'ಬೆಂಗಳೂರು ಐಟಿಇ.ಬಿಜ್' ಮಹಾಮೇಳ ಡಿಸೆಂಬರ್ 8-11ರವರೆಗೆ
ಬೆಂಗಳೂರು, ನವೆಂಬರ್, 07: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮಹಾಮೇಳವಾದ 'ಬೆಂಗಳೂರು ಐಟಿಇ.ಬಿಜ್' ಡಿಸೆಂಬರ್ 8 ರಿಂದ 11ರವರೆಗೆ ನಗರದ ಲಲಿತ್ ಆಶೋಕ ಹೊಟೆಲ್ ಆವರಣದಲ್ಲಿ ಎಸ್ ಟಿಪಿಐ ಸಹಯೋಗದಲ್ಲಿ ನಡೆಯಲಿದೆ.
'ಬೆಂಗಳೂರು ಐಟಿಇ ಬಿಜ್ 2015' ಕಾರ್ಯಸೂಚಿ ಬಿಡುಗಡೆಗೊಳಿಸಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ ಅವರು, 'ರಾಜ್ಯದ ಸಚಿವ ಸಂಪುಟ ಹೊಸ ನವ ಉದ್ದಿಮೆ ನೀತಿಗೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸ್ಟಾರ್ಟ್ ಅಪ್ ಅನುಷ್ಠಾನ ಸಮಿತಿ ರಚಿಸಲಾಗುತ್ತಿದೆ' ಎಂದು ಹೇಳಿದರು.[ಟಿಸಿಎಸ್, ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!]

ಬೆಂಗಳೂರು ಐಟಿಇ.ಬಿಜ್ ಮಹಾಮೇಳದಲ್ಲಿ ಭಾರತದ ಸಂಸ್ಥೆಗಳೂ ಸೇರಿದಂತೆ ವಿದೇಶಗಳ 100ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳ ಮಳಿಗೆಗಳು ಬರಲಿವೆ. 1000ಕ್ಕಿಂತ ಹೆಚ್ಚು ಮಾಹಿತಿ ತಂತ್ರಜ್ಞಾನ ಪರಿಣಿತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ತಂತ್ರಜ್ಞಾನ ಹಳ್ಳಿಗರಿಗೆ ಹಾಗೂ ಸಮಾಜದ ಕಟ್ಟಕಡೆ ವ್ಯಕ್ತಿಗೆ ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ. ಗ್ರಾಮಗಳನ್ನು ಹೊರತುಪಡಿಸಿ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ತಂತ್ರಜ್ಞಾನವನ್ನು ಹಳ್ಳಿಗಳಿಗೆ ತಲುಪಿಸಬೇಕು. ಗ್ರಾಮೀಣ ಜನ ಕೃಷಿ ಮುಂದುವರೆಸಬೇಕಾದರೆ 'ಸ್ಮಾರ್ಟ್ ವಿಲೇಜ್' ಅಭಿವೃದ್ಧಿಪಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.[ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?]
ಪ್ರತಿಯೊಂದು ಕಂಪನಿಗಳು ತಮ್ಮ ಲಾಭಾಂಶದಲ್ಲಿ ಶೇ 2ರಷ್ಟು ಮೊತ್ತವನ್ನು ಸಾಮಾಜಿಕ ಹೊಣೆಗಾರಿಕೆಗೆ ಮೀಸಲಿಡುತ್ತವೆ. ಈ ಮೊತ್ತದ ಸಿಂಹಪಾಲನ್ನು 'ಸ್ಮಾರ್ಟ್ ವಿಲೇಜ್' ಮಾಡುವಲ್ಲಿ ಸಿಎಸ್ಆರ್ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಪಾಟೀಲ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಕರ್ನಾಟಕ ವಿಶನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಎಸ್ಟಿಪಿಐ ನಿರ್ದೇಶಕ ಪಿ ಕೆ ದಾಸ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ಮಂಜುಳಾ, ಕೆಬಿಟ್ಸ್ ವ್ಯವಸ್ಥಾಪಕ ನಿರ್ದೇಶಕಿ ತನುಶ್ರೀ ದೇಬ್ ಬರ್ಮಾ, ನ್ಯಾಸ್ಕಾಂ ದಕ್ಷಿಣ ವಿಭಾಗೀಯ ಮುಖ್ಯಸ್ಥ ಅಶೋಕ ಪಾಮಿಡಿ ಹಾಜರಿದ್ದರು.












Click it and Unblock the Notifications