲಾಯಿಸಲಾಗಿದೆ.

* ಕೆ.ಆರ್ ರಸ್ತೆ ಕಡೆಯಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ಬರುವ ಎಲ್ಲಾ ವಾಹನಗಳು ಶಿವಶಂಕರಪ್ಪ ವೃತ್ತ-ಎಲ್.ಬಿ.ಎಫ್. ರಸ್ತೆ - ಜೆ.ಸಿ.ರಸ್ತೆ ಟೌನ ಹಾಲ್ ಕಡೆ ಬಿಡುವುದು ಹಾಗೂ ಎ.ವಿ. ರಸ್ತೆ ಮೂಲಕ ಕೆ.ಆರ್. ರಸ್ತೆಗೆ ಬರುವ ವಾಹನಗಳು ಎ.ವಿ. ರಸ್ತೆ ಮೂಲಕ ಮೀಂಟೋ ವೃತ್ತದ ಕಡೆಗೆ ಸಾಗಬೇಕು.

* ಸ್ಥಬ್ದ ಚಿತ್ರಗಳು ಮಾರ್ಕೆಟ್ ಸರ್ಕಲ್‌ಗೆ ಬಂದಾಗ ತಿರುವು ನೀಡುವುದು. (ಬಿವಿಕೆ ಅಯ್ಯಂಗಾರ್ ರಸ್ತೆ ಮಾರ್ಗವಾಗಿ ಬರುವ ವಾಹಗಳನ್ನು ಎಸ್.ಆರ್ ಮುಂದುವರೆದು ಬಿ.ವಿ.ಕೆ ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

* ಕೆ.ಆರ್ ರಸ್ತೆ ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ಎಲ್ಲಾ ವಾಹನಗಳು ಪ್ರೋ.|| ಶಿವಶಂಕರಪ್ಪ ವೃತ್ತ-ಎಲ್.ಬಿ.ಎಫ್. ರಸ್ತೆ - ಜೆ.ಸಿ.ರಸ್ತೆ ಟೌನ ಹಾಲ್ ಕಡೆ ಬಿಡುವುದು ಹಾಗೂ ಎ.ವಿ. ರಸ್ತೆ ಮೂಲಕ ಕೆ.ಆ‌ರ್. ರಸ್ತೆಗೆ ಬರುವ ವಾಹನಗಳು ಎ.ವಿ. ರಸ್ತೆ ಮೂಲಕ ಮೀಂಟೋ ವೃತ್ತದ ಕಡೆಗೆ ಸಾಗುವುದು.

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನ ಸವಾರರು

* ಈದ್ ಸ್ಥಬ್ದ ಚಿತ್ರಗಳು ಎಸ್.ಜೆ.ಪಿ ರಸ್ತೆಗೆ ಪ್ರವೇಶಿಸಿದಾಗ ಮೈಸೂರು ರಸ್ತೆಯಿಂದ ಬರುವ ವಾಹನಗಳು ಸಿಟಿ ಮಾರುಕಟ್ಟೆ ವೃತ್ತದಿಂದ- ಕಲಾಸಿಪಾಳ್ಯ ಮುಖ್ಯರಸ್ತೆಯ ಕಡೆಗೆ ಬಲ ತಿರುವು- ಕೆ.ಪಿ. ಪಾಯಿಂಟ್- ಬಸಪ್ಪ ವೃತ್ತದಲ್ಲಿ ಎಡ ತಿರುವು- ಎಲ್.ಬಿ.ಎಫ್ ರಸ್ತೆ ಮೂಲಕ ಜೆ.ಸಿ ರಸ್ತೆ - ಟೌನ್‌ಹಾಲ್‌ಗೆ ವಾಹನಗಳನ್ನು ಬಿಡಲಾಗುತ್ತದೆ.

* ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ಕಡೆಯಿಂದ ಬರುವ ವಾಹನಗಳು ಮೈಸೂರು ರಸ್ತೆ ಸಿರ್ಸಿ ವೃತ್ತ ಸಿರ್ಸಿ ರಸ್ತೆ ಚಾಮರಾಜಪೇಟೆ 7ನೇ ಅಡ್ಡರಸ್ತೆ ಬಲ ತಿರುವು ಚಾಮರಾಜಪೇಟೆ 2, 3, 4 ಮತ್ತು 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿಮಾರುಕಟ್ಟೆ ಹಾಗು ಇತರೆ ಕಡೆಗೆ ಸಂಚರಿಸಬಹುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

* ಕೆ.ಆರ್ ಸರ್ಕಲ್‌ನಿಂದ ನೃಪತುಂಗ ರಸ್ತೆಯನ್ನು ಬಳಸಿ ಹಾದು ಹೋಗುವ ಗೂಡ್ಸ್ ವಾಹನಗಳು ಹಾಗೂ ಬಿಎಂಟಿಸಿ/ಖಾಸಗಿ/ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆ.ಆರ್ ವೃತ್ತದಲ್ಲಿ ಎಡಕ್ಕೆ ಚಲಿಸಿ ಅಂಬೇಡ್ಕರ್ ವೀದಿ ರಸ್ತೆ ಮುಖಾಂತರ ಗೋಪಾಲಗೌಡ ಬಾಳೆಕುಂದ್ರಿ - ಕ್ಲೀನ್ಸ್ ಜಂಕ್ಷನ್ - ಸಿದ್ದಲಿಂಗಯ್ಯ -ಆರ್‌ಆರ್‌ಎಂಆ‌ರ್ ತಲುಪಿ ಶಾಂತಿನಗರ ಕಡೆ ಹೋಗುವ ವಾಹನಗಳು ರಿಚ್ಮಂಡ್ ಜಂಕ್ಷನ್ ಮುಖಾಂತರ ಹಾಗೂ ಮಾರ್ಕೆಟ್ ಕಡೆ ಹೋಗುವ ವಾಹನಗಳು ಹಡ್ಸನ್ ಜಂಕ್ಷನ್ ಮೂಲಕ ಸಾಗಬೇಕು.

* ಕೆ.ಆರ್.ಮಾರ್ಕೆಟ್ ವೃತ್ತ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು ಜೆ.ಸಿ. ರಸ್ತೆ ಮೂಲಕ ಟೌನ್ ಹಾಲ್ ವೃತ್ತ, ಎನ್.ಆರ್.ವೃತ್ತ ಮಾರ್ಗವಾಗಿ ಕೆ.ಜಿ.ರಸ್ತೆಯಲ್ಲಿ ಚಲಿಸಿ ಕೆಂಪೇಗೌಡ ಬಸ್ ನಿಲ್ದಾಣ ತಲುಪಬಹುದು ಹಾಗೂ ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವವರು ಪಿ.ಕೆ.ಲೇನ್ ಮತ್ತು ಓ.ಟಿ.ಸಿ. ರಸ್ತೆಯಲ್ಲಿ ಚಲಿಸಿ ಎನ್.ಆರ್.ವೃತ್ತದ ಮೂಲಕ ದೇವಾಂಗ ವೃತ್ತ, ಮಿಷನ್ ರಸ್ತೆ ಮಾರ್ಗವಾಗಿ ಸಾಗಬೇಕು.

* ರಿಚ್ಮಂಡ್ ರಸ್ತೆ ಕಡೆಯಿಂದ ಬರುವ ವಾಹನಗಳು ಆರ್.ಆರ್.ಎಂ.ಆರ್. ರಸ್ತೆ - ಹಡ್ನನ್ ವೃತ್ತ ಮೂಲಕ ಕೆ.ಜಿ.ರಸ್ತೆ ಕಡೆಗೆ ಹಾಗೂ ಎನ್.ಆರ್.ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಸಂಚರಿಸಬಹುದು. ಹಡ್ಸನ್ ಸರ್ಕಲ್ ಮೂಲಕ ಕಬ್ಬನ್ ಪಾರ್ಕ್ ಪ್ರವೇಶಿಸುವ ಎಲ್ಲಾ ಮಾದರಿಯ ವಾಹನಗಳನ್ನು ನಿಷೇಧಿಸಿದೆ.

ಟೌನ್ ಹಾಲ್ ಕಡೆ ಹೋಗುವವರ ಗಮನಕ್ಕೆ

* ಈದ್ ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ಕಡೆಯಿಂದ ಬರುವ ವಾಹನಗಳು ಸಿರ್ಸಿ ರಸ್ತೆ -ಚಾಮರಾಜಪೇಟೆ 7ನೇ ಅಡ್ಡರಸ್ತೆ 12. ಮೈಸೂರು ರಸ್ತೆ ಸಿರ್ಸಿ ವೃತ್ತ ಬಲ ತಿರುವು ಚಾಮರಾಜಪೇಟೆ 2, 3, 4 ಮತ್ತು 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿಮಾರುಕಟ್ಟೆ ಹಾಗು ಇತರೆ ಕಡೆಗೆ ಸಂಚರಿಸಬಹುದು.

* ಮೆರವಣಿಗೆಯು ಆರ್.ಟಿ ನಗರ ಮುಖ್ಯ ರಸ್ತೆ, ಚಾಮುಂಡಿನಗರ ಮುಖ್ಯರಸ್ತೆ, ದಿನ್ನೂರು ಮುಖ್ಯ ರಸ್ತೆ, ದೇವೆಗೌಡ ರಸ್ತೆ,ಜಯಮಹಲ್ ರಸ್ತೆ, ದಿನ್ನೂರು ಮುಖ್ಯ ರಸ್ತೆ, ಚರ್ಚ್ ರಸ್ತೆಯಲ್ಲಿ ಸಾಗಬೇಕಾದರೆ ನೀವು ಆ‌ರ್.ಟಿ.ನಗರ 13. ಸುಲ್ತಾನ್‌ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಸೆಂಟ್ಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು- ದಿಣ್ಣೂರು ಮುಖ್ಯರಸ್ತೆ ಪೊಲೀಸ್‌ಠಾಣೆ ಜಂಕ್ಷನ್-ಎಡತಿರುವು-ಆರ್.ಟಿ.ನಗರ ಮುಖ್ಯರಸ್ತೆ ಗುಂಡುರಾವ್‌ ಮನೆ ಜಂಕ್ಷನ್ ಸಿಕ್ಯೂಎಎಲ್ ಜಂಕ್ಷನ್ ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬೇಕಿದೆ.

* ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆ‌ರ್.ಟಿ.ನಗರ ಸುಲ್ತಾನ್ ಪಾಳ್ಯ - ಕಾವಲ್‌ಭೈರಸಂದ್ರ ಕಡೆಗೆ ಮೇದ್ರಿ ಸರ್ಕಲ್ ಅಂಡರ್ ಪಾಸ್-ಬಲತಿರುವು ಆ‌ರ್.ಟಿ.ನಗರ ಮುಖ್ಯರಸ್ತೆ-ಸಂಚರಿಸುವ ವಾಹನಗಳು ಬೆಂಗಳೂರು ಬಳ್ಳಾರಿ ರಸ್ತೆಯ ಮೂಲಕ ಸಿ.ಬಿ.ಐ ಅಂಡರ್ ಪಾಸ್ ಬಲತಿರುವು ಸಿ.ಬಿ.ಐ ರಸ್ತೆ ಆ‌ರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಸಂಚರಿಸಬಹುದಾಗಿದೆ.

* ಸಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್-ಎಡ ತಿರುವು ಬೆಂಗಳೂರು ಬಳ್ಳಾರಿ ರಸ್ತೆ-ಸಿ.ಬಿ.ಐ ಅಂಡರ್ ಪಾಸ್-ಬಲತಿರುವು ಸಿ.ಬಿ.ಐ ರಸ್ತೆ -ಬಲತಿರುವು ಆರ್.ಟಿ ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

* ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್‌ಪಾಸ್‌-ಬೆಂಗಳೂರು ಬಳ್ಳಾರಿ ರಸ್ತೆ- ಸಿ.ಬಿ.ಐ. ಜಂಕ್ಷನ್ ಕರ್ನಾಟಕ ಸ್ಪಿರಿಟ್ -ಬಲ ತಿರುವು ಬಿಬಿ ಸರ್ವೀಸ್ ರಸ್ತೆ-ಎಡತಿರುವು-ಸಿ.ಬಿ.ಐ ರಸ್ತೆ -ಬಲತಿರುವು ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆ ಮೂಲಕ ಸಂಚರಿಸಬೇಕು.

* ಮೆರವಣಿಗೆಯು ನಾಗವಾರ ಮುಖ್ಯರಸ್ತೆ, ಟ್ಯಾನರಿ ಮುಖ್ಯರಸ್ತೆ, ಮತ್ತು ಹೇನ್ಸ್ ರಸ್ತೆ ಮಿಲ್ಲರ್ಸ್ ಮುಖ್ಯರಸ್ತೆ, ಶಿವಾಜಿನಗರ ಆ‌ರ್.ಎಂ.ಎಸ್‌ ಸರ್ಕಲ್/ರಸಲ್ ಮಾರ್ಕೆಟ್‌ಗೆ ಕಡೆಗೆ ಸಾಗುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು ಮುಂದಿವೆ.

* ನಾಗವಾರ ಜಂಕ್ಷನ್‌ನಿಂದ ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ನಾಗವಾರ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಜಂಕ್ಷನ್ ರಸ್ತೆಯಲ್ಲಿ ಬಲ ತಿರುವು ಪಡೆಯಬೇಕು. ಕಾಚರಕನಹಳ್ಳಿ ರಸ್ತೆ, ಚಂದ್ರಿಕ ಜಂಕ್ಷನ್ ಬಳಿ ಎಡ ತಿರುವು ಪಡೆದು ಲಿಂಗರಾಜಪುರಂ ಪ್ರೈ ಓವರ್ ಮೂಲಕ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ರಾಬರ್ಟ್‌ನ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿ ನಗರ ಕಡೆಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ ಹಾಗೂ ನಾಗವಾರ ಜಂಕ್ಷನ್‌ನಿಂದ ಬಲತಿರುವು ಪಡೆದು ಹೆಬ್ಬಾಳ ಮುಖೇನ ನಗರಕ್ಕೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

* ಶಿವಾಜಿ ನಗರದ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆಯವರು ಮಾರ್ಗ ಬದಲಾವಣೆ ಮಾಡಿ, ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದುಕೊಂಡು ಸ್ಪೆನ್ಸ‌ರ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ವೀಲರ್ಸ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದಾಗಿದೆ.

* ಆರ್.ಟಿ.ನಗರದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳನ್ನು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದು.

* ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ನೇತಾಜಿ ಜಂಕ್ಷನ್ ಇಂದ ಬಲತಿರುವು - ಮಾಸ್ಕ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕ್ಲಾರೆನ್ಸ್ ರೈಲ್ವೆ ಮೇಲ್ವೇತುವೆಯಲ್ಲಿ ಪಾಟರಿ ರಸ್ತೆಗೆ ಬಲ ತಿರುವು ಪಡೆದು ಪಾಟರಿ ರಸ್ತೆ ಮತ್ತು ಹೆಣ್ಣೂರು ರಸ್ತೆ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರಂ ಪ್ರೈಓವರ್ ಮುಖೇನ ಹೆಣ್ಣೂರು, ಬಾಣಸವಾಡಿ ಹಾಗೂ ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ.

* ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ ರಸ್ತೆಯಲ್ಲಿ ನೇತಾಜಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ಬಲ ತಿರುವು ಪಡೆದು ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆಯಬೇಕು. ಅಲ್ಲಿಂದ ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಲು ಅವಕಾಶ ಮಾಡಿಕೊಡಲಾಗಿದೆ.

* ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ರಸ್ತೆಯಲ್ಲಿ ಹೇನ್ಸ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ನೇತಾಜಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಎಂ.ಎಂ ರಸ್ತೆ ಮೂಲಕ ಮಾಸ್ಕ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ಬಲ ತಿರುವು ಪಡೆಯಬೇಕು. ಅಲ್ಲಿಂದ ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಬಹುದು.

ಪುಲಿಕೇಶಿನಗರದ ಕಡೆಯಿಂದ ಸೆಫಿಂಗ್ಸ್ ರಸ್ತೆ ಮೂಲಕ ಶಿವಾಜಿನಗರದ ಕಡೆಗೆ ಬರುವ ವಾಹನಗಳು ಕ್ವಾರ್ಡ್ಂಟ್ ಸರ್ಕಲ್ ಹತ್ತಿರ ಎಡ ತಿರುವು ಪಡೆದು ಡಿ.ಕೆ ಸ್ಪೀಟ್ ರಸ್ತೆ ಮೂಲಕ ನೇರವಾಗಿ ಚಲಿಸಬೇಕು. ಲಕ್ಷ್ಮಣ ಮೊದಲಿಯಾ‌ರ್ ಸ್ಪೀಟ್ ಹತ್ತಿರ ಬಲ ತಿರುವು ಪಡೆದು ನೇರವಾಗಿ ಚಲಿಸಿ ಕಮರ್ಷಿಯಲ್ ಸ್ಪೀಟ್ ಬಲ ತಿರುವು ಪಡೆದು ಕಮರ್ಷಿಯಲ್ ಸ್ಟ್ರೀಟ್ ಎಕ್ಸಿಟ್ ಮೂಲಕ ಚಲಿಸುವುದು.

ಹೆಚ್.ಕೆ.ಪಿ ದರ್ಗಾದ ಕಡೆಯಿಂದ ಬರುವವರು ಸುನ್ನಿ ಸರ್ಕಲ್ ಹತ್ತಿರ ಎಡ ತಿರುವು ಪಡೆದುಕೊಂಡು ಪುಲಿಕೇಶಿನಗರದ ಕಡೆಗೆ ಚಲಿಸಬೇಕು. ಕಾಕ್‌ಬರ್ನ್ ರಸ್ತೆ ಕಡೆಯಿಂದ ಶಿವಾಜಿನಗರದ ಕಡೆಗೆ ಚಲಿಸುವ ವಾಹನಗಳು ಸುನ್ನಿ ಸರ್ಕಲ್ ಬಳಿ ಬಲ ತಿರುವು ಪಡೆದು ಸಾಗಬೇಕು.

ಮಧ್ಯಾಹ್ನ 12 ರಿಂದ ರಾತ್ರಿ 11ರವರೆಗೆ ಭಾರೀ ವಾಹನಗಳ ನಿಷೇಧ

* ಕೆಂಗೇರಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಬೆಲೆ ಜಂಕ್ಷನ್ ನಿಂದ ಬರುವ ಭಾರಿ ವಾಹನಗಳು ಬೆಂಗಳೂರು ನಗರ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

* ನೈಸ್ ರಸ್ತೆಯ ಹೊಸಕೆರೆ ಹಳ್ಳಿ ಟೋಲ್ ನಾಯಂಡಹಳ್ಳಿ ಜಂಕ್ಷನ್ ಮುಖಾಂತರ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ನಿಷೇಧಿಸಲಾಗಿದೆ.

* ಔಟರ್ ರಿಂಗ್ ರಸ್ತೆಯ ನಾಗರಭಾವಿ ಸರ್ಕಲ್ ನಿಂದ ನಾಯಂಡಹಳ್ಳಿ ಜಂಕ್ಷನ್ ಮುಖಾಂತರ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ನಿಷೇಧಿಸಲಾಗಿದೆ.

* ಮಾಗಡಿ ಮುಖ್ಯರಸ್ತೆಯ ಮುಖಾಂತರ ಹುಣಸೇಮರ ಜಂಕ್ಷನ್ ಯಿಂದ ಸಿರ್ಸಿ ವೃತ್ತದ ಕಡೆಗೆ ಬರುವ ವಾಹನಗಳನ್ನು ನಿಷೇಧಿಸಲಾಗಿದೆ.

ಇದರೊಂದಿಗೆ ನೃಪತುಂಗ ರಸ್ತೆ, ಕೆ.ಆರ್ ವೃತ್ತದಿಂದ ಪೊಲೀಸ್ ಕಾರ್ನರ್ ವರೆಗೆ, ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್ ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ, ಎನ್.ಆರ್.ರಸ್ತೆ, ಟೌನ್‌ಹಾಲ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್ ವರೆಗೆ, ಪಿ.ಕಾಳಿಂಗರಾವ್ ರಸ್ತೆ, ಎನ್.ಆರ್ ಜಂಕ್ಷನ್ ನಿಂದ ಸುಬ್ಬಯ್ಯ ವೃತ್ತದ ವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+