GIM 2025: ಬೆಂಗಳೂರು ವಾಹನ ಸವಾರರಿಗೆ ಫೆ.14 ರತನಕ ಸಂಚಾರ ಸಲಹೆ
ಬೆಂಗಳೂರು, ಫೆಬ್ರವರಿ 11: ಬೆಂಗಳೂರಿನಲ್ಲಿ ಬಹುನಿರೀಕ್ಷೆಯ ಜಾಗತಿಕ ಹೂಡಿಕೆದಾರರ (Invest Karnataka 2025) ಸಮಾವೇಶ ನಡೆಯುತ್ತಿದೆ. ಕೈಗಾರಿಕೆ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ GIM 2025 ನಡೆಯುತ್ತಿದೆ. ಈ ಸಂಬಂಧ ನಗರದ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ. ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಿದರೆ, ಪರ್ಯಾಯ ಮಾರ್ಗ ಸಹ ನೀಡಲಾಗಿದೆ.
ಬೆಂಗಳೂರು ನಗರ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅರಮನೆ ಮೈದಾನದಲ್ಲಿ ಇಂದಿನಿಂದ ಫೆಬ್ರವರಿ 14ರವರೆಗೆ 'ಇನ್ವೆಸ್ಟ್ ಕರ್ನಾಟಕ 2025' ಕರ್ನಾಟಕ ನಡೆಯಲಿದೆ. ಇದು ಬೆಳಗ್ಗೆ 08.00 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರುಗಲೂ, ಉದ್ದಿಮೆದಾರರು ವಿದೇಶಿ ಗಣ್ಯರುಗಳು ಆಗಮಿಸಲಿದ್ದಾರೆ.

ಸಾರ್ವಜನಿಕರಿಗೂ ಮುಕ್ತ ಪ್ರವೇಶ ಇದೆ. ಹೀಗಾಗಿ ಈ ಭಾಗದಲ್ಲಿ ಜನದಟ್ಟಣೆ ಕಂಡು ಬರಲಿದೆ. ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ. ಈ ಕೆಳಕಂಡಂತೆ ಸಂಚಾರ ಬದಲಾವಣೆ ಮಾಡಲಾಗಿದೆ. ವಾಹನಸವಾರರು ಗಮನಿಸಿ ಓಡಾಡುವಂತೆ ಬಿಟಿಪಿ ಮನವಿ ಮಾಡಿಕೊಂಡಿದ್ದಾರೆ.
* ಬಸ್‌ಗಳಲ್ಲಿ ಬರುವವರ ಗಮನಕ್ಕೆ
ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು: ಬಸವೇಶ್ವರ ಸರ್ಕಲ್-ಒಲ್ಡ್ ಹೈಗೌಂಡ್ ಜಂಕ್ಷನ್-ಕಲ್ಪನ- ಎಂ.ಸಿ.ಸಿ-ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆಯಬೇಕು. ಅಲ್ಲಿಂದ ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ತೆರಳಬೇಕು.

* ನಿರ್ಗಮಿಸುವವರು ಗಮನಿಸಿ
ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ನಿಲುಗಡೆ ಮಾಡಿರುವವರು, ಸ್ಪೋವರ್ಡ್ ಗೇಟ್ ಮುಖಾಂತರ ಹೊರಬಂದು ಜಯಮಹಲ್ ರಸ್ತೆ ಮೂಲಕ ಸಂಚರಿಸಬೇಕು.
* ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವವರು ಗಮನಿಸಿ
ನೀವು ಮೇಕ್ರಿ ವೃತ್ತದ ಅಂಡರ್ ಪಾಸ್ ಮೂಲಕ ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆ ಮಾರ್ಗವಾಗಿ ಪ್ಯಾಲೇಸ್ ಕ್ರಾಸ್‌ನಲ್ಲಿ ಎಡತಿರುವು ಪಡೆಯಬೇಕು. ಚಕ್ರವರ್ತಿ ಬಡಾವಣೆಯಲ್ಲಿ ಎಡ ತಿರುವು ಪಡೆದು ಸರ್ವಿಸ್ ರಸ್ತೆಯಲ್ಲಿ ಎಡ ತಿರುವು ಪಡೆದು, ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ಅಲ್ಲಿಂದ ಸೂಚನಾ ಫಲಕ ನೋಡಿಕೊಂಡು ನಡೆದುಕೊಂಡು ಕಾರ್ಯಕ್ರಮಕ್ಕೆ ಬರಬಹುದು.
* ನಿರ್ಗಮಿಸುವವರು ಗಮನಿಸಿ
ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನ ನಿಲುಗಡೆ ಮಾಡಿರುವವರು ಸೋವರ್ಡ್ ಗೇಟ್ ಮೂಲಕ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.
* ಯಶವಂತಪುರದಿಂದ ಬರುವವರಿಗೆ ಸಂಚಾರ ಸಲಹೆ
ನೀವುಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆಯಬೇಕು. ಸರ್ವಿಸ್ ರಸ್ತೆಯಲ್ಲಿ ಸಾಗಿ, ಕಾವೇರಿ ಜಂಕ್ಷನ್,ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ, ಪ್ಯಾಲೇಸ್ ಕ್ರಾಸ್ ನಲ್ಲಿ ಎಡತಿರುವು ಪಡೆಯಬೇಕು. ಅಲ್ಲಿಂದ ಮುಂದೆ ಚಕ್ರವರ್ತಿ ಲೇಔಟ್ ಎಡ ತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯನಲ್ಲಿ ವಾಹನಗಳನ್ನು ನಿಲ್ಲಿಸಿ ಒಳ ಹೋಗಬೇಕು. ಸೋವರ್ಡ್ ಗೇಟ್ ಮೂಲಕ ಮೇಕ್ರಿ ವೃತ್ತ ಮಾರ್ಗವಾಗಿ ಹೊರ ಹೋಗಬಹುದು.
* ರೈಲು ನಿಲ್ದಾಣ ಕಡೆಯಿಂದ ಬರುವವರು ಗಮನಿಸಿ
ಕಂಟೋನ್‌ಮೆಂಟ್ (ದಂಡು) ರೈಲ್ವೆ ನಿಲ್ದಾಣ ಕಡೆಗಿನಿಂದ ಬರುವವ ವಾಹನ ಸವಾರರು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್-ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಎಡತಿರುವು ಪಡೆಯಬೇಕು. ಪುನಃ ಅಲ್ಲಿಂದ ಸರ್ವೀಸ್ ರಸ್ತೆಯಲ್ಲಿ ಸಾಗಿ, ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಪ್ಯಾಲೇಸ್ ಕ್ರಾಸ್ ನಲ್ಲಿ ಎಡತಿರುವು ಪಡೆಯಬೇಕು. ಚಕ್ರವರ್ತಿ ಬಡಾವಣೆ ಮೂಲಕ ಎಡ ತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಒಳನಡೆಯಬೇಕು. ಗಮನಿಸಿ ನೀವುಗಳು ಸ್ಪೋವರ್ಡ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.
* ಖಾಸಗಿ ವಾಹನ ಸವಾರರರಿಗೆ ಬದಲಿ ಮಾರ್ಗಗಳು
ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ಖಾಸಗಿ ವಾಹನಗಳು ಬಸವೇಶ್ವರ ಸರ್ಕಲ್-ಒಲ್ಡ್ ಹೈಗೌಂಡ್ ಜಂಕ್ಷನ್-ಕಲ್ಪನ-ಎಂ,ಸಿ,ಸಿ-ವಸಂತನಗರ ಅಂಡರ್ ಬ್ರಿಡ್ಜ್ ಬಲತಿ ರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನ ಪಾರ್ಕ್ ಮಾಡಬೇಕು.
ನೀವು ಹೊರ ಹೋಗುವಾಗ ಅರಮನೆ ಮೈದಾನದ ಶಾರೂಕ್ ಖಾನ್ ಗ್ರೌಂಡ್ ನಲ್ಲಿ ನಿಲುಗಡೆ ಮಾಡಿರುವವರು ಸ್ಪೋವರ್ಡ್ ಜಯಮಹಲ್ ರಸ್ತೆ ಮೂಲಕ ಹೊರ ಬರಬಹುದು.
ಪಾರ್ಕಿಂಗ್ ನಿಷೇಧಿತ ಸ್ಥಳಗಳು
* ಪ್ಯಾಲೇಸ್ ರಸ್ತೆ
* ಸರ್.ಸಿ.ವಿ.ರಾಮನ್ ರಸ್ತೆ
* ನಂದಿದುರ್ಗ ರಸ್ತೆ
* ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು
* ಎಂ.ವಿ.ಜಯರಾಮ ರಸ್ತೆ
* ಬಳ್ಳಾರಿ ರಸ್ತೆ
* ತರಳಬಾಳು ರಸ್ತೆ
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications