ಬೆಂಗಳೂರು; ಜ. 20, 21ರಂದು ಪವರ್ ಕಟ್, ಏರಿಯಾಗಳ ಪಟ್ಟಿ

ಬೆಂಗಳೂರು, ಜನವರಿ 20; ಬೆಂಗಳೂರು ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಈ ಕುರಿತು ಮಾಹಿತಿ ನೀಡಿದೆ.

ನಗರದ ದಕ್ಷಿಣ ವಲಯದಲ್ಲಿ ಗುರುವಾರ ಬೆಳಗ್ಗೆ 10 ರಿಂದ ಸಂಜೆ 5ರ ತನಕ. ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ 12ರ ತನಕ. ಉತ್ತರ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 6ರ ತನಕ ಮತ್ತು ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ತನಕ ಪವರ್ ಕಟ್ ಇರಲಿದೆ.

ನಿರ್ವಹಣೆ ಕಾರ್ಯ, ಉನ್ನತೀಕರಣದ ಕಾರಣಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಗುರುವಾರ ಜಯನಗರ, ಜೆ. ಪಿ. ನಗರ, ಕುಮಾರಸ್ವಾಮಿ ಲೇಔಟ್ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Bengaluru To Face Power Cuts On January 20 And 21 List Of Areas

ಯಾವ-ಯಾವ ಬಡಾವಣೆಗಳು?; ಬೆಂಗಳೂರಿನ ದಕ್ಷಿಣ ವಲಯದಲ್ಲಿ ಸಿದ್ದಯ್ಯ ರಸ್ತೆ, ಲಾಲ್‌ ಬಾಗ್ ರಸ್ತೆ, ಸುಧಾಮನಗರ, ವಿಟ್ಲ ನಗರ, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ವಸಂತವಲ್ಲಭ ನಗರ, ಶಾರದಾ ನಗರ, ಎಲ್‌ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಜಯನಗರ 8ನೇ ಬ್ಲಾಕ್, ಪುಟ್ಟೇನಹಳ್ಳಿ ಮುಖ್ಯರಸ್ತೆ, ಬ್ಯಾಂಕ್ ಆಫ್ ಬರೋಡಾ ಬಡಾವಣೆಗಳಲ್ಲಿ ಬೆಳಗ್ಗೆ 10 ರಿಂದ 5 ಗಂಟೆ ತನಕ ಪವರ್ ಕಟ್.

ಗಣಪತಿಪುರ, ಓಲ್ಡ್ ಬ್ಯಾಂಕ್‌ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಜೆಪಿ ನಗರ 2, 3, 4, 5ನೇ ಹಂತ, 15ನೇ ಕ್ರಾಸ್ ಜೆಪಿ ನಗರ, ಡಾಲರ್ಸ್ ಕಾಲೋನಿ, ದೊಮ್ಮಲೂರು, ದೊಡ್ಡನೆಕುಂದಿ, ಐಟಿಪಿಎಲ್ ಮುಖ್ಯರಸ್ತೆ, ಗಾಂಧಿನಗರ, ಭೋಗನಹಳ್ಳಿ ಮುಖ್ಯ ರಸ್ತೆ, ಪಾಣತ್ತೂರು ಮುಖ್ಯರಸ್ತೆ, ಹೊಂಗಸಂದ್ರ, ಪವಮಾನ ನಗರ 8, 9ನೇ ಹಂತದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ಪೂರ್ವ ವಲಯ; ಬೆಳಗ್ಗೆ 10 ರಿಂದ 12ರ ತನಕ ರಾಮಮೂರ್ತಿ ನಗರ ಮುಖ್ಯರಸ್ತೆ, ಮಾರ್ಗೊಂಡನಹಳ್ಳಿ, ಉದಯನಗರ, ಕೆ. ಜಿ. ಪುರ, ಇಂದಿರಾಗಾಂಧಿ ನಗರ, ರಾಮ್‌ ನಂಜಪ್ಪ ಲೇಔಟ್, ಉಮರ್ ನಗರ, ನಾಗವಾರ, ಚಾಣಾಕ್ಯ ಲೇಔಟ್, ಗೆದ್ದಲಹಳ್ಳಿ, ಕಾಫಿ ಬೋರ್ಡ್ ಪ್ರದೇಶದಲ್ಲಿ ಪವರ್ ಕಟ್.

ಉತ್ತರ ವಲಯ; ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ವಿದ್ಯುತ್ ಕಡಿತ. ವೈಯಾಲಿಕಾವಲ್, ಯಶವಂತಪುರದ ಕೆಲವು ಭಾಗ, ಮನೇಶ್ವರ ಸ್ವಾಮಿ ಲೇಔಟ್, ಸಿದ್ದೇಶ್ವರ ಲೇಔಟ್, ಮಾವಳ್ಳಿಪುರ, ಶಬರಿನಗರ, ತಿರುಮೇನಹಳ್ಳಿ, ಬಾಗಲೂರು ಮುಖ್ಯರಸ್ತೆ, ದ್ವಾರಕಾ ನಗರದ 1ನೇ ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ಗಂಗಾನಗರ, ಆರ್‌ಬಿಐ ಕಾಲೋನಿ, ಹೆಸರಘಟ್ಟ ಮುಖ್ಯ ರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ ಮತ್ತು ರಾಜೀವ್ ಗಾಂಧಿ ನಗರ.

ಪಶ್ಚಿಮ ವಲಯ; ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ತನಕ ವಿದ್ಯುತ್ ಕಡಿತ. ಆರ್. ವಿ. ರಸ್ತೆ, ಬಿಎಚ್‌ಇಎಲ್ ಲೇಔಟ್, ದೊಡ್ಡಬೆಲೆ ರಸ್ತೆ, ವಿಘ್ನೇಶ್ವರ ನಗರ, ದುಬಾಸಿಪಾಳ್ಯ, ಬಿಡಿಎ ಏರಿಯಾ ಬ್ಲಾಕ್-1, ಕುವೆಂಪು ಮುಖ್ಯರಸ್ತೆ, ಗಂಗಾನಗರ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಪವರ್ ಕಟ್ ಬಗ್ಗೆ ಟ್ವಿಟರ್, ಫೇಸ್ ಬುಕ್‌ಗಳಲ್ಲಿಯೂ ಅಪ್ ಡೇಟ್ ನೀಡುತ್ತದೆ. ಜನರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಗೆ ಸಹ ಕರೆ ಮಾಡಬಹುದಾಗಿದೆ.

Recommended Video

      Union Budget 2022-23ಈ ಬಾರಿಯ Budgetನಲ್ಲಿ ದೇಶ ನಿರೀಕ್ಷಿಸುತ್ತಿರುವುದೇನು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+