ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆ ಕಟ್ಟಿಸಿ, ಅದ್ಧೂರಿಯಾಗಿ ಗೃಹಪ್ರವೇಶ ಮಾಡುವ ಮೂಲಕ ಹೊಸ ಜೀವನದ ಕನಸು ಕಂಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಕಳ್ಳರು ಭಾರಿ ಶಾಕ್ ನೀಡಿದ್ದಾರೆ ನೋಡಿ. ಗೃಹಪ್ರವೇಶದ ಸಂಭ್ರಮದಲ್ಲಿದ್ದ ಕುಟುಂಬದವರ ಕಣ್ತಪ್ಪಿಸಿ ಬರೋಬ್ಬರಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ಕಳ್ಳರು ದೋಚಿದ್ದಾರೆ.

ಈ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜೂರು ಪಾಳ್ಯದಲ್ಲಿ ನಡೆದಿದೆ. ಇಷ್ಟು ದೊಡ್ಡ ಮೌಲ್ಯದ ಚಿನ್ನ ಕಳವಾಗಿದ್ದರೂ ಕೂಡ ದೂರು ದಾಖಲಿಸಿಕೊಳ್ಳಲು ಟೆಕ್ಕಿಯನ್ನ ಪೊಲೀಸರು ಸತಾಯಿಸಿದ್ದು, ಅಂತಿಮವಾಗಿ ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕವಷ್ಟೇ ಪ್ರಕರಣ ದಾಖಲಾಗಿದೆ.

Bengaluru Techie Loses Rs 12 Lakh Gold During Housewarming FIR Filed After CP Intervention

ಘಟನೆಯ ಹಿನ್ನಲೆ

ವರ್ತೂರಿನ ಗುಂಜೂರು ಪಾಳ್ಯದಲ್ಲಿ 35 ವರ್ಷದ ಟೆಕ್ಕಿಯೊಬ್ಬರು ಆಗಸ್ಟ್ 16ರಂದು ತಮ್ಮ ಹೊಸ ಮನೆಯ ಗೃಹಪ್ರವೇಶವನ್ನ ಅತ್ಯಂತ ಸಡಗರದಿಂದ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆಂದೇ ತಂದಿದ್ದ ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳನ್ನ ಮನೆಯ ಕಪಾಟಿನಲ್ಲಿ ಸುರಕ್ಷಿತವಾಗಿ ಎತ್ತಿಟ್ಟಿದ್ದರು.

ಇದರಲ್ಲಿ ನಾಲ್ಕು ಚಿನ್ನದ ಸರಗಳು ಹಾಗೂ ಒಂದು ಚಿನ್ನದ ಬ್ರೇಸ್‌ಲೆಟ್ ಸೇರಿದ್ದು, ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆಗಸ್ಟ್ 16ರಂದು ಕಾರ್ಯಕ್ರಮ ಮುಗಿದ ಬಳಿಕ, ಮರುದಿನ ಮುಂಜಾನೆ (ಆಗಸ್ಟ್ 17) ಟೆಕ್ಕಿಯ ಪತ್ನಿ ಕಪಾಟು ನೋಡಿದಾಗ ಅಲ್ಲಿ ಆಭರಣಗಳು ಸುರಕ್ಷಿತವಾಗಿದ್ದವು.

ಆದರೆ, ಎರಡು ದಿನಗಳ ಬಳಿಕ ಕುಟುಂಬವು ತಿರುಪತಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ, ಸಣ್ಣ ಸರವೊಂದನ್ನ ತೆಗೆದುಕೊಳ್ಳಲು ಡ್ರಾಯರ್ ತೆಗೆದು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಆಭರಣಗಳು ಕಳವಾಗಿರುವುದನ್ನ ತಡವಾಗಿ ಗಮನಿಸಿದ್ದರಿಂದ ದೂರು ನೀಡಲು ವಿಳಂಬವಾಯಿತು ಎಂದು ದೂರುದಾರರು ತಿಳಿಸಿದ್ದಾರೆ.

ಅಲಂಕಾರಿಕರು ಹಾಗೂ ಕೆಲಸದವರ ಮೇಲೆ ಟೆಕ್ಕಿ ಕುಟುಂಬದ ಶಂಕೆ

ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆ ಬಂದಿದ್ದವರ ಮೇಲೆಯೇ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 17ರಂದು ಗೃಹಪ್ರವೇಶದ ಅಲಂಕಾರಗಳನ್ನ ತೆರವುಗೊಳಿಸಲು ಮೂವರು ವ್ಯಕ್ತಿಗಳು ಮನೆಗೆ ಬಂದಿದ್ದರು. ಇದರ ಜೊತೆಗೆ, ಮನೆಯನ್ನ ಸ್ವಚ್ಛಗೊಳಿಸಲು ಕೆಲಸದವರೊಬ್ಬರು ಕೂಡ ಆವರಣದಲ್ಲಿದ್ದರು. ಹಾಗೆಯೇ ಮನೆಯ ಯಾವುದೇ ಬಾಗಿಲು ಅಥವಾ ಬೀಗವನ್ನು ಒಡೆದು ಬಲವಂತವಾಗಿ ಒಳನುಗ್ಗಿದ ಕುರುಹುಗಳು ಕಂಡುಬಂದಿಲ್ಲ. ಹೀಗಾಗಿ, ಸುಲಭವಾಗಿ ಮನೆಗೆ ಪ್ರವೇಶವಿದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೂರು ದಾಖಲಿಸಲು ವರ್ತೂರು ಪೊಲೀಸ್ ಠಾಣೆ ನಿರ್ಲಕ್ಷ್ಯ

ಚಿನ್ನಾಭರಣ ಕಳೆದುಕೊಂಡ ಆಘಾತದಲ್ಲಿದ್ದ ಟೆಕ್ಕಿಗೆ ವರ್ತೂರು ಪೊಲೀಸರು ಮತ್ತಷ್ಟು ಸಂಕಟ ನೀಡಿದ್ದಾರೆ. ದೂರು ದಾಖಲಿಸಲು ಠಾಣೆಗೆ ಹೋದರೆ, ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. "ಪ್ರಕರಣ ದಾಖಲಿಸಲು ನಾನು ಕಚೇರಿಯಿಂದ ಐದು ದಿನಗಳಿಗೂ ಹೆಚ್ಚು ಕಾಲ ರಜೆ ಪಡೆಯಬೇಕಾಯಿತು. ಠಾಣೆಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದೆ, ಆದರೆ ಪೊಲೀಸ್ ಸಿಬ್ಬಂದಿ ಭೇಟಿಯಾಗದೆ ವಾಪಸ್ ಬರಬೇಕಾದ ಪರಿಸ್ಥಿತಿ ಇತ್ತು" ಎಂದು ನೊಂದ ಟೆಕ್ಕಿ ಮಾಧ್ಯಮಗಳಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪೊಲೀಸ್ ಕಮಿಷನರ್ ಮಧ್ಯಪ್ರವೇಶದ ಬಳಿಕ ಎಫ್‌ಐಆರ್

ವರ್ತೂರು ಪೊಲೀಸರಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದಿದ್ದಾಗ ಬೇಸತ್ತ ಸಾಫ್ಟ್‌ವೇರ್ ಎಂಜಿನಿಯರ್, ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಬೆಂಗಳೂರು ಪೊಲೀಸ್ ಕಮಿಷನರ್ ಅವರ ಸಂಪರ್ಕ ಸಂಖ್ಯೆಯನ್ನ ಹುಡುಕಿ ಅವರಿಗೆ ನೇರವಾಗಿ ಕರೆ ಮಾಡಿದ್ದಾರೆ.

ತಾವು ಎದುರಿಸಿದ ಕಳ್ಳತನದ ಘಟನೆ ಹಾಗೂ ದೂರು ದಾಖಲಿಸಿಕೊಳ್ಳುವಲ್ಲಿ ವರ್ತೂರು ಪೊಲೀಸರು ತೋರಿದ ನಿರ್ಲಕ್ಷ್ಯವನ್ನ ವಿವರಿಸಿದ್ದಾರೆ. ತಕ್ಷಣವೇ ಪೊಲೀಸ್ ಕಮಿಷನರ್ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಸೆಪ್ಟೆಂಬರ್ 8 ರಂದು ವರ್ತೂರು ಪೊಲೀಸರು ಅಂತಿಮವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಗೃಹಪ್ರವೇಶದಂತಹ ಶುಭ ಕಾರ್ಯದ ವೇಳೆ ಜನಸಂದಣಿ ಹೆಚ್ಚಿರುವ ಕಾರಣ, ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ತುಂಬ ಮುಖ್ಯ ಎಂಬುದನ್ನ ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಪ್ರಸ್ತುತ, ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶಂಕಿತ ವ್ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+