Bengaluru: 10 ಲಕ್ಷ ರೂ. ಬಂದರೂ ಬೆಂಗಳೂರಿನಲ್ಲಿ ಉಳಿತಾಯ ಆಗಲ್ಲ ಎಂದ ಟೆಕ್ಕಿ: ದೆಹಲಿ - ನೋಯ್ಡಾದಿಂದ ಬರಬೇಡಿ ಎಂದಿದ್ಯಾಕೆ

Bengaluru: ಬೆಂಗಳೂರಿನಲ್ಲಿ ಹೆಚ್ಚು ಆದಾಯ ಗಳಿಸಿದರೆ ಹೆಚ್ಚು ಉಳಿತಾಯವನ್ನೂ ಸಹ ಮಾಡಬಹುದು. ಆದರೆ ಸ್ವಲ್ಪ ಕಷ್ಟ ಎಂದು ತಾಂತ್ರಿಕ ವೃತ್ತಿಪರರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಉಳಿತಾಯ ಮಾಡುವುದು ತುಂಬಾ ಕಷ್ಟ, ಎಷ್ಟು ಹಣ ಸಂಪಾದನೆ ಮಾಡಿದರೂ ಉಳಿತಾಯವಾಗಲ್ಲ ಎಂದು ಚರ್ಚೆ ನಡೆಯಯತ್ತಿರುವಾಗಲೇ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಬಳ ಅಥವಾ ಹೆಚ್ಚು ಗಳಿಸಿದರೂ, ನಿಜವಾಗಿಯೂ ಉತ್ತಮ ಉಳಿತಾಯ ಮಾಡುವುದು ಕಷ್ಟ ಎಂದು ತಾಂತ್ರಿಕ ವೃತ್ತಿಪರರೊಬ್ಬರು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಬಾಡಿಗೆ, ಪ್ರಯಾಣ, ಆಹಾರ ಮತ್ತು ಇತರ ಜೀವನ ವೆಚ್ಚಗಳು ಹೆಚ್ಚುವರಿ ಆದಾಯವನ್ನು ಸರಿದೂಗಿಸಬಹುದು, ವಿಶೇಷವಾಗಿ ದೆಹಲಿ, ನೋಯ್ಡಾ ಅಥವಾ ಇತರ ನಗರಗಳಿಂದ ಸ್ಥಳಾಂತರವಾಗುವ ಯೋಚನೆ ಇದ್ದರೆ ಇನ್ನೊಮ್ಮೆ ಯೋಚನೆ ಮಾಡಿ ಅಂತಲೂ ಹೇಳಿದ್ದಾರೆ.

Bengaluru Techie Says 10 Lakh Salary Isn t Enough to Save Why Not Delhi or Noida

ಬೆಂಗಳೂರಿಗೆ ಬೇರೆ ಬೇರೆ ಊರುಗಳಿಂದ ಜನ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ ಹೆಚ್ಚಿನ ಸಂಬಳದಿಂದ ಸಿಗುವ ಆರ್ಥಿಕ ಲಾಭವೂ ಕಡಿಮೆಯಾಗುತ್ತಿದೆ ಎಂದು ತಂತ್ರಜ್ಞಾನ ವೃತ್ತಿಪರರೊಬ್ಬರು ಹೇಳಿದ್ದು, ಈ ಕುರಿತು ಆನ್‌ಲೈನ್‌ನಲ್ಲಿ ಚರ್ಚೆ ಆರಂಭವಾಗಿದೆ. ಸುಮಿತ್ ಎನ್ನುವವರು ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಗಳೂರಿನ ವೆಚ್ಚದ ಬಗ್ಗೆ ಮಾತನಾಡಿದ್ದಾರೆ. ದೆಹಲಿ, ನೋಯ್ಡಾ ಮತ್ತು ಭಾರತದ ಪ್ರಮುಖ ನಗರಗಳಿಂದ ವೃತ್ತಿಪರರು ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಮೊದಲು ಸಂಬಳದ ಅಂಕಿ- ಅಂಶವನ್ನು ಬಿಟ್ಟು ಕೆಲವೊಂದು ವಿಷಯಗ ಏಕೆ ನೋಡಬೇಕು ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ, ಹೆಚ್ಚಿನ ಬಾಡಿಗೆ, ಪ್ರಯಾಣ, ಆಹಾರ ಮತ್ತು ಇತರ ವೆಚ್ಚಗಳು ಹೆಚ್ಚುವರಿ ಆದಾಯವನ್ನು ತ್ವರಿತವಾಗಿ ಖರ್ಚಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಂಬಳ ತುಂಬಾ ಒಳ್ಳೆಯದು ಎಂದು ನೀವು ಭಾವಿಸಿದರೆ, ನನ್ನ ಮಾತು ಕೇಳಿ. ನೀವು ದೆಹಲಿ, ನೋಯ್ಡಾ ಅಥವಾ ಭಾರತದ ಯಾವುದೇ ಇತರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಮತ್ತು ಉತ್ತಮ ಮೊತ್ತಕ್ಕಾಗಿ ಆ ಪ್ರದೇಶದಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಯೋಚಿಸುತ್ತಿದ್ದರೆ, ಸಂಬಳ ಉತ್ತಮವಾಗಿದೆ. ಆದರೆ ಬೆಂಗಳೂರಿನಲ್ಲಿ ಜೀವನ ವೆಚ್ಚ ತುಂಬಾ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆಯು ತುಂಬಾ ದುಬಾರಿ ಆಗಿದೆ. ಅಲ್ಲದೆ ಪ್ರಯಾಣ ವೆಚ್ಚಗಳು ತುಂಬಾ ಹೆಚ್ಚಾಗಿದೆ. ನೀವು ನಿಮ್ಮ ಮನೆಗೆ ಆಗ್ಗಾಗ್ಗೆ ಹೋಗಿ ಬರಬೇಕು ಎಂದರೆ ನಿಮಗೆ ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣಿಸಬೇಕು. ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಸಹ ತುಂಬಾ ದುಬಾರಿಯಾಗಿದೆ.

Bengaluru: 10 ಲಕ್ಷ ರೂಪಾಯಿ ಆದಾಯವಿದ್ದರೂ ಸಾಕಾಗಲ್ಲ!

ಒಂದು ಬಾರಿ ವಿಮಾನ ಸಂಚಾರಕ್ಕೆ ನೀವು 20,000 ರೂ. ಖರ್ಚು ಮಾಡಬೇಕಾಗಬಹುದು. ಬಾಡಿಗೆ, ಆಹಾರ ಮತ್ತು ಪ್ರಯಾಣ ವೆಚ್ಚಗಳನ್ನು ಒಳಗೊಂಡಂತೆ, ಒಂದು ವರ್ಷದಲ್ಲಿ ನಿಮಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಬೆಂಗಳೂರಿನಲ್ಲಿ ನಿಮ್ಮ ಪ್ಯಾಕೇಜ್‌ನಲ್ಲಿ ನೀವು 10 ಲಕ್ಷ ರೂಪಾಯಿಗಳನ್ನು ಹೆಚ್ಚು ಪಡೆದರೂ, ಮತ್ತು ನೀವು ನಿಮ್ಮ ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರೂ ಸಹ, ನೀವು ಅಷ್ಟು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಅಂತಿಮವಾಗಿ ನೀವು ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿ ಮೊತ್ತವನ್ನು ಬೆಂಗಳೂರಿನಲ್ಲಿಯೇ ಖರ್ಚು ಮಾಡಿರುತ್ತೀರಿ ಎಂದೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+