ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ; 3 ವರ್ಷದ ಮಗುವನ್ನು ಚೀಲದಲ್ಲಿ ತಲೆಕೆಳಗಾಗಿ ಕಟ್ಟಿಹಾಕಿದ ಬಾಲಕ, ಆಗಿದ್ದೇನು?

ಬೆಂಗಳೂರು: ಪಕ್ಕದ ಮನೆಯ ಮೂರು ವರ್ಷ ಹೆಣ್ಣುಮಗುವನ್ನು ಮನೆಯೊಂದರ ಮೇಲೆ ನಿರ್ಜನ ಕೊಠಡಿಯಲ್ಲಿ ತಲೆಕೆಳಗಾಗಿ ಚೀಲದಲ್ಲಿ ಕಟ್ಟಿಹಾಕಿದ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ. ವಿಚಾರ ತಿಳಿಯುವ ಹೊತ್ತಿಗೆ ಸಾಕಷ್ಟು ಸಮಯ ಆಗಿ ಹೋಗಿತ್ತು. ಅದೃಷ್ಟವಶಾತ್, ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಗುವಿನ ಪ್ರಾಣ ಉಳಿದಿದೆ. ಘಟನೆ ನಡೆದಿದ್ದರ ಕುರಿತು ವಾಹನ ಚಾಲಕರೊಬ್ಬರು 'ಒನ್‌ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

11 ವರ್ಷದ ಬಾಲಕ ತನ್ನ ಪಕ್ಕದ ಮನೆಯ ಮೂರು ವರ್ಷದ ಹೆಣ್ಣುಮಗುವನ್ನು ಚೀಲದಲ್ಲಿ ತಲೆಕೆಳಗಾಗಿ ಕಟ್ಟಿ, ಕಬೋರ್ಡ್‌ನಲ್ಲಿಟ್ಟ ಘಟನೆ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವಿಷಯ ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ಸಾಕಷ್ಟು ಸಮಯ ಕಳೆದುಹೋಗಿತ್ತು. ಇನ್ನೂ ಕೆಲವೇ ನಿಮಿಷಗಳು ಕಳೆದಿದ್ದರೆ ಮಗು ಬದುಕುವುದು ಅನುಮಾನವಾಗಿತ್ತು.

Bengaluru Sunkadakatte

ಪೋಷಕರು ಹಬ್ಬದ ಕೆಲಸದಲ್ಲಿ ಬ್ಯೂಸಿ: ಮಕ್ಕಳಿಗೆ ಸಂಕಷ್ಟ

ವಾಹನ ಚಾಲಕ ಕಿರಣ್ ಅವರು ದೂರವಾಣಿ ಮೂಲಕ ಮಾತನಾಡಿ ಘಟನೆ ವಿವರಿಸಿದ್ದಾರೆ. ಅಂಗಳದಲ್ಲಿ ಆಟವಾಡಿಕೊಂಡು ಇರುತ್ತಾರೆ ಎಂದು ಮಕ್ಕಳನ್ನು ಬಿಟ್ಟು ಪೋಷಕರು ಒಳಗೆ ದಸರಾ ಹಬ್ಬದ ಕೆಲಸ ಮುಳುಗಿದ್ದರು. ಈ ವೇಳೆ 11 ವರ್ಷದ ಬಾಲಕ ಮೂರು ವರ್ಷದ ಹೆಣ್ಣುಮಗುವನ್ನು ಮಗು ಪೋಷಕರು ಇರುವ ಅದೇ ಸಣ್ಣ ಅಪಾರ್ಟ್ಮೆಂಟ್ ಮೇಲಿನ ಒಂದು ಕೋಣೆ, ಬಾತ್ ರೂಮ್ ಇರುವ ಸ್ಥಳದಲ್ಲಿ (ಕಮೋಡ್‌) ಕಟ್ಟಿಹಾಕಿ ಬಂದ ಅಮಾನವೀಯ ಘಟನೆ ನಡೆದಿದೆ ಎಂದರು.

ಸಿಸಿ ಕ್ಯಾಮೆರಾದಲ್ಲಿ ಪರಿಶೀಲನೆ ಬಳಿಕ ಸತ್ಯ ಬೆಳಕಿಗೆ

ತುಂಬಾ ಹೊತ್ತಿನಿಂದ ಮಗು ಕಾಣದಿದ್ದಾಗ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ನೆರೆ ಮನೆಯವರನ್ನು ಕೇಳಿದ್ದಾರೆ. ಮನೆ ಮುಂದೆ ನೆರೆಹೊರೆಯವರು ಜಮಾಯಿಸಿದ್ದಾರೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಬಾಲಕ ಮಗುವನ್ನು ಮೇಲೆ ಕರೆದೊಯ್ದದ್ದು ಗೊತ್ತಾಗಿದೆ. ಕೂಡಲೇ ಓಡಿ ಹೋಗಿ ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ. ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಕನ ಪೋಷಕರು ಮನೆಯಿಂದ ಪರಾರಿ

ನೆರೆ ಹೊರೆಯವರೆಲ್ಲ ಬಾಲಕ ಮತ್ತವರ ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೋಷಕರನ್ನು ಕರೆಸಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿಸದ್ದಾರೆ. ಠಾಣೆಯಿಂದ ಬಾಲಕನ ಅಪ್ಪ ಅಮ್ಮ ಇಬ್ಬರು ನಾಪತ್ತೆ ಆಗಿದ್ದಾರೆ. ಸದ್ಯ ಬಾಲಕ ಪೊಲೀಸರ ಬಳಿ ಇದ್ದಾರೆ. 11 ವರ್ಷದ ಬಾಲಕನಿಗೆ 3ವರ್ಷದ ಹೆಣ್ಣುಮಗುವಿನ ಮೇಲೆ ಸೇಡು ಇರಲು ಸಾಧ್ಯವೆ? ಆ ಮಗು ಮಾಡಿದ್ದಾದರು ಏನು? ಇದರ ಹಿಂದೆ ಬಾಲಕನ ಪೋಷಕರ ಕೈವಾಡ ಇದಿಯೇ? ಅವರು ಪರಾರಿ ಆಗಿದ್ದೇಕೆ? ಹೀಗೆ ನೆರೆಹೊರೆಯವುರ ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಮನೆ ಮುಂದೆ ಬರುತ್ತಿದ್ದಂತೆ ಅವರಿಗೆ ಸ್ಥಳೀಯರು ಘಟನೆ ಕುರಿತು ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರನ್ನು ಹಲವರನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ನೆರೆ ಹೊರೆಯವರು ಹೇಳಿದ್ದೇನು?

ಹೆಣ್ಣುಮಗುವಿನ ಪೋಷಕರಲ್ಲಿ ಆಕ್ರಂದನ ಕಂಡು ನೆರೆಹೊರೆಯವರು ಸಹಾಯಕ್ಕೆ ಬಂದಿದ್ದಾರೆ. ಘಟನೆ ತಿಳಿದು ಬಾಲಕನ ಪೋಷಕರಿಗೆ ಬೈದಿದ್ದಾರೆ. ಹೆಣ್ಣುಮಗು ಕರೆದೊಯ್ದು ಬಾಲಕ ಮುಖವೆಲ್ಲ ಪರಿಚಿದ್ದಾನೆ. ತಲೆಕೆಳಗಾಗಿ ಕಟ್ಟಿ ಹಾಕಿದ್ದಾನೆ. ಜೀವಕ್ಕೆ ಹಾನಿಯಾಗಿದ್ದರೆ ಯಾರು ಜವಾಬ್ದಾರರು? ಎಂದು ಮಾತನಾಡಿಕೊಂಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಮುಂದೆ ಮಕ್ಕಳನ್ನು ಮನೆಯಿಂದ ಹೊರಕ್ಕೆ ಆಟವಾಡಲು ಕಳುಹಿಸಲು, ಅಕ್ಕಪಕ್ಕದವರೊಂದಿಗೆ ಬೇರೆಯುವಂತೆ ಹೇಳುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+