ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೀಕರಣಗೊಂಡ ಟೌನ್ ಹಾಲ್ ಬಾಡಿಗೆ ದುಬಾರಿ?

|
Google Oneindia Kannada News

ಬೆಂಗಳೂರು, ಜುಲೈ 16 : ನವೀಕರಣಗೊಂಡಿರುವ ಬೆಂಗಳೂರಿನ ಟೌನ್‌ಹಾಲ್ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲು ಸಿದ್ಧತೆ ನಡೆಯುತ್ತಿದೆ. ದಿನದ ಬಾಡಿಗೆ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಬಾಡಿಗೆ ಏರಿಕೆ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನೂ ಕೈಗೊಳ್ಳಲಾಗಿಲ್ಲ.

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಟೌನ್‌ಹಾಲ್‌ ಅನ್ನು ನವೀಕರಣ ಮಾಡಲಾಗಿದ್ದು, 2015ರ ಏಪ್ರಿಲ್‌ನಲ್ಲಿ ಉದ್ಘಾಟನೆ ಮಾಡಲಾಗಿದೆ. ಹೊಸ ವ್ಯವಸ್ಥೆಗಳಿಗೆ ತಕ್ಕಂತೆ ಬಾಡಿಗೆಯನ್ನು ಹೆಚ್ಚಳ ಮಾಡಲು ಬಿಬಿಎಂಪಿ ಮುಂದಾಗಿದೆ. [ನವೀಕರಣಗೊಂಡ ಬೆಂಗಳೂರು ಟೌನ್ ಹಾಲ್ ಹೇಗಿದೆ?]

town hall

750 ಜನರು ಕುಳಿತುಕೊಳ್ಳಬಹುದಾದದ ಟೌನ್‌ಹಾಲ್‌ನ ದಿನದ ಬಾಡಿಗೆಯನ್ನು 8 ಸಾವಿರದಿಂದ 1.22 ಲಕ್ಷಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇದು ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಅಂತಿಮ ಒಪ್ಪಿಗೆ ಸಿಕ್ಕಿಲ್ಲ. [ಮಂಗಳೂರು ಟೌನ್ ಹಾಲ್ ನವೀಕರಣ ಮುಗಿಯುತ್ತಿಲ್ಲ]

ಸುಮಾರು 20 ವರ್ಷಗಳ ಹಿಂದೆ ಬಾಡಿಗೆ ದರವನ್ನು ನಿಗದಿ ಪಡಿಸಲಾಗಿತ್ತು. ಈಗ ನವೀಕರಣಗೊಂಡ ಬಳಿಕ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದೆ. ಅದಕ್ಕೆ ತಕ್ಕಂತೆ ದರವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ ಎಂಬುದು ಅಧಿಕಾರಿಗಳ ಸಮರ್ಥನೆಯಾಗಿದೆ.

ನವೀಕರಣ ಮಾಡುವಾಗ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದೆ. ಖುರ್ಚಿಗಳನ್ನು ಬದಲಾವಣೆ ಮಾಡಲಾಗಿದೆ. ಬೆಳಕು ಮತ್ತು ಧ್ವನಿಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ಯಕ್ರಮದ ವಿಡಿಯೋ ಚಿತ್ರೀಕರಣಕ್ಕಾಗಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದ್ದರಿಂದ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಟೌನ್ ಹಾಲ್ ಕುರಿತು : ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಸಹ ಒಂದಾಗಿದೆ. ಬೆಂಗಳೂರು ನಗರಸಭೆ ಅಧ್ಯಕ್ಷರಾಗಿದ್ದ ಪುಟ್ಟಣ್ಣ ಚೆಟ್ಟಿ ಅವರ ಹೆಸರನ್ನು ಇದಕ್ಕೆ ಇಡಲಾಗಿದ್ದು (ಟೌನ್ ಹಾಲ್) ಎಂದು ಪ್ರಸಿದ್ಧಿಯಾಗಿದೆ.

1933ರ ಮಾರ್ಚ್ 6ರಂದು ಮೈಸೂರಿನ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಟೌನ್ ಹಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸೆಪ್ಟೆಂಬರ್ 11, 1935ರಂದು ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1976, 1990ರಲ್ಲಿ ಇದನ್ನು ನವೀಕರಣ ಮಾಡಲಾಗಿದೆ.

English summary
Bruhat Bangalore Mahanagara Palike (BBMP) prepared the proposal to hike rent of Town Hall. Rent may hike to Rs. 1.25 lakh per day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X