ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27 : ಬೆಂಗಳೂರು ಉಪ ನಗರ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ಒಟ್ಟು 15,767 ಕೋಟಿ ರೂ.ಗಳ ಯೋಜನೆ ಇದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವೆಚ್ಚವನ್ನು ಹಂಚಿಕೆ ಮಾಡಲಾಗಿದೆ.

148.17 ಕಿ. ಮೀ.ಗಳ ಬೆಂಗಳೂರು ಉಪ ನಗರ ರೈಲು ಯೋಜನೆ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ಮಾದರಿಯಲ್ಲಿ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.

ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ

15,767 ಕೋಟಿ ರೂ. ಯೋಜನಾ ವೆಚ್ಚವನ್ನು20:20:60 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರ 3,242 ಕೋಟಿ, ರಾಜ್ಯ ಸರ್ಕಾರ 4,734 ಕೋಟಿ ಅನುದಾ ನೀಡಲಿವೆ. ರಾಜ್ಯ ಸರ್ಕಾರದ ತೆರಿಗೆ ಪಾಲು ಸೇರಿರುವುದರಿಂದ ವೆಚ್ಚ ಅಧಿಕವಾಗುತ್ತದೆ.

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಮೊದಲ ಹೆಜ್ಜೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಮೊದಲ ಹೆಜ್ಜೆ

vBengaluru Suburban Rail Project Cost Sharing

ಉಳಿದ 7,791 ಕೋಟಿ ರೂ. ಅನುದಾನವನ್ನು ಕೆ-ರೈಡ್ ಸಂಸ್ಥೆ ಬ್ಯಾಂಕ್ ಅಥವ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಿದೆ. 148.17 ಕಿ. ಮೀ. ಮಾರ್ಗದ ಉಪ ನಗರ ರೈಲು ಯೋಜನೆಯಲ್ಲಿ 4 ಕಾರಿಡಾರ್ ನಿರ್ಮಾಣಗೊಳ್ಳಲಿದ್ದು, 6 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ಉಪ ನಗರ ರೈಲು ಯೋಜನೆ; ಕೇಂದ್ರ ಸಂಪುಟದ ಒಪ್ಪಿಗೆ ಬೆಂಗಳೂರು ಉಪ ನಗರ ರೈಲು ಯೋಜನೆ; ಕೇಂದ್ರ ಸಂಪುಟದ ಒಪ್ಪಿಗೆ

ಕೆಎಸ್ಆರ್ ಬೆಂಗಳೂರು ನಗರ-ದೇವನಹಳ್ಳಿ ಕಾರಿಡಾರ್‌ ಅನ್ನು ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ 3 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದು 41.40 ಕಿ. ಮೀ. ಮಾರ್ಗವಾಗಿದೆ.

ಯಾವುದಕ್ಕೆ ಎಷ್ಟು ವೆಚ್ಚ: ಬೆಂಗಳೂರು ಉಪ ನಗರ ರೈಲು ಯೋಜನೆಯ ಭೂ ಸ್ವಾಧೀನಕ್ಕೆ 1,470 ಕೋಟಿ, ನಿಲ್ದಾಣಗಳ ಕಟ್ಟಡಕ್ಕೆ 1,981 ಕೋಟಿ, ನಿಲ್ದಾಣಕ್ಕೆ 310 ಕೋಟಿ, ವಿದ್ಯುತ್ ಪೂರೈಕೆಗೆ 1050 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಬಾಕಿ ಇತ್ತು. ಈಗ ಕೇಂದ್ರ ಸಚಿವ ಸಂಪುಟ ಸಹ ಯೋಜನೆಗೆ ಒಪ್ಪಿಗೆ ನೀಡಿದೆ. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕೃತ ಘೋಷಣೆಯಾಗಿಲ್ಲ.

4 ಕಾರಿಡಾರ್‌ಗಳು : 148.17 ಕಿ. ಮೀ. ಮಾರ್ಗದಲ್ಲಿ ಒಟ್ಟು ನಾಲ್ಕು ಕಾರಿಡಾರ್‌ಗಳು ಇವೆ.

Recommended Video

Australia ಸರಣಿಗೆ RCBಇಂದ ಆಯ್ಕೆಯಾದ ಆಟಗಾರರು ಯಾರು | Oneindia Kannada

* ಬೆಂಗಳೂರು ನಗರ ರೈಲು ನಿಲ್ದಾಣ-ದೇವನಹಳ್ಳಿ 41.40 ಕಿ. ಮೀ.
* ಬೈಯಪ್ಪನಹಳ್ಳಿ ಟರ್ಮಿನಲ್-ಚಿಕ್ಕಬಣಾವರ 25.01 ಕಿ. ಮೀ.
* ಕೆಂಗೇರಿ-ವೈಟ್‌ಫೀಲ್ಡ್ 35.52 ಕಿ. ಮೀ.
* ಹೀಲಲಿಗೆ ನಿಲ್ದಾಣ-ರಾಜನಕುಂಟೆ 46.24 ಕಿ. ಮೀ. ಮಾರ್ಗ

English summary
Union government will fund Rs 3,242 crore for Bengaluru suburban rail project. For 15,767 cost 148.17 km project Karnataka government will fund 4,734 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X