Bengaluru Startup: ಬೋನಸ್ - ಸಂಬಳಕಲ್ಲ ಈ ಕಾರಣಕ್ಕೆ ರಜೆ ದಿನ ಭಾನುವಾರವೂ ಉದ್ಯೋಗಿಗಳು ಕೆಲಸ ಮಾಡ್ತಿದ್ದಾರೆ: ವೈರಲ್ ಪೋಸ್ಟ್
ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಬ್ಯಾಲೆನ್ಸ್ ಇರಬೇಕು. ಜೀವಿಸುವುದಕ್ಕಾಗಿ ಕೆಲಸ ಮಾಡಬೇಕು ಕೆಲಸ ಮಾಡುವುದಕ್ಕೋಸ್ಕರ ಜೀವಿಸಬಾರದು ಎನ್ನುವುದು ಹೊಸ ತಲೆಮಾರಿನ ಮಾತು. ಅನವಶ್ಯಕವಾಗಿ ಕಂಪನಿಗಳಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದನ್ನು ಈಗೆಲ್ಲ ಯಾರೂ ಒಪ್ಪುವುದಿಲ್ಲ. ಹೆಚ್ಚು ಸಮಯ ಕಂಪನಿಯಲ್ಲಿ ಕಳೆಯುವುದರಿಂದ ಹೆಚ್ಚು ಪ್ರೊಡೆಕ್ಟಿವಿಟಿ ಅಥವಾ ಕೆಲಸ ಜಾಸ್ತಿ ಮಾಡುತ್ತಾರೆ ಎಂದು ನಂಬುವ ಸಮಯವೂ ಸಹ ಹೋಗಿ ಆಗಿದೆ. ಆದರೆ ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒವೊಬ್ಬರು ತಮ್ಮ ಕಂಪನಿಯಲ್ಲಿ ಉದ್ಯೋಗಿಗಳು ತುಂಬಾ ಸಮಯ ಇರುತ್ತಾರೆ. ಈ ರೀತಿ ಇರುವುದಕ್ಕೆ ಅಥವಾ ಹೆಚ್ಚುವರಿ ಸಮಯ ಕಳೆಯುವುದಕ್ಕೆ ಹೆಚ್ಚುವರಿ ಹಣ ಅಥವಾ ಬೋನಸ್ ಸಹ ಕಾರಣವಲ್ಲ ಅಂತಲೂ ಸಹ ಹೇಳಿದ್ದಾರೆ. ಇದೀಗ ಸಿಇಒ ಅವರ ಪೋಸ್ಟ್ ವೈರಲ್ ಆಗುತ್ತಿದೆ.
ಬೆಂಗಳೂರಿನ ಸ್ಟಾರ್ಟ್ಅಪ್ ಸಿಇಒ ಒಬ್ಬರು ತಮ್ಮ ಉದ್ಯೋಗಿಗಳು ಹಣ ಅಥವಾ ಬೋನಸ್‌ಗಳಿಗೆ ಹೊರತಾಗಿ ರಾತ್ರಿ ಹೆಚ್ಚು ಸಮಯ ಮತ್ತು ರಜೆ ದಿನವಾದ ಭಾನುವಾರವೂ ಸೇರಿದಂತೆ ಹೆಚ್ಚುವರಿ ಕೆಲಸವನ್ನು ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಈ ರೀತಿ ಉದ್ಯೋಗಿಗಳು ಕಂಪನಿಯಲ್ಲಿ ಯಾಕೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನೂ ಅವರು ವಿವರಿಸಿದ್ದಾರೆ. ರೆಫರ್‌ರಶ್ ಎನ್ನುವ ಸ್ಟಾರ್ಟ್ ಅಪ್‌ನ ಸಿಇಒ ಮತ್ತು ಸಹ ಸಂಸ್ಥಾಪಕರಾದ ವಿಕ್ರಮ್ ಪೈ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದು ಇದೀಗ ವೈರಲ್ ಆಗಿದೆ.

ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದ ಮಾಜಿ ಗ್ರಾಹಕರು ಸ್ಪರ್ಧಾತ್ಮಕ ಉತ್ಪನ್ನ ಪ್ರಾರಂಭಿಸಿದ ಬಳಿಕ, ತಮ್ಮ ತಂಡವು ಇನ್ನಷ್ಟು ಶ್ರಮ ಹಾಕುವುದಕ್ಕೆ ನಿರ್ಧರಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ತಂಡವನ್ನು ವೇಗವಾಗಿ ಕೆಲಸ ಮಾಡಲು ಒತ್ತಾಯಿಸಲು ಅವರು ಈಗಾಗಲೇ ಹಲವಾರು ಮಾರ್ಗಗಳನ್ನು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಆ ಪ್ರಯತ್ನಗಳು ಫಲ ಕೊಡಲಿಲ್ಲ. ಯಾವುದೂ ಪ್ರತಿಸ್ಪರ್ಧಿಯ ಮೇಲಿನ ಅವರ ಕೋಪದಷ್ಟು ಪರಿಣಾಮ ಬೀರಲಿಲ್ಲ ಎಂದು ವಿಕ್ರಾಮ್ ಅವರು ಹೇಳಿದ್ದಾರೆ.
Bengaluru Startup: ಮುಂದಿನ ಮೂರು ವಾರ ರಜೆ ಬೇಡ ಎಂದ ಉದ್ಯೋಗಿ!
ತಮ್ಮ ಕಂಪನಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ವಿಕ್ರಾಮ್ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಂಡವನ್ನು ಕೆಟ್ಟದಾಗಿ ನಡೆಸಿಕೊಂಡ ಗ್ರಾಹಕರು ನಂತರ ಸ್ಪರ್ಧಾತ್ಮಕ ಉತ್ಪನ್ನವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಇದು ಕಂಪನಿಯ ಉದ್ಯೋಗಿಗಳ ಕೋಪಕ್ಕೆ ಕಾರಣವಾಯಿತು. ನನ್ನ ತಂಡವನ್ನು ಕೆಟ್ಟದಾಗಿ ನಡೆಸಿಕೊಂಡ ನಮ್ಮ ಗ್ರಾಹಕರು ಸ್ಪರ್ಧಾತ್ಮಕ ಉತ್ಪನ್ನವನ್ನು ನಿರ್ಮಿಸಲು ನಿರ್ಧರಿಸಿದ್ದನ್ನೇ ಕಂಪನಿಯ ಉದ್ಯೋಗಿಗಳು ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ.
ಇದಕ್ಕೂ ಮೊದಲು ತಮ್ಮ ಉದ್ಯೋಗಿಗಳನ್ನು ಪ್ರೇರೇಪಿಸಲು ಹಲವು ಮಾದರಿಯ ಪ್ರಯತ್ನಪಟ್ಟಿದ್ದೆ. ಅವುಗಳಲ್ಲಿ ಬೋನಸ್‌ಗಳು, ಪ್ರೋತ್ಸಾಹ, ಡೆಡ್‌ಲೈನ್ ಹಾಗೂ ಕಂಪನಿಯಲ್ಲಿ ಉದ್ಯೋಗಿಗಳಿಗೆ ಪಾಲನ್ನು ನೀಡುವುದು / ಇಕ್ವಿಟಿ ಅಂಶವೂ ಸೇರಿವೆ. ಆದಾಗ್ಯೂ, ಪ್ರತಿಸ್ಪರ್ಧಿ ಕಂಪನಿಗೆ ಪ್ರತಿಕ್ರಿಯೆ ತುಂಬಾ ವಿಭಿನ್ನವಾಗಿತ್ತು. ಆದರೆ ಅದ್ಯಾವುದೂ ಮಾಡದ್ದನ್ನು ಈಗ ಪ್ರತಿಸ್ಪರ್ಧಿಯಿಂದ ಸಾಧ್ಯವಾಗುತ್ತಿದೆ. ತುರ್ತು ಪರಿಸ್ಥಿತಿ ಇಲ್ಲದಿದ್ದರೆ ಮುಂದಿನ ಮೂರು ವಾರಗಳವರೆಗೆ ಯಾವುದೇ ಭಾನುವಾರ ರಜೆ ತೆಗೆದುಕೊಳ್ಳುವುದಿಲ್ಲ ಎಂದು ಉದ್ಯೋಗಿಯೊಬ್ಬರು ಹೇಳಿರುವ ಸ್ಕ್ರೀನ್‌ಶಾಟ್ ಅನ್ನು ವಿಕ್ರಮ್ ಅವರು ತಮ್ಮ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Bengaluru Startup: ನೆಟ್ಟಿಗರು ಹೇಳಿದ್ದೇನು ?
ಪ್ರತಿಯೊಬ್ಬ ಮನುಷ್ಯನ ಸ್ವಭಾವವೂ ವಿಭಿನ್ನವಾಗಿರುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಾನು ಕೂಡ ಇದನ್ನು ಪ್ರಯತ್ನಿಸಿದೆ. ಆದರೆ ನನ್ನ ಉದ್ಯೋಗಿಗಳು ಆ ಸಮಯವನ್ನು ಅವರ ಉತ್ಪನ್ನದ ಮೇಲೆ DDoS ದಾಳಿ ನಡೆಸಲು ಬಳಸಿದರು ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು, ಇದು ನಿಜಕ್ಕೂ ಅರ್ಥವೇ ಆಗುತ್ತಿಲ್ಲ. ಒಬ್ಬರು ತಮ್ಮನ್ನು ರೆಫರ್ ಮಾಡಿದ ಸಂಸ್ಥೆಯೊಂದಿಗೆ ಕೆಟ್ಟದಾಗಿ ನಡೆದುಕೊಂಡು, ನಂತರ ಅದಕ್ಕೆ ಪೈಪೋಟಿ ನೀಡುವ ಉತ್ಪನ್ನವನ್ನೇ ಹೇಗೆ ತಯಾರಿಸಲು ಸಾಧ್ಯ, ಇದರಲ್ಲಿ ಯಾವ ತರ್ಕವಿದೆ ಇದು ನಿಜವಾದ ಘಟನೆ ಆಗಿದ್ದರೆ, ಸಂಸ್ಥೆಯ ಹೆಸರನ್ನು ಸ್ಪಷ್ಟವಾಗಿ ಹೇಳಿ ಎಂದೂ ಕೆಲವರು ಒತ್ತಾಯಿಸಿದ್ದಾರೆ.
A customer of ours who treated my team terribly decided to go build a competing product.
— Vikram Pai (@vikpai) August 31, 2026
I’ve tried everything to make us move faster: bonuses, incentives, deadlines, equity.
Nothing has worked quite like this 😂😂
My team is so pissed off they’re voluntarily working nights… pic.twitter.com/zKUKTcUk0t


Click it and Unblock the Notifications
