Bengaluru rain update: ಬುಧವಾರ ನಗರದ ವಿವಿಧೆಡೆ ಮಳೆ ದಾಖಲು, ಎಲ್ಲೆಲ್ಲಿ ಎಷ್ಟು?, ನ.24ವರೆಗೆ ಮುಂದುವರಿಕೆ, ವರದಿ

ಬೆಂಗಳೂರು, ನವೆಂಬರ್ 22: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಬುಧವಾರ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಮಧ್ಯಾಹ್ನವೇ ನಗರದ ವಿವಿಧ ಕಡೆಗಳಲ್ಲಿ ತೆಂಪರೆದಿದ್ದಾನೆ. ಕೆಂಗೇರಿ ಒಂದರಲ್ಲಿಯೇ 17 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹಲವೆಡೆ ಸಂಜೆವರೆಗೂ ಹಗುರ ಮಳೆ ದಾಖಲಾಯಿತು.

ನಗರದಲ್ಲಿ ಕೆಲವು ದಿನಗಳಿಂದ ಹಿಂಗಾರು ಮಳೆ ದುರ್ಬಲವಾಗಿದ್ದರಿಂದ ಆಗಾಗ ಚುರುಕು ಬಿಸಿಲು ದಾಖಲಾಗುತ್ತಿತ್ತು. ಇದನ್ನು ಹೊರತುಪಡಿಸಿದರೆ, ಅಷ್ಟಾಗಿ ಚಳಿಯಾಗಲಿ, ಅತ್ಯಧಿಕ ತಾಪಮಾನದ ವಾತಾವರಣ ಕಂಡು ಬಂದಿಲ್ಲ. ಬದಲಾದ ವಾತಾವರಣದಲ್ಲಿ ವಿದ್ಯಮಾನಗಳಿಂದ ಬುಧವಾರ ನಗರದಲ್ಲಿ ಒಂದೆರಡು ಕಡೆ ಜೋರು ಮಳೆ ಆಗಿದೆ.

Bengaluru Today Has Witnessed To Thunderstorm Rain in Several Places,Rain Continue Till Nov 24th

ಮಧ್ಯಾಹ್ನ ದಿಢೀರ್ ಮಬ್ಬು ವಾತಾವರಣ ಶುರುವಾಗಿ, 4 ಗಂಟೆ ಹೊತ್ತಿಗೆ ಜಿಟಿ ಜಿಟಿ ಮಳೆ ಆರಂಭವಾಯಿತು. ಜಯನಗರ, ಕೆಆರ್.ಪುರ, ವೈಟ್ ಫೀಲ್ಡ್, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಶಿವಾಜಿನಗರ, ಅಂಜನಾಪುರ, ವಸಂತ ನಗರ, ಪೀಣ್ಯ, ಸಿವಿ ರಾಮನ್ ನಗರ, ಬಸವನಗುಡಿ, ಕೊತ್ನೂರು, ಮಾರತ್ತಹಳ್ಳಿ, ಹೂಡಿ, ಮಹದೇವಪುರ, ಕೋರಮಂಗಲ, ಹೂಡಿ, ಮಹದೇವಪುರ, ವರ್ತೂರು, ಕಲ್ಯಾಣ ನಗರ, ಬನಶಂಕರಿ, ಕುಮಾರ ಸ್ವಾಮಿ ಬಡಾವಣೆ, ಬಿಇಎಲ್, ಉತ್ತರಹಳ್ಳಿ, ಕೆಂಗೇರಿ, ನಾಗರಭಾವಿ, ವಿಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಬಿದ್ದಿದೆ.

ಇಂದು ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?

ಸಂಜೆ 6 ಗಂಟೆವರೆಗೆ ಕೆಂಗೇರಿಯಲ್ಲಿ ಅಧಿಕ 17 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಹೊರಮಾವು 15.5 ಮಿ.ಮೀ, ಸಿಂಗಸಂದ್ರ 15ಮಿ.ಮೀ, ರಾಜರಾಜೇಶ್ವರಿ ನಗರ (1) 13ಮಿ.ಮೀ, ಕೆಂಗೇರಿ (2) 12.5 ಮಿ.ಮೀ, ಬೊಮ್ಮನಹಳ್ಳಿ ಯಲ್ಲಿ 10ಮಿ.ಮೀ. ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)

ಮಳೆ ವರದಿ ಮಾಹಿತಿ ನೀಡಿದೆ.

ನಗರದಲ್ಲಿ ಅಲ್ಲಲ್ಲಿ ಜೋರು ಮಳೆ ಬಂದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತದ್ದು ಕಂಡು ಬಂತು. ಜಿಟಿ ಜಿಟಿ ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಕಿರಿ ಕಿರಿ ಉಂಟಾಯಿತು.

Bengaluru Today Has Witnessed To Thunderstorm Rain in Several Places,Rain Continue Till Nov 24th

ನ.24ರವರೆಗೆ ವ್ಯಾಪಕ ಮಳೆ ಸಂಭವ

ನಗರದಲ್ಲಿ ಇಂದಿನಿಂದ ನವೆಂಬರ್ 24ರವರೆಗೆ ಒಟ್ಟು ಮೂರು ದಿನ ಇದೇ ರೀತಿಯ ಜೋರು ಮಳೆಯ ವಾತವರಣ ಕಂಡು ಬರುವ ನಿರೀಕ್ಷೆ ಇದೆ. ನಿತ್ಯ ಬೆಳಗ್ಗೆ ಬಿಸಿಲಿನ ವಾತಾವರಣ ಕಂಡು ಬಂದರೂ ಸಹಿತ ಸಂಜೆ ಹೊತ್ತಿಗೆ ವ್ಯಾಪಕ ಮಳೆ ಬರುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಎರಡು ದಿನ ನಗರದಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ. ಈ ವೇಳೆ ನಗರದ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಅಲ್ಲದೇ ಮೂರು ದಿನ ಚಳಿಯ ವಾತಾವರಣ ಕಂಡು ಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+