Bengaluru: ಪತಿ ವಿರುದ್ಧ ಪತ್ನಿ ನಪುಂಸಕ ಆರೋಪ, ₹2,00,00,000ಗೆ ಬೇಡಿಕೆ: FIR ದಾಖಲು, ಆಗಿದ್ದೇನು?
ಬೆಂಗಳೂರು, ಸೆಪ್ಟಂಬರ್ 25: ಇವತ್ತಿನ ದಿನಮಾನಗಳಲ್ಲಿ ವೈವಾಹಿಕ ಸಂಬಂಧಕ್ಕೆ ಮೌಲ್ಯ ಕುಸಿಯುತ್ತಿದೆ. ಮದುವೆ ಕೆಲವೇ ದಿನಗಳಲ್ಲಿ ಮುರಿದು ಬೀಳುವ, ಬೀದಿ ರಂಪ ಮಾಡಿಕೊಳ್ಳುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇಂಥದ್ದೆ ಒಂದು ಪ್ರಕರಣ ಬೆಂಗಳೂರಿನ ಗೋವಿಂದರಾಜನಗರ ವ್ಯಾಪ್ತಿಯಲ್ಲಿ ನಡೆದಿದೆ. ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ. ನಪುಂಸಕತೆ ಬಗ್ಗೆ ಆರೋಪಿಸಿದ್ದಾರೆ ಎಂದು ತನ್ನ ಪತ್ನಿ ವಿರುದ್ಧ ಪತಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಗೋವಿಂದರಾಜನಗರದ ನಿವಾಸಿಯಾದ ದೂರುದಾರ ಪತಿಯು ಇದೇ ವರ್ಷ ಮೇ 5 ರಂದು ವಿವಾಹವಾಗಿದ್ದರು. ಮದುವೆಯ ಬಳಿಕ ಪತಿ ಮತ್ತು ಪತ್ನಿ ಇಬ್ಬರು ಬೆಂಗಳೂರಿನ ಸಪ್ತಗಿರಿ ಪ್ಯಾಲೇಸ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. 35 ವರ್ಷದ ಪತಿ ತನ್ನ ಮೇಲೆ ಪತ್ನಿ (29 ವರ್ಷ) ಕಿರುಕಳ ನೀಡಿದ್ದಾರೆ. ಸಂಬಂಧಿಕರಿಂದ ಹಲ್ಲೆ ಮಾಡಿಸಿದ್ದಾರೆ. ನನಗೆ ಮಕ್ಕಳು ಮಾಡುವ ಶಕ್ತಿ ಇಲ್ಲವೆಂದು ಆರೋಪಿ ಬರೋಬ್ಬರಿ 02 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿ ಆರೋಪವೇನು?
ಅಷ್ಟು ಮಾತ್ರವಲ್ಲದೇ ಮದುವೆಯಾದ ಮೂರು ತಿಂಗಳ ನಂತರ, ಅವರ ಪತ್ನಿ ತನ್ನನ್ನು ನಪುಂಸಕ ಎಂದು ಅನುಮಾನಿಸಿದ್ದರು. ಈ ಸಂಬಂಧ ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಒತ್ತಾಯಿಸಿದ್ದಳು. ನೀವು ವೈವಾಹಿಕ ಮತ್ತು ಸಂಸಾರಿಕ ಜೀವನ ಪೂರ್ಣಗೊಳ್ಳಿಸುತ್ತಿಲ್ಲ ಎಂದು ಆರೋಪಿಸಿದ್ದಳು.
ವೈದ್ಯರಿಂದ ದಂಪತಿಗೆ ಸಲಹೆ..!
ಬಳಿಕ ಆರೋಗ್ಯ ತಪಾಸಣೆ ನಡೆಸಿದಾಗ ವೈದ್ಯರು ಪತಿಯು ದೈಹಿಕವಾಗಿ ಲೈಂಗಿಕ ಚಟುವಟಿಕೆಗೆ ಸಮರ್ಥವಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಇಂತಹ ಸಮಯದಲ್ಲಿ ದಂಪತಿಗಳು ತಾಳ್ಮೆಯಿಂದಿರಲು ವೈದ್ಯರು ಸಲಹೆ ನೀಡಿದ್ದಾರೆ. ಇವೆಲ್ಲವು ಹಿಂಜರಿಕೆಗೆ ಮಾನಸಿಕ ಒತ್ತಡ ಕಾರಣವಾಗಬಹುದೆಂದು ಸಮಾಧಾನವಾಗಿಯೇ ನಮಗೆ ತಿಳಿಸಿದ್ದಾರೆ ಎಂದು ಪತಿ ವಿವರಿಸಿದ್ದಾರೆ. ಹೀಗಿದ್ದರು ತನ್ನ ಪತ್ನಿ ವಿನಾಃ ಕಾರಣ ಆರೋಪಿಸಿದ್ದಾರೆ.
ಮನೆಗೆ ಬಂದು ಪತಿ ಮೇಲೆ ಪತ್ನಿ ಸಂಬಂಧಿಕರ ಹಲ್ಲೆ
ವೈವಾಹಿಕ ಜವಾಬ್ದಾರಿಗಳನ್ನು ಪೂರೈಸಲು ವಿಫಲವಾದ ಕಾರಣ ಪರಿಹಾರವಾಗಿ 2 ಕೋಟಿ ರೂ.ಕೇಳುತ್ತಿದ್ದಂತೆ ಪತಿ ಮತ್ತು ಪತ್ನಿ ಮಧ್ಯ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಆಗಸ್ಟ್ 17 ರಂದು ಗೋವಿಂದರಾಜನಗರದಲ್ಲಿರುವ ತನ್ನ ಮನೆಗೆ ಪತ್ನಿ ಮತ್ತು ಆಕೆಯ ಸಂಬಂಧಿಕರು ಬಂದು ಹಲ್ಲೆ ಮಾಡಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ಮತ್ತು ಕಿರುಕುಳದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದೆ. ಪೊಲೀಸರು FIR ದಾಖಲಿದ್ದಾರೆ.












Click it and Unblock the Notifications