Bengaluru: ಅಕ್ರಮ ಎಸಗಿದ ಉಪವಿಭಾಗಾಧಿಕಾರಿ ವಿರುದ್ಧ ಪ್ರಕರಣ ದಾಖಲು, ಭೂ ಒತ್ತುವರಿದಾರರ ವಿರುದ್ಧವೂ ಕಠಿಣ ಕ್ರಮ!
ಬೆಂಗಳೂರು ಸೆಪ್ಟೆಂಬರ್ 15: ಅಕ್ರಮ ಎಸಗಿದ ಉಪವಿಭಾಗಾಧಿಕಾರಿ ವಿರುದ್ಧ ಪ್ರಕರಣ ದಾಖಲು, ಭೂ ಒತ್ತುವರಿದಾರರ ವಿರುದ್ಧವೂ ಕಠಿಣ ಕ್ರಮಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಆದೇಶಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ಕಂದಾಯ ಇಲಾಖೆಯಲ್ಲಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣ ನಿಯಂತ್ರಿಸುವ ಸಲುವಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿದ್ದ ತಹಶೀಲ್ದಾರ್ ಜೆ. ಉಮೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಲ್ಲದೆ, ಅವರು ಅಧಿಕಾರದಲ್ಲಿದ್ದ ಸಮಯದಲ್ಲಿ ಕಡೂರು ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೂ 13 ಜನ ತಹಶೀಲ್ದಾರರನ್ನು ಒಳಗೊಂಡ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಅಲ್ಲದೆ, ಕಳೆದ ಐದಾರು ವರ್ಷಗಳಿಂದ ಲೋಕಾಯುಕ್ತ ಸೇರಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ತನಿಖೆಯ ಹಂತದಲ್ಲಿದ್ದ 225 ನೌಕರ/ಅಧಿಕಾರಿಗಳ ಕಡತಗಳನ್ನು ಈಗಾಗಲೇ ಶೀಘ್ರ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣವನ್ನು ದೃಢಪಡಿಸಲಾಗಿದೆ. ಈ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಇಲಾಖೆಯ ವತಿಯಿಂದ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗಿದೆ. ಭ್ರಷ್ಟಾಚಾರ ಮುಕ್ತ ಜನಸ್ನೇಹಿ ಆಡಳಿತಕ್ಕೆ ಮುಂದಾಗುವಂತೆ ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ. ಇದರ ಜೊತೆಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದ/ತೊಡಗಿರುವ ಅಧಿಕಾರಿಗಳ ವಿರುದ್ಧದ ಕ್ರಮವೂ ಮುಂದುವರೆದಿದೆ.
ಅಕ್ರಮವೆಸಗಿದ ಉಪವಿಭಾಗಾಧಿಕಾರಿ ವಿರುದ್ಧ ಎಫ್ಐಆರ್
ಯಲಹಂಕ ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಎಂಬವರನ್ನು 2/2/2023ರಂದು ವರ್ಗಾವಣೆ ಮಾಡಲಾಗಿತ್ತು. ಅದರಂತೆ ಬೆಂಗಳೂರು ಉತ್ತರ ವಿಭಾಗಾಧಿಕಾರಿಗಳ ಹುದ್ದೆಯ ಪ್ರಭಾರವನ್ನು ಅವರು ನೂತನ ಅಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ ಅವರಿಗೆ ವಹಿಸಿಕೊಟ್ಟಿದ್ದರು.
ಆದರೆ, ಎಂ.ಜಿ. ಶಿವಣ್ಣ ಅವರು ವರ್ಗಾವಣೆಗೊಂಡ ನಂತರವೂ ಯಲಹಂಕ ತಾಲೂಕು ಬಾಗಲೂರು ಗ್ರಾಮದ ಸರ್ವೆ ನಂ.191/1 ಮತ್ತು ಇತರೆ ಜಮೀನುಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಧಿಕಾರಿಗಳ ನ್ಯಾಯಾಲಯದ ಪ್ರಕರಣ ಸಂಖ್ಯೆ ಆರ್ಎ(ವೈಎಲ್ ಕೆ) 557/2022 ಮತ್ತು ಆರ್ಎ(ವೈಎಲ್ ) 712/22 ರ ಪ್ರಕರಣದಲ್ಲಿ ದಿನಾಂಕ:31/01/2023 ರಂದು ಅಂತಿಮ ಆದೇಶ ಹೊರಡಿಸಿದ್ದು, ದಿನಾಂಕ:13/02/2023 ರಂದು ಭೂಮಿ ತಂತ್ರಾಂಶದಲ್ಲಿ ಅನುಮೋದನೆಯನ್ನು ನೀಡಿರುತ್ತಾರೆ.
ಹಿಂದಿನ ಉಪವಿಭಾಗಾಧಿಕಾರಿಗಳು, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗಳ ಹುದ್ದೆಯಿಂದ ವರ್ಗಾವಣೆಗೊಂಡ ನಂತರವೂ ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿದ್ದಾರೆ. ಆದರೆ, ಇಂತಹ ಕೆಲಸಗಳು ಕ್ರಿಮಿನಲ್ ಸ್ವರೂಪದ ಅಪರಾಧವಾಗಿರುವುದರಿಂದ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆ 12/09/2023ರಂದೇ ಅಧಿಕಾರಿಯ ವಿರುದ್ಧ "ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 192(ಎ)" ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಫ್ಐಆರ್ ಪ್ರತಿಯನ್ನು ಕಚೇರಿಗೆ ಕಳುಹಿಸುವಂತೆ ಬಾಗಲೂರು, ಪೋಲೀಸ್ ಠಾಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಎಫ್ಐಆರ್ ಪ್ರತಿ ಇದೀಗ ಸಚಿವಾಲಯದ ಕಚೇರಿಗೆ ತಲುಪಿರುತ್ತದೆ.
ಇದೇ ಅಧಿಕಾರಿ ಎಂ.ಜಿ. ಶಿವಣ್ಣ ಅವರು ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಂದರ್ಭದಲ್ಲೂ ಅಕ್ರಮ ಎಸಗಿರುವುದು, ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ ವಡ್ಡರಪಾಳ್ಯ ಗ್ರಾಮದ ಸರ್ವೇ ನಂ.7ರ ಜಮೀನುಗಳಿಗೆ ಸಂಬಂಧಿಸಿದಂತೆ ಅಂದಿನ ಉಪವಿಭಾಗಾಧಿಕಾರಿಯಾಗಿದ್ದ ಎಂ.ಜಿ. ಶಿವಣ್ಣ ಅವರು ಆದೇಶ ಸಂಖ್ಯೆ.ಆರ್.ಎ(ಎಸ್)/229/2021 ಅನ್ನು ದಿನಾಂಕ 30-03-2021 ರಂತೆ ಖಾತೆಯನ್ನು ಸರ್ಕರದ ಹೆಸರಿನಿಂದ ತೆಗೆದು ಕೆ.ಎಸ್. ಗಿರಿಧರ್ ಬಿನ್ ಕೆ.ಎಲ್.ಸ್ವಾಮಿ ರವರ ಹೆಸರಿಗೆ ಬದಲಾವಣೆ ಮಾಡಿರುತ್ತಾರೆ. ಅಲ್ಲದೆ, ಉತ್ತರಹಳ್ಳಿ ಹೋಬಳಿ ವಡ್ಡರಪಾಳ್ಯ ಗ್ರಾಮದ ಸರ್ವೇ ನಂ 7ರ ಜಮೀನುಗಳಿಗೆ ಕಡತ ಸಂಖ್ಯೆ. ಆರ್.ಎ(ಎಸ್)/229/2021 ಸೃಷ್ಟಿತ ದಾಖಲೆಯಾಗಿದ್ದು, ಮೂಲ ಕಡತವು ಕಛೇರಿಯಲ್ಲಿ ಲಭ್ಯವಿರುವುದಿಲ್ಲವೆಂದು ತಿಳಿದುಬಂದಿರುತ್ತದೆ.
ಜನರಿಗೆ ಹಾಗೂ ಸರ್ಕಾರಕ್ಕೆ ಪ್ರಾಮಾಣಿಕ ಸೇವೆ ಸೇವೆ ನೀಡಬೇಕಾದ ಅಧಿಕಾರಿಗಗಳು ಇಂತಹ ಅಕ್ರಮಗಳಲ್ಲಿ ಭಾಗವಹಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಎಂ.ಜಿ ಶಿವಣ್ಣ ಅವರು ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 164ರ ಕಲಂ 192(ಎ) ಅಡಿ ಮತ್ತೊಂದು ಪ್ರಕರಣ ದಾಖಲು ಮಾಡಬೇಕು. ಹಾಗೂ ಅಕ್ರಮದಲ್ಲಿ ಭಾಗೀದಾರರಾದ ಕೆ.ಎಲ್ ಸ್ವಾಮಿ ಎಂಬವರ ವಿರುದ್ಧವೂ ಕಲಂ 2(ಬಿ) ಅಡಿ ಪ್ರಕರಣ ದಾಖಲಿಸಿ ಸಮಗ್ರ ವರದಿಯನ್ನು ಸಲ್ಲಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಗೋಮಾಳ ಜಮೀನು ಕಬಳಿಸಿದ ಮಹಿಳೆಗೂ ಜೈಲು
ಗೋಮಾಳ ಜಮೀನು ಕಬಳಿಸಿದ ಮಹಿಳೆಯೊಬ್ಬರಿಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಲಕ್ಷ್ಮಮ್ಮ ಎಂಬ ಮಹಿಳೆ ಶಿಕ್ಷೆಗೊಳಗಾದವರು.
ಗಿರಗೂರು ಗ್ರಾಮದ ಸರ್ವೇ ನಂ.33 ರ ಸರ್ಕಾರಿ ಗೋಮಾಳದ ಒಂದು ಎಕರೆ ಭೂಮಿಯನ್ನು ಇವರು ತಂತಿಬೇಲಿ ನಿರ್ಮಿಸಿ ಅತಿಕ್ರಮಿಸಿದ್ದರು. ಈ ಆರೋಪದ ಮೇಲೆ ಬೈಲುಕುಪ್ಪೆ ಪೊಲೀಸರು ಲಕ್ಷಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೀಗಾಗಿ ಈ ಪ್ರಕರಣವನ್ನು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಸವರಾಜ ಅಂದಾನಗೌಡ ಪಾಟೀಲ್, ನ್ಯಾಯಿಕ ಸದಸ್ಯರಾದ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ಅವರಿದ್ದ ಪೀಠ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲಕ್ಷ್ಮಮ್ಮ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಲ್ಲದೆ, ಲಕ್ಷ್ಮಮ್ಮ ಅವರು ಕಬಳಿಸಿದ್ದ ಒಂದು ಎಕರೆ ಸರಕಾರಿ ಗೋಮಾಳ ಜಮೀನನ್ನು ಸರಕಾರಕ್ಕೆ ಪಡೆಯುವಂತೆ ಪಿರಿಯಾಪಟ್ಟಣ ತಹಸೀಲ್ದಾರ್ ಗೆ ನಿರ್ದೇಶನ ನೀಡಿದೆ.
ಈ ಮೂಲಕ ಸರ್ಕಾರಿ ಜಮೀನನ್ನು ಲಪಟಾಯಿಸಲು ಯತ್ನಿಸುವ ಖಾಸಗಿ ವ್ಯಕ್ತಿಗಳು ಮತ್ತು ಭೂ-ಮಾಫಿಯಾದವರಿಗೂ ಕಟು ಎಚ್ಚರಿಕೆ ರವಾನಿಸಲಾಗಿದೆ. ಅಲ್ಲದೆ, ಬೆಂಗಳೂರು ವಲಯದಲ್ಲಿ ಈಗಾಗಲೇ ಇಲಾಖೆ ಭೂ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದನ್ನು ಈ ಮೂಲಕ ಮತ್ತೊಮ್ಮೆ ಖಚಿತಪಡಿಸುತ್ತಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications