ಬೆಂಗಳೂರಿನ ಈ ಪ್ರದೇಶಗಳಲ್ಲಿ ಜುಲೈ 12ರಿಂದ 17ರವರೆಗೆ ವಿದ್ಯುತ್ ವ್ಯತ್ಯಯ
ಬೆಂಗಳೂರು, ಜುಲೈ 12: ಬೆಂಗಳೂರಿನಲ್ಲಿ ಮುಂದಿನ 6 ದಿನಗಳ ಕಾಲ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Recommended Video
ಬೆಸ್ಕಾಂನ ಜಯನಗರ ಉಪ ವಿಭಾಗದಲ್ಲಿ ವಿದ್ಯುತ್ ಕಾಮಗಾರಿ ಇರುವ ಕಾರಣ ದಕ್ಷಿಣ ಬೆಂಗಳೂರು ಹಾಗೂ ಆಗ್ನೇಯ ಭಾಗದಲ್ಲಿ ಜುಲೈ 12 ರಿಂದ 17ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 12 ರಿಂದ 14ರವರೆಗೆ: ನಂಜಪ್ಪ ಲೇಔಟ್, ವಿನಾಯಕನಗರ, ಚಂದ್ರಪ್ಪ ಲೇಔಟ್, ವಿಲ್ಸನ್ ಗಾರ್ಡನ್, ಮಡಿವಾಳ, ಬಂಡೆ ಪಾರ್ಕ್, ಕೃಷ್ಣ ಲೇಔಟ್, ಬೇಗೂರು-ಕೊಪ್ಪ ರಸ್ತೆ, ಎಲ್‌ಆಂಡ್ ಟಿ ಸೌತ್ ಸಿಟಿ, ಎಲೆಕ್ಟ್ರಾನಿಕ್ಸ್ ಸಿಟಿ, ಎಚ್‌ಎಸ್‌ಆರ್ ಲೇಔಟ್, ಎಚ್‌ಎಸ್‌ಆರ್ ಲೇಔಟ್ 19ನೇ ಮುಖ್ಯರಸ್ತೆ, ಮೈಲಸಂಧ್ರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜುಲೈ 15 ರಿಂದ 17ರವರೆಗೆ: ಆಡುಗೋಡಿ ಪೊಲೀಸ್ ಠಾಣೆ, ಕೋರಮಂಗಲ 8ನೇ ಬ್ಲಾಕ್, ಸೇಂಟ್ ಜಾನ್ಸ್ ಆಸ್ಪತ್ರೆ, ಬಿಗ್ ಬಜಾರ್, ಆಕ್ಸೆಂಚರ್, ಲಕ್ಕಸಂಧ್ರ, ವಿಲ್ಸನ್ ಗಾರ್ಡನ್, ಎಚ್‌ಎಸ್ ಆರ್ ಲೇಔಟ್ 5ನೇ ಮುಖ್ಯರಸ್ತೆ, ಮೈಕೊ ಲೇಔಟ್ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.












Click it and Unblock the Notifications