ಬೆಂಗಳೂರು: ಟ್ಯಾಕ್ಸಿ ಫಾರ್ ಶ್ಯೂರ್ ಬಾಡಿಗೆ ಭಾರೀ ಇಳಿಕೆ
ಬೆಂಗಳೂರು, ಜು. 17: ಟ್ಯಾಕ್ಸಿ ಫಾರ್ ಶ್ಯೂರ್ ತನ್ನ ಸೇವೆಗಳ ದರದಲ್ಲಿ ಭಾರೀ ಪ್ರಮಾಣದ ಇಳಿಕೆ ಮಾಡಿದೆ. ಇದರಿಂದ ಬೆಂಗಳೂರು ನಾಗರಿಕರಿಗೆ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಟ್ಯಾಕ್ಸಿ ಸೌಲಭ್ಯ ಲಭ್ಯವಾಗಲಿದೆ.
ಹವಾನಿಯಂತ್ರಿತ ಟ್ಯಾಕ್ಸಿ ಗಳ ದರವನ್ನು ಕಡಿಮೆ ಮಾಡಲಾಗಿದೆ. ಸರಾಸರಿ ಕಿಲೋ ಮೀಟರ್ ಗೆ 14 ರು. ಇದ್ದ ದರವನ್ನು 6 ರು. ಗೆ ಇಳಿಸಲಾಗಿದೆ. ಜುಲೈ 17 ರಿಂದಲೇ ಹೊಸ ದರ ಜಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಹ್ಯಾಚ್ಬ್ಯಾಕ್ ಕಾರುಗಳ ಮೊದಲ ಎರಡು ಕಿಮೀ ಪ್ರಯಾಣಕ್ಕೆ 49 ರು. ನೀಡಬೇಕು. ಸಮಯದ ಆಧಾರದ ಬಾಡಿಗೆಯಾದರೆ ನಿಮಿಷಕ್ಕೆ 1.50 ರು. ನಿಗದಿ ಮಾಡಲಾಗಿದೆ. ಸೆಡಾನ್ ಕಾರುಗಳಾಗಿದ್ದರೆ ಮೊದಲ ಎರಡು ಕಿಮೀಗೆ 75 ರು. ನೀಡಬೇಕು. ಮಿನಿಮಮ್ ನಂತರ ಕಿಲೋ ಮೀಟರ್ ಗೆ 8 ರು. ನೀಡಬೇಕು. ಸಮಯದ ಆಧಾರವಾಗಿದ್ದರೆ ಕಿಮೀ ಗೆ 1.50 ರು. ನಿಗದಿ ಮಾಡಲಾಗಿದೆ.[ಬೆಂಗಳೂರು : ಪ್ರೀಪೇಯ್ಡ್ ಟ್ಯಾಕ್ಸಿ ದರಗಳು ಹೆಚ್ಚಳ]
ರಾತ್ರಿ ವೇಳೆ ವಿಧಿಸಿದ್ದ ಹೆಚ್ಚುವರಿ ಬಾಡಿಗೆ ದರವನ್ನು ಟ್ಯಾಕ್ಸಿ ಫಾರ್ ಶ್ಯೂರ್ ತೆಗೆದುಹಾಕಿದೆ. ಎರಡು ವಿಭಾಗದ ಟ್ಯಾಕ್ಸಿಗಳಿಗೂ ಇದು ಅನ್ವಯವಾಗಲಿದ್ದು ಹಗಲಿನ ದರದಲ್ಲಿಯೇ ರಾತ್ರಿಯೂ ಸಂಚಾರ ಮಾಡಬಹುದು.
ಈ ಬಗ್ಗೆ ವಿವರಣೆ ನೀಡಿದ ಟ್ಯಾಕ್ಸಿ ಫಾರ್ ಶ್ಯೂರ್ ಸಿಇಒ ಪಲ್ಲವ್ ಸಿಂಗ್, ನಮ್ಮ ಕಂಪನಿಯನ್ನು ಒಂದು ಬ್ರ್ಯಾಂಡ್ ಆಗಿ ಬಿಂಬಿಸಲು ಮತ್ತು ಜನರ ಮೊದಲ ಆಯ್ಕೆಯನ್ನಾಗಿಸಲು ಇಂಥ ಕ್ರಮ ತೆಗೆದುಕೊಂಡಿದ್ದೇವೆ. ಬೆಂಗಳೂರಿಗರಿಗೆ ನಮ್ಮ ದರ ಇಳಿಕೆ ಕ್ರಮ ನೆರವಾಗಲಿದ್ದು ಉತ್ತಮ ಸೇವೆ ನೀಡುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.












Click it and Unblock the Notifications