ಬೆಂಗಳೂರಿನಲ್ಲಿ ಶೂಟೌಟ್; ಅನೈತಿಕ ಸಂಬಂಧದ ಅನುಮಾನ: ಪತ್ನಿಯನ್ನ ಗುಂಡಿಕ್ಕಿ ಕೊಂದ ಪತಿರಾಯ!
ಬೆಂಗಳೂರು: ಅನೈತಿಕ ಸಂಬಂಧದ ಅನುಮಾನದಿಂದಾಗಿ ಬೆಂಗಳೂರಿನಲ್ಲಿ ಗಂಡ ಹೆಂಡತಿ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಮದುವೆಯಾಗಿ 14 ವರ್ಷವಾಗಿದ್ದ ಹಿಂದೆ ಭುವನೇಶ್ವರಿ ಹಾಗೂ ಬಾಲ ಮುರುಗನ್ ಮದುವೆಯಾಗಿದ್ದರು, ಗಂಡ ಅನುಮಾನಪಟ್ಟ ಹಿನ್ನೆಲೆಯಲ್ಲಿ ಹೆಂಡತಿ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ನಲ್ಲಿ ವಿಚ್ಛೇದನ ಅರ್ಜಿ ವಿಚಾರಣೆ ಇರುವಾಗಲೇ ಪತಿ, ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಡಿವೋರ್ಸ್ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿಕೊಂಡು ಮನೆಗೆ ಬಂದ ಬಳಕ ಹೆಂಡತಿ ಜೊತೆ ಜಗಳ ತೆಗೆದ ಪತಿ ಏಕಾಏಕಿ ಗನ್ ತೆಗೆದು ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬಾಲ ಮುರುಗನ್, ನಡುರಸ್ತೆಯಲ್ಲೇ ಹೆಂಡತಿ ಭುವನೇಶ್ವರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಬಸವೇಶ್ವರ ನಗರವನ್ನ ಬೆಚ್ಚಿಬಿಳಿಸುವಂತೆ ಮಾಡಿದೆ.

ಅನೈತಿಕ ಸಂಬಂಧದ ಅನುಮಾನದಿಂದಾಗಿ ಹುಟ್ಟಿಕೊಂಡ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು, ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದೆ. ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಬಾಲಮುರುಗನ್ ಹಾಗೂ ಭುವನೇಶ್ವರಿ 2011ರಲ್ಲಿ ಮದುವೆಯಾಗಿದ್ದು, ಬಳಿಕ ತಮಿಳುನಾಡಿನ ಸೇಲಂನಿಂದ ಬಂದು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಮಕ್ಕಳೊಂದಿಗೆ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು.
ಪದೇ ಪದೇ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಸಂಬಂಧ ಆಗಾಗ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತು ಭುವನೇಶ್ವರಿ, ವಿಚ್ಛೇದನ ಕೇಳಿದ್ದಳು. ಇದಕ್ಕೆ ಮುರುಗನ್ ಒಪ್ಪಿರಲಿಲ್ಲ. ಕೊನೆಗೆ ಭುವನೇಶ್ವರಿ 2024ರಲ್ಲಿ ಮುರುಗನ್ನಿಂದ ದೂರವಾಗಿ ಕೆಪಿ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದರು. ಬಳಿಕ ಅವರು ಡಿವೋರ್ಸ್ ಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೋರ್ಟ್ ಮುರುಗನ್ಗೆ ನೋಟಿಸ್ ನೀಡಿತ್ತು. ಅದರಂತೆ ಮುರುಗನ್ ನ್ಯಾಯಾಲಯಕ್ಕೆ ಹಾಜರಾಗಿದ್ದ. ಇತ್ತ ಭುವನೇಶ್ವರಿ ಸಹ ವಿಚಾರಣೆಗೆ ಹಾಜರಾಗಿದ್ದು, ಎಲ್ಲಾ ವಿಚಾರಣೆ ಮುಗಿಸಿ ಕೋರ್ಟ್ನಿನಿಂದ ಇಬ್ಬರು ಆಚೆ ಬಂದಿದ್ದರು. ಈ ವೇಳೆ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ನಡು ರಸ್ತೆಯಲ್ಲೇ ಗನ್ ತೆಗೆದು ಪತ್ನಿ ಭುವನೇಶ್ವರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
40 ವರ್ಷದ ವ್ಯಕ್ತಿ ಪದವಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಕಳೆದ ನಾಲ್ಕು ವರ್ಷಗಳಿಂದ ನಿರುದ್ಯೋಗಿಯಾಗಿದ್ದಾರೆ. 39 ವರ್ಷದ ಭುವನೇಶ್ವರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದರು. ಈ ಜೋಡಿ 2011 ರಲ್ಲಿ ವಿವಾಹವಾದರು ಮತ್ತು ಅವರು ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಸೇರಿದ ನಂತರ 2018 ರಲ್ಲಿ ಬೆಂಗಳೂರಿಗೆ ತೆರಳಿದರು. ಇಬ್ಬರೂ ತಮಿಳುನಾಡಿನ ಸೇಲಂ ಜಿಲ್ಲೆಯವರಾಗಿದ್ದು, ಇಬ್ಬರು ಮಕ್ಕಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications