Bengaluru Stray Dog: ಬೆಂಗಳೂರಿನಲ್ಲಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಚುರುಕು: ಮಹತ್ವದ ಮಾಹಿತಿ ಹಂಚಿಕೊಂಡ ಜಿಬಿಎ
Bengaluru Stray Dog: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ABC ಕಾಯಿದೆ 2023 ಅನ್ವಯ ಶಸ್ತ್ರಚಿಕಿತ್ಸೆಯ ನಂತರ ಬೀದಿ ನಾಯಿಗಳನ್ನು ಅದೇ ಸ್ಥಳದಲ್ಲಿ ಬಿಡುಗಡೆ ಮಾಡುವ ಬಗ್ಗೆ ಬೆಂಗಳೂರು ಉತ್ತರ ನಗರ ಪಾಲಿಕೆಯು ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಜನಸಂಖ್ಯೆ ನಿಯಂತ್ರಣ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ / Animal Birth Control (ABC) ಕಾರ್ಯಕ್ರಮವನ್ನು ABC ಕಾಯಿದೆ 2023 ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಬೀದಿ ನಾಯಿಗಳನ್ನು ಮಾನವೀಯ ರೀತಿಯಲ್ಲಿ ಹಿಡಿದು (Humane Capture) ಅರ್ಹ ಪಶುವೈದ್ಯರಿಂದ ಶಸ್ತ್ರಚಿಕಿತ್ಸೆ (Sterilization) ಹಾಗೂ ರೇಬೀಸ್ ಲಸಿಕೆ (Anti-Rabies Vaccination) ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ನಾಯಿಗಳಿಗೆ ಅಗತ್ಯವಾದ ಆರೈಕೆ ಮತ್ತು ಚೇತರಿಕೆ (Post-Operative Care) ಒದಗಿಸಿ ನಂತರ ನಿಯಮಾನುಸಾರ ಮರುಬಿಡುಗಡೆ ಮಾಡಲಾಗುತ್ತದೆ.

ಅದೇ ಸ್ಥಳದಲ್ಲಿ ನಾಯಿಗಳ ಮರುಬಿಡುಗಡೆ
ABC ಕಾಯಿದೆ 2023ರ ನಿಯಮಾನುಸಾರ ಶಸ್ತ್ರಚಿಕಿತ್ಸೆಗೊಂಡ ಬೀದಿ ನಾಯಿಗಳನ್ನು ಅವುಗಳನ್ನು ಹಿಡಿದ ಮೂಲ ಸ್ಥಳದಲ್ಲಿಯೇ (Original Location) ಮರುಬಿಡುಗಡೆ ಮಾಡುವುದು ಕಡ್ಡಾಯವಾಗಿದೆ. ಈ ಕ್ರಮವನ್ನು ಕೆಳಕಂಡ ಕಾರಣಗಳಿಂದ ಅನುಸರಿಸಲಾಗುತ್ತದೆ.
1. ಪ್ರದೇಶದ ಪರಿಸರ ಸಮತೋಲನ ಕಾಪಾಡಲು
2. ಇತರ ಆಕ್ರಮಣಕಾರಿ ನಾಯಿಗಳ ಪ್ರವೇಶವನ್ನು ತಡೆಯಲು
3. ನಾಯಿಗಳ ಪ್ರದೇಶಾಧಾರಿತ ಸ್ವಭಾವ (Territorial Nature) ಗಮನದಲ್ಲಿಡಲು
4. ಮಾನವ-ನಾಯಿ ಸಂಘರ್ಷವನ್ನು ಕಡಿಮೆ ಮಾಡಲು
ಸಾರ್ವಜನಿಕರಲ್ಲಿ ಪಾಲಿಕೆ ಮನವಿ
ಶಸ್ತ್ರಚಿಕಿತ್ಸೆಗೊಂಡು ಕಿವಿಯಲ್ಲಿ ಗುರುತು (Ear Notch) ಹೊಂದಿರುವ ಬೀದಿ ನಾಯಿಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಇಂತಹ ನಾಯಿಗಳಿಗೆ ಹಾನಿ ಮಾಡುವುದು ಅಥವಾ ಬೇರೆ ಸ್ಥಳಕ್ಕೆ ಕೊಂಡೊಯ್ಯುವುದು ಕಾನೂನುಬಾಹಿರವಾಗಿದೆ. ನಾಗರಿಕರು ಸಹಕರಿಸಿ ಪಾಲಿಕೆಯ ABC ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮನವಿ ಮಾಡಿದ್ದಾರೆ.
ಯಾವುದೇ ದೂರು / ಮಾಹಿತಿಗಾಗಿ: ಸಹಾಯವಾಣಿ: 1533
ಇಮೇಲ್: [email protected]
ಕಚೇರಿ: ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸಂಪರ್ಕಿಸಬಹುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ: ರಸ್ತೆ ಅಗಲೀಕರಣ
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮೀಸಲಿರಿಸಿದ್ದ ಅಂದಾಜು 1,707.51 ಚದರ ಮೀಟರ್ ಆರ್.ಡಿ.ಸ್ವತ್ತುಗಳನ್ನು ನಗರ ಪಾಲಿಕೆ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಐಟಿಪಿಎಲ್ ಮುಖ್ಯರಸ್ತೆಯನ್ನು ಪರಿಷ್ಕೃತ ಮಹಾಯೋಜನೆ -2015 ರಂತೆ 150 ಅಡಿ ಅಗಲದ ರಸ್ತೆ ಅಗಲೀಕರಣಗಾಗಿ ಮೀಸಲಿರಿಸಿದ್ದ ಆರ್.ಡಿ ಸ್ವತ್ತುಗಳನ್ನು ನಗರ ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ತಿಳಿಸಿದ್ದಾರೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾರ್ಯಕ್ಕಾಗಿ ಕಾಯ್ದಿರಿಸುವ ಪರಿತ್ಯಾಜನ ಪತ್ರ ಆಗಿರುವ ಸ್ವತ್ತುಗಳನ್ನು ನಗರ ಪಾಲಿಕೆ ವಶಕ್ಕೆ ಪಡೆಯುವಂತೆ ಸಂಭದಪಟ್ಟ ವಿಭಾಗಗಳ ಕಾರ್ಯಪಾಲಕ ಎಂಜಿನಿಯರರು, ಸಹಾಯಕ ನಿರ್ದೇಶಕರು ನಗರ ಯೋಜನೆ, ಸಹಾಯಕ ಕಾರ್ಯಪಾಲಕ ಎಂಜಿನಿಯರರು ಭೂಸ್ವಾಧೀನ ಮತ್ತು ಟಿ.ಡಿ.ಆರ್ ಹಾಗೂ ಸರ್ವೇರ್‌ಗಳನ್ನು ಒಳಗೊಂಡ ತಂಡ ರಚಿಸಿದ್ದು ಅದರಂತೆ ಇಂದು ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಆರ್.ಡಿ.ಸ್ವತ್ತುಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಆಯುಕ್ತರು ವಿವರಿಸಿದ್ದಾರೆ.
ವಶಕ್ಕೆ ಪಡೆಯಲಾದ ಆರ್.ಡಿ. ಸ್ವತ್ತುಗಳ ವಿವರಗಳು
1. ರೆಗುಲಾಸ್ ಡೆವೆಲಪರ್ (ಹೆಚ್.ಎಸ್.ಬಿ.ಸಿ ಬ್ಯಾಂಕ್) ಐಟಿಪಿಎಲ್ ಮುಖ್ಯರಸ್ತೆ, ಸುಮಾರು 500.28 ಚದರ ಮೀಟರ್ ಸ್ವತ್ತು.
2. ಎಲೆಗಂಟ್ ಪ್ರಾಪರ್ಟೀಸ್ (ಓಝೋನ್ ಐಕಾನ್) ಐಟಿಪಿಎಲ್ ಮುಖ್ಯರಸ್ತೆ, ಸುಮಾರು 606.23 ಚದರ ಮೀಟರ್ ಸ್ವತ್ತು.
3. ಐಟಿಪಿಎಲ್ ಮುಖ್ಯರಸ್ತೆ, ಸುಮಾರು 601.00 ಚದರ ಮೀಟರ್ ಸ್ವತ್ತು. ಒಟ್ಟಾರೆ 1707.51 ಚದರ ಮೀಟರ್ ಆರ್.ಡಿ.ಸ್ವತ್ತುಗಳನ್ನು ನಗರ ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ವಶಕ್ಕೆ ಪಡೆದ ಆರ್.ಡಿ. ಸ್ವತ್ತುಗಳು ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಸೇರಿದ ಸ್ವತ್ತುಗಳಾಗಿದ್ದು, ರಸ್ತೆ ಅಗಲೀಕರಣಕ್ಕೆ ಕಾಯ್ದಿರಿಸಲಾಗಿದೆ. ಈ ಸ್ವತ್ತುಗಳನ್ನು ಅತಿಕ್ರಮಣವಾಗದಂತೆ ತಡೆಯಲು ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುವರೆಗೂ ನಗರ ಸಂಚಾರ ದಟ್ಟಣೆ ತಗ್ಗಿಸುವ ದೃಷ್ಟಿಯಿಂದ ಪೇ-ಪಾರ್ಕಿಂಗ್ ಸೌಲಭ್ಯಕ್ಕಾಗಿ ಬಳಸಲು ಇರುವ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಿ.ಎಸ್.ರಮೇಶ್ ಅವರು ತಿಳಿಸಿದ್ದಾರೆ.
-
ಬೆಂಗಳೂರು ಹೆಬ್ಬಾಳದ ಮೆಟ್ರೋ ಏಕೀಕೃತ ಸಾರಿಗೆ: 55 ಎಕರೆ ಭೂ ವಿವಾದ - ಸಿಬಿಐ ತನಿಖೆಗೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications