ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎರಡನೇ ಬಾರಿ ಪ್ರತ್ಯಕ್ಷವಾದ ಚಿರತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಸಿಲಿಕಾನ್ ಸಿಟಿಯಲ್ಲಿ ಜನರನ್ನು ಚಿರತೆಯೊಂದು ಆಗಾಗ ಆತಂಕಕ್ಕೆ ದೂಡುತ್ತಿದೆ. ಇತ್ತೀಚಿಗಷ್ಟೇ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಘಟನೆ ಮಾಸುವ ಮೊದಲೇ ಅಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಸಮೀಪದಲ್ಲಿರುವ ಭೂತಾನಹಳ್ಳಿಯ ಮನೆಯೊಂದರ ಬಳಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದೆ. ಹೊರವಲಯದ ಪ್ರದೇಶದಲ್ಲಿ ಚಿರತೆಯು ರಾಜಾರೋಷವಾಗಿ ಓಡಾಡಿರುವ ದೃಶ್ಯವು ಕಂಡು ಬಂದಿದೆ.

ಬೆಂಗಳೂರು ಬಳಿ ಚಿರತೆ ಪ್ರತ್ಯಕ್ಷ, ಜನರ ಆತಂಕಬೆಂಗಳೂರು ಬಳಿ ಚಿರತೆ ಪ್ರತ್ಯಕ್ಷ, ಜನರ ಆತಂಕ

ಭೂತಾನಹಳ್ಳಿಯಲ್ಲಿರುವ ಪ್ರಸಾದ್ ಎಂಬುವವರ ಮನೆ ಸುತ್ತಲೂ ಓಡಾಡಿದ ಚಿರತೆಯು ಆಹಾರಕ್ಕೆ ಹೊಂಚು ಹಾಕಿತ್ತು. ಮನೆ ಪಕ್ಕದಲ್ಲಿಯೇ ನಿರ್ಮಾಣ ಮಾಡಿದ್ದ ಶೆಡ್ ನಲ್ಲಿ ಹಸುಗಳು ಮತ್ತು ನಾಯಿಯನ್ನು ಕಟ್ಟಿ ಹಾಕಲಾಗಿದ್ದು, ಅದರ ಬೀಗ ಹಾಕಿದ್ದರಿಂದ ಮನೆ ಸುತ್ತಲೂ ಓಡಾಡಿದ ಚಿರತೆಯು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ ಹೋಗಿದೆ.

Bengaluru: Silicone City People Worried after leopard sighting near Bannerghatta

ರಾತ್ರಿ 12.10 ಸುಮಾರಿಗೆ ಕಾಣಿಸಿಕೊಂಡ ಚಿರತೆ:
ಬೆಂಗಳೂರು ಬನ್ನೇರುಘಟ್ಟದ ಹೊರವಲಯದಲ್ಲಿ ಇರುವ ಭೂತಾನಹಳ್ಳಿಯ ಪ್ರಸಾದ್ ಎಂಬುವವರ ಮನೆ ಆವರಣದಲ್ಲಿ ಮಧ್ಯರಾತ್ರಿ 12.10 ಗಂಟೆಗೆ ಚಿರತೆ ಪ್ರತ್ಯಕ್ಷವಾಗಿದೆ. ಕಾಂಪೌಂಡ್ ಹಾರಿ ಬಂದ ಚಿರತೆಯು ಮನೆ ಸುತ್ತಲೂ ರೌಂಡ್ ಹಾಕಿದೆ. ಸರಿಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮನೆಯ ಸುತ್ತಮುತ್ತಲಿನಲ್ಲಿ ಚಿರತೆಯು ಓಡಾಡಿದೆ. ಈ ಚಿರತೆ ಓಡಾಟದ ವಿಡಿಯೋ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೊಂದು ಘಟನೆಯು ಮನೆಯವರಷ್ಟೇ ಅಲ್ಲದೇ ಇಡೀ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.

ಹಿರಿಯ ಅರಣ್ಯಾಧಿಕಾರಿಯೊಬ್ಬರು ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಚಿರತೆಗಳು ಓಡಾಡಿದರೆ ತೊಂದರೆ ಇಲ್ಲ. ವಾಸ್ತವವಾಗಿ, ಇದು ಪ್ರಾಣಿಗಳು ಮತ್ತು ಆವಾಸಸ್ಥಾನವನ್ನು ಚೆನ್ನಾಗಿ ರಕ್ಷಿಸಬೇಕಾದ ಸೂಚನೆಯಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶವು ನಗರಗಳ ಆವಾಸಸ್ಥಾನದಲ್ಲಿ ಅತಿ ದೊಡ್ಡ ಅರಣ್ಯ ಪ್ರದೇಶವಾಗಿದೆ ಮತ್ತು ಕಾಡು ಪ್ರಾಣಿಗಳು 8-12 ಕಿಮೀ ನಡೆಯುವುದು ಸಾಮಾನ್ಯವಾಗಿದೆ. ನಾಗರಿಕರು ವಾಸ್ತವವಾಗಿ ನಿಗದಿತ ಸ್ಥಳದಿಂದ ದೂರವಿರಬೇಕು. ಆ ಪ್ರದೇಶವನ್ನು ನಗರ ಸ್ಥಳಗಳು ಅಥವಾ ಟ್ರೀ ಪಾರ್ಕ್‌ಗಳಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

English summary
Bengaluru: Silicone City People Worried after leopard sighting near Bannerghatta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X