ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

''ಭಾರತದ ನವೋದ್ಯಮದ ರಾಜಧಾನಿ ಬೆಂಗಳೂರು"

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಭಾರತದ ನವೋದ್ಯಮದ ರಾಜಧಾನಿಯೆಂದರೆ ಬೆಂಗಳೂರು ಎಂದು ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಇಂದು ಬಿಡುಗಡೆ ಮಾಡಿದ ಬೆಂಗಳೂರು ಇನ್ನೋವೇಷನ್ ರಿಪೋರ್ಟ್ ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. 10 ವರ್ಷಗಳ ಹಿಂದೆ ಪ್ರಾರಂಭವಾದ ನವೋದ್ಯಮ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸದ್ಯ ನಗರದಲ್ಲಿ ನಾಲ್ಕು ಸಾವಿರ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯಮಗಳ ಸ್ಥಾಪನೆಗೆ ಒತ್ತು ಕೊಡಲಾಗುತ್ತದೆ ಎಂದು ಐಟಿ,ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.

ಬಜೆಟ್ : ನವ್ಯೋದಯಕ್ಕೆ ಒತ್ತು, ಐಟಿ ಬಿಟಿಗೆ ಹೆಚ್ಚೇನು ಸಿಕ್ಕಿಲ್ಲಬಜೆಟ್ : ನವ್ಯೋದಯಕ್ಕೆ ಒತ್ತು, ಐಟಿ ಬಿಟಿಗೆ ಹೆಚ್ಚೇನು ಸಿಕ್ಕಿಲ್ಲ

ಭಾರತದ ಮಾಹಿತಿ ತಂತ್ರಜ್ಞಾನ, ನವೋದ್ಯಮ ಕ್ಷೇತ್ರಗಳಿಂದ ಸರಿ ಸುಮಾರು 5 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ, ಭಾರತದಲ್ಲಿ ಸದ್ಯ 39000ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳಿದ್ದು, ಕನಿಷ್ಟ 2 ಲಕ್ಷ ಮಂದಿಯ ನೇಮಕಾತಿಯನ್ನು ಈ ಕ್ಷೇತ್ರದಲ್ಲಿ ಕಾಣಬಹುದಾಗಿದೆ ಎಂದು ಇನ್ಫೋಸಿಸ್ ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ. ಮೋಹನದಾಸ್ ಪೈ ಅವರು ಅಭಿಪ್ರಾಯಪಟ್ಟಿದ್ದಾರೆ.

Bengaluru startup capital of India: Bengaluru Innovation Report 2019 Summary

ಬೆಂಗಳೂರು ಇನ್ನೋವೇಷನ್ ರಿಪೋರ್ಟ್ 2019 ಮುಖ್ಯಾಂಶ:
* 2010 ರಿಂದ ಇಲ್ಲಿ ತನಕ 9346 ಟೆಕ್ ಸ್ಟಾರ್ಟಪ್ ಗಳು ಬೆಂಗಳೂರಲ್ಲಿ ಆರಂಭವಾಗಿವೆ. ಕಳೆದ 4 ವರ್ಷಗಳಲ್ಲೇ 5,541 ನವೋದ್ಯಮ ಸಂಸ್ಥೆಗಳು ಆರಂಭವಾಗಿದ್ದು ಇದು ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.

ಕನ್ನಡ ಸಾಹಿತ್ಯ ಡಿಜಿಟಲೀಕರಣ ಮಾಡಲು ಸರ್ಕಾರ ಬದ್ಧ: ಅಶ್ವಥ್ ನಾರಾಯಣಕನ್ನಡ ಸಾಹಿತ್ಯ ಡಿಜಿಟಲೀಕರಣ ಮಾಡಲು ಸರ್ಕಾರ ಬದ್ಧ: ಅಶ್ವಥ್ ನಾರಾಯಣ

* ಕಳೆದ ಒಂದು ದಶಕದಲ್ಲಿ ಬೆಂಗಳೂರು ನವೋದ್ಯಮದಿಂದ 31ಬಿಲಿಯನ್ ಡಾಲರ್ ಗಳಿಸಿದೆ.
* 2016ರಿಂದ ಇಲ್ಲಿ ತನಕ ದೆಹಲಿ ಹಾಗೂ ಮುಂಬೈ ಎರಡು ನಗರಕ್ಕೆ ಹರಿದು ಬಂದಿರುವ ಬಂಡವಾಳ ಒಳಹರಿವು ಕೂಡಿಸಿದರೂ ಬೆಂಗಳೂರಿಗೆ ಬಂದಿರುವ ಬಂಡವಾಳದ ಒಳಹರಿವು(20 ಬಿಲಿಯನ್ ಡಾಲರ್) ಅಧಿಕವಾಗಿದೆ.
* ಬೆಂಗಳೂರಿನಲ್ಲಿ 2010ರಿಂದ ಇಲ್ಲಿ ತನಕ ಶೇ 55ರಷ್ಟು ಡಿ ಪ್ಲಸ್ ಬಂಡವಾಳ ಹೂಡಿಕೆ ಕಂಡಿವೆ.
* ಆರೋಗ್ಯ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ನವೋದ್ಯಮಕ್ಕೂ ಹೂಡಿಕೆ ಸಿಕ್ಕಿದೆ.

English summary
Bengaluru startup capital of India: Here is Summary of the Bangalore Innovation Report jointly released by Accel Partners, 3one4 Capital, and IdeaSpring Capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X